ಸಾರಾಂಶ
ಹೊಳೆನರಸೀಪುರ ತಾಲೂಕಿನ ಬನಶೆಟ್ಟಿಹಳ್ಳಿಕೊಪ್ಪಲು ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಕೆಟ್ಟು ೧೫ ದಿನ ಕಳೆದರೂ ರಿಪೇರಿಯಾಗದ ಕಾರಣದಿಂದ ಗ್ರಾಮಸ್ಥರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ಸಮಸ್ಯೆಗೆ ತಾತ್ಕಾಲಿಕವಾಗಿ ಪರಿಹಾರ ಕಲ್ಪಿಸುವ ಸಲುವಾಗಿ ಜಮೀನುಗಳಿಗೆ ಅಂತರ್‌ಜಲ ವ್ಯವಸ್ಥೆ ಮಾಡುವ ವಿದ್ಯುತ್ ಕಂಬದಿಂದ ವಿದ್ಯುತ್ ವ್ಯವಸ್ಥೆ ಮಾಡಿದ್ದಾರೆ, ಆದರೆ ಮೂರು ಫೇಸ್ ವಿದ್ಯುತ್ ಸ್ಥಗಿತಗೊಂಡ ನಂತರ ಮನೆಗಳಲ್ಲಿ ಸಿಂಗಲ್ ಲೈನ್(ಪ್ಯೂಸ್)ನಿಂದಾಗಿ ಯಾವುದೇ ಉಪಯೋಗವಿಲ್ಲದೇ ಪ್ರತಿನಿತ್ಯ ಸಮಸ್ಯೆಗೆ ಸಿಲುಕಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ತಾಲೂಕಿನ ಬನಶೆಟ್ಟಿಹಳ್ಳಿಕೊಪ್ಪಲು ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಕೆಟ್ಟು ೧೫ ದಿನ ಕಳೆದರೂ ರಿಪೇರಿಯಾಗದ ಕಾರಣದಿಂದ ಗ್ರಾಮಸ್ಥರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬನಶೆಟ್ಟಿಹಳ್ಳಿಕೊಪ್ಪಲಿನಲ್ಲಿ ವಿದ್ಯುತ್ ಪರಿವರ್ತಕ ಕೆಟ್ಟ ಕಾರಣದಿಂದ ಹೊಸ ಪರಿವರ್ತಕ ಅಳವಡಿಸಲು ಸ್ಥಳಾಂತರಿಸಿದ್ದಾರೆ, ಆದರೆ ಸ್ಥಳಾಂತರಿಸಿ ೧೫ ದಿನವಾದರೂ ಹೊಸ ಪರಿವರ್ತಕ ಅಳವಡಿಸಿಲ್ಲ. ಗ್ರಾಮಸ್ಥರ ಸಮಸ್ಯೆಗೆ ತಾತ್ಕಾಲಿಕವಾಗಿ ಪರಿಹಾರ ಕಲ್ಪಿಸುವ ಸಲುವಾಗಿ ಜಮೀನುಗಳಿಗೆ ಅಂತರ್‌ಜಲ ವ್ಯವಸ್ಥೆ ಮಾಡುವ ವಿದ್ಯುತ್ ಕಂಬದಿಂದ ವಿದ್ಯುತ್ ವ್ಯವಸ್ಥೆ ಮಾಡಿದ್ದಾರೆ, ಆದರೆ ಮೂರು ಫೇಸ್ ವಿದ್ಯುತ್ ಸ್ಥಗಿತಗೊಂಡ ನಂತರ ಮನೆಗಳಲ್ಲಿ ಸಿಂಗಲ್ ಲೈನ್(ಪ್ಯೂಸ್)ನಿಂದಾಗಿ ಯಾವುದೇ ಉಪಯೋಗವಿಲ್ಲದೇ ಪ್ರತಿನಿತ್ಯ ಸಮಸ್ಯೆಗೆ ಸಿಲುಕಿದ್ದಾರೆ. ಆದರೆ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿದ್ಯುತ್ ಇಲಾಖೆ ಸೂಕ್ತ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆಕ್ರೋಶ ಹಾಗೂ ಅಸಹನೆ ಮುಗಿಲು ಮುಟ್ಟಿದೆ.