ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ನಡೆಯುವ ಚಿತ್ರಕಲಾ ತರಗತಿಯ ೧೯ರಿಂದ ೭೫ ವಯೋಮಿತಿಯ ೨೩ ವಿದ್ಯಾರ್ಥಿಗಳ ಚಿತ್ರ ಕಲಾಕೃತಿಗಳ ಪ್ರದರ್ಶನ ‘ಪರಂಪರಾ’ವು ಇಂದಿನಿಂದ (ನ.16) ನಡೆಯಲಿದೆ.ಪ್ರದರ್ಶನವನ್ನು ಮಂಗಳೂರಿನ ಹಿರಿಯ ಕಲಾವಿದ, ಕರಾವಳಿ ಚಿತ್ರಕಲಾ ಚಾವಡಿಯ ಗೌರವಾಧ್ಯಕ್ಷ ಗಣೇಶ ಸೋಮಾಯಾಜಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಮಾಹೆಯ ನಿವೃತ್ತ ಉಪಾನ್ಯಾಸಕ ಕೆ.ಎಸ್. ಶೇರ್ವೆಗಾರ್, ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಮಾಹೆಯ ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್‌ನ ಪ್ರೊ. ಡಾ. ದೀಪಿಕಾ ಶೆಟ್ಟಿ ಆಗಮಿಸಲಿದ್ದಾರೆ.
ಕಲಾ ವಿದ್ಯಾರ್ಥಿಗಳಾದ ಜಿ.ಎಸ್.ಕೆ. ಭಟ್, ವಿಧು ಶಂಕರ್ ಬಾಬು, ಡಾ. ಸುಮಿತ್ ಕೌರ್, ರೇವತಿ ಡಿ., ಲತಾ ಭಾಸ್ಕರ್, ಮೀತಾ ಪೈ, ಅಶ್ವಿನ್ ಶೆಟ್ಟಿ, ಅರುಣಾ ನಾಯರ್ ಟಿ., ಸುಷ್ಮಾ ಪೂಜಾರಿ, ಸಂತೋಷ ಎಂ. ಭಟ್, ಯಶಾ ಭಟ್, ಪ್ರಸಾದ್ ಆರ್. ಆಚಾರ್ಯ, ಅನುಷಾ ಆಚಾರ್ಯ, ರಕ್ಷಿತಾ ಶೆಟ್ಟಿ, ಹರ್ಷಿತ್ ಶೆಟ್ಟಿ, ಸಂಜನಾ ಶ್ರೀನಿವಾಸ್, ರಕ್ಷತಾ ಬಿ., ಪ್ರಜ್ಞಾ ಆರ್. ಭಟ್, ಉಜ್ವಲ್, ಸುಷ್ಮಾ ಪ್ರಭು, ಅನಿರುಧ್ ಆನಂದ್, ಮನ್ವಿ ಪೈ, ಶರಣ್ ಆರ್. ಕುಮಾರ್ ಅವರ 27 ಚಿತ್ರಕಲಾಕೃತಿಗಳು ಪ್ರದರ್ಶನದಲ್ಲಿರುತ್ತವೆ.ಮಿಶ್ರ ಮಾಧ್ಯಮದಲ್ಲಿ ಕಪ್ಪು ಬಿಳುಪಿನಲ್ಲಿ ರಚಿಸಲಾಗಿರುವ ಬೃಂದಾವನ, ಉಗ್ರ ನರಸಿಂಹ, ನಾಗಾಯಕ್ಷಿ, ವ್ಹೀಲ್ಸ್ ಆಫ್ ಕೋನಾರ್ಕ್, ನಟರಾಜ, ಸರಸ್ವತಿ, ಹಂಪಿ ರಥ, ವಿಷ್ಣುದೇವ, ಗುರುವಾಯೂರ್ ಕಥಕ್ಕಳಿ, ವರಹಾರೂಪಿ, ದರ್ಪಣ ಸುಂದರಿ, ಪೆರ್ಣಂಕಿಲ ಗಣಪತಿ, ಲಕ್ಷ್ಮೀ ನರಸಿಂಹ, ಗಣೇಶ, ಪಿಲ್ಲರ್ ಆಫ್ ಟೆಂಪಲ್, ಮಾರಿ ಜಾತ್ರೆ, ರಾಮ ಮಂದಿರ, ಗಜಾಸುರ ಸಂಹಾರ, ಚಂದೇಶಾನುಗ್ರಹ, ಶಿವ ಪಾರ್ವತಿ, ಲಕ್ಷ್ಮಿನಾರಾಯಣ, ಕಾಳಿಂಗ ಮರ್ಧನ, ನರಸಿಂಹಾವತಾರ, ಚೆನ್ನಕೇಶವ, ಖಜರಾಹೋ ಟೆಂಪಲ್, ಜೈ ಭಜರಂಗಿ ಎಂಬ ಕಲಾಕೃತಿಗಳನ್ನು ನ.18ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿಡಲಾಗುತ್ತದೆ ಎಂದು ಕಲಾವಿದ, ಸಂಸ್ಥೆಯ ಮಾರ್ಗದರ್ಶಕ ಹರೀಶ್ ಸಾಗಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.