ಶಿಷ್ಟಾಚಾರದಲ್ಲಿ ಬರುವವರಿಂದ ಸಾಮಾನ್ಯ ಜನರಿಗೆ ತೊಂದರೆ

| Published : Oct 17 2025, 01:00 AM IST

ಶಿಷ್ಟಾಚಾರದಲ್ಲಿ ಬರುವವರಿಂದ ಸಾಮಾನ್ಯ ಜನರಿಗೆ ತೊಂದರೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಧ್ಯಮಗಳಲ್ಲಿ ಈ ಬಾರಿ ಹಾಸನಾಂಬೆ ದರ್ಶನ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಾಮಾನ್ಯ ಜನರು ಧರ್ಮದರ್ಶನದಲ್ಲೇ ನಿಂತು ಸುಲಭವಾಗಿ ದರ್ಶನ ಪಡೆಯಬಹುದು. ಇನ್ನು 1 ಸಾವಿರ ರು. ಹಾಗೂ 300 ರು.ಗಳ ಟಿಕೆಟ್‌ನಲ್ಲಿ ಹೋದವರು ಹೆಚ್ಚೆಂದರೆ ಒಂದು ಗಂಟೆಯಲ್ಲಿ ದರ್ಶನ ಪಡೆಯಬಹುದು ಎಂದೆಲ್ಲಾ ವರದಿ ಬಿತ್ತರಿದ್ದರಿಂದ ತಂಡೋಪತಂಡವಾಗಿ ಭಕ್ತರು ಬಂದಿದ್ದರಿಂದ ಗುರುವಾರ ಒಂದೇ ದಿನ ಲಕ್ಷಾಂತರ ಜನರು ಅವಕ್ಕಾದರು. ಇದರಿಂದ 1 ಸಾವಿರ ರುಪಾಯಿ ಟಿಕೆಟ್‌ನ ಸಾಲು ಬಿಎಂ ರಸ್ತೆಗೆ ಬಂದಿದ್ದರೆ, 300 ರು. ಗಳ ಸಾಲು ಹೊಸಲೈನ್‌ ರಸ್ತೆ ದಾಟಿ ಹಳೆ ಮಟನ್‌ ಮಾರ್ಕೆಟ್‌ ನಲ್ಲಿತ್ತು. ಇನ್ನು ಧರ್ಮದರ್ಶನದ ಸಾಲಂತೂ ಕೆಇಬಿ ಕಚೇರಿ ಬಿಟ್ಟು ಮುಂದಿತ್ತು. ಹಾಗಾಗಿ ಗುರುವಾರ ಭಕ್ತರು ದೇವಿಯ ದರ್ಶನ ಪಡೆಯಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ದಿನಕಳೆದಂತೆ ಹಾಸನಾಂಬೆಯ ದರ್ಶನಕ್ಕಾಗಿ ಬರುವವರ ಸಂಖ್ಯೆ ಹೆಚ್ಚುತ್ತಿದ್ದು, ಗುರುವಾರವಂತೂ ನಿರೀಕ್ಷಿಸಲು ಆಗದಷ್ಟು ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ 1 ಸಾವಿರ ರು, 300 ರು. ಟಿಕೆಟ್‌ನ ಸಾಲುಗಳು ಒಂದೂವರೆ ಕಿ.ಮೀ. ದೂರ ನಿಂತರೆ ಧರ್ಮದರ್ಶನದ ಸಾಲಂತೂ ಕಿಲೋಮೀಟರ್‌ ಗಟ್ಟಲೆ ನಿಂತಿತ್ತು. ಇದರ ಮಧ್ಯೆ ಶಿಷ್ಟಾಚಾರದ ಹೆಸರಿನಲ್ಲಿ ಬರುವವರು ಗರ್ಭಗುಡಿಯಲ್ಲಿ ನಿಂತು ಧರ್ಮದರ್ಶನದಲ್ಲಿ ಬರುವ ಎಷ್ಟೋ ಜನರ ದೇವರ ದರ್ಶನಕ್ಕೆ ತೊಡಕಾದರು.

ಮಾಧ್ಯಮಗಳಲ್ಲಿ ಈ ಬಾರಿ ಹಾಸನಾಂಬೆ ದರ್ಶನ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಾಮಾನ್ಯ ಜನರು ಧರ್ಮದರ್ಶನದಲ್ಲೇ ನಿಂತು ಸುಲಭವಾಗಿ ದರ್ಶನ ಪಡೆಯಬಹುದು. ಇನ್ನು 1 ಸಾವಿರ ರು. ಹಾಗೂ 300 ರು.ಗಳ ಟಿಕೆಟ್‌ನಲ್ಲಿ ಹೋದವರು ಹೆಚ್ಚೆಂದರೆ ಒಂದು ಗಂಟೆಯಲ್ಲಿ ದರ್ಶನ ಪಡೆಯಬಹುದು ಎಂದೆಲ್ಲಾ ವರದಿ ಬಿತ್ತರಿದ್ದರಿಂದ ತಂಡೋಪತಂಡವಾಗಿ ಭಕ್ತರು ಬಂದಿದ್ದರಿಂದ ಗುರುವಾರ ಒಂದೇ ದಿನ ಲಕ್ಷಾಂತರ ಜನರು ಅವಕ್ಕಾದರು. ಇದರಿಂದ 1 ಸಾವಿರ ರುಪಾಯಿ ಟಿಕೆಟ್‌ನ ಸಾಲು ಬಿಎಂ ರಸ್ತೆಗೆ ಬಂದಿದ್ದರೆ, 300 ರು. ಗಳ ಸಾಲು ಹೊಸಲೈನ್‌ ರಸ್ತೆ ದಾಟಿ ಹಳೆ ಮಟನ್‌ ಮಾರ್ಕೆಟ್‌ ನಲ್ಲಿತ್ತು. ಇನ್ನು ಧರ್ಮದರ್ಶನದ ಸಾಲಂತೂ ಕೆಇಬಿ ಕಚೇರಿ ಬಿಟ್ಟು ಮುಂದಿತ್ತು. ಹಾಗಾಗಿ ಗುರುವಾರ ಭಕ್ತರು ದೇವಿಯ ದರ್ಶನ ಪಡೆಯಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾಯಿತು.

ಇದರ ಮಧ್ಯೆ ಜಿಲ್ಲಾಡಳಿತದ ಶಿಷ್ಟಾಚಾರದಲ್ಲಿ ಬರುವ ಭಕ್ತರ ಸಂಖ್ಯೆ ಕೂಡ ಗುರುವಾರ ಹೆಚ್ಚಿದ್ದರಿಂದ ಸಾಮಾನ್ಯ ಜನರ ದರ್ಮದರ್ಶನಕ್ಕೆ ತೊಡಕಾಯಿತು. ಶಿಷ್ಟಾಚಾರದಡಿ ಬರುವವರ ಜತೆ ನಾಲ್ಕು ಜನರಿಗೆ ಮಾತ್ರ ಅವಕಾಶ ಎಂದು ಜಿಲ್ಲಾಡಳಿತ ಹೇಳಿತ್ತು. ಇಷ್ಟು ದಿನಗಳ ಕಾಲ ಹಾಗೆಯೇ ನಡೆಯಿತು. ಆದರೆ ಗುರುವಾರ ಶಿಷ್ಟಾಚಾರದಲ್ಲಿ ಬರುವವರ ಸಂಖ್ಯೆ ಹೆಚ್ಚಾಗಿದ್ದರ ಜತೆಗೆ ಅವರೊಂದಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಹೀಗೆ ಬಂದವರು ಗರ್ಭಗುಡಿಯಲ ಬಾಗಿಲಿಗೆ ಅಡ್ಡಲಾಗಿ ನಿಲ್ಲುತ್ತಿದ್ದರು. ಇದರಿಂದ ಧರ್ಮದರ್ಶನದಲ್ಲಿ ಬರುವ ಅದೆಷ್ಟೋ ಜನರಿಗೆ ದೇವಿಯ ದರ್ಶನವೇ ಸಿಗದಂತಾಯಿತು. ಇದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದರು. ಆಗ್ಗೆ ಒಂದಷ್ಟು ಸಮಯ ದೇವಾಲಯದೊಳಗೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಹಾಸನಾಂಬೆ ದೇವಿ ದರ್ಶನಕ್ಕಾಗಿ ದಿನೆ ದಿನೆ ಸಂಖ್ಯೆಯಲ್ಲಿ ಹೆಚ್ಚಾಗಿ ಗುರುವಾರದಂದು ಭಕ್ತಸಾಗರವೇ ಹರಿದು ಬಂದಿದ್ದು, ನಗರವೆಲ್ಲ ಭಕ್ತರ ಜಪಮಾಲೆಯಿಂದ ತುಂಬಿತ್ತು. ಸಾವಿರಾರು ಭಕ್ತರು ಸಾಲು ಸಾಲಾಗಿ ನಿಂತು ತಾಯಿಯ ದರ್ಶನ ಪಡೆಯಲು ತವಕಿಸುತ್ತಿದ್ದರು. ಭಕ್ತರಿಗೆ ಸುಗಮವಾಗಿ ದರ್ಶನ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಕಣಕ್ಕಿಳಿಯುವಂತಾಯಿತು. ಭಕ್ತರ ದಟ್ಟಣೆ ಹೆಚ್ಚಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಾವೇ ಖುದ್ದಾಗಿ ದೇವಾಲಯದ ಮುಂಭಾಗಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು. ಮೈಕ್ ಹಿಡಿದು ಸ್ವತಃ ಅನೌನ್ಸ್ ಮಾಡುತ್ತಾ, “ದೇವರನ್ನು ಬಾಗಿಲು ಬಳಿಯಿಂದಲೇ ನೋಡುತ್ತಾ ಹೋಗಿ. ಯಾರೂ ನಿಲ್ಲಬೇಡಿ, ಭಕ್ತರ ಸಂಖ್ಯೆ ತುಂಬಾ ಇದೆ. ಒಬ್ಬರು ನಿಂತರೆ ಎಲ್ಲರಿಗೂ ತೊಂದರೆ ಆಗುತ್ತದೆ. ಬೇಗ ಬೇಗ ಹೋಗಿ ದೇವರ ದರ್ಶನ ಪಡೆಯಿರಿ,” ಎಂದು ಭಕ್ತರಿಗೆ ಮನವಿ ಮಾಡಿದರು. ಭಕ್ತರ ಅಪಾರ ಸಂಖ್ಯೆಯಿಂದಾಗಿ ತಾತ್ಕಾಲಿಕವಾಗಿ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದ ಬಾಗಿಲು ಬಂದ್ ಮಾಡಲಾಗಿತ್ತು. ಇದರಿಂದ ನಿರಾಶರಾದ ಭಕ್ತರು ಅಲ್ಲಿಯೇ ಸಾಲಿನಲ್ಲಿ ನಿಂತು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ ಡಿಸಿ ಕೆ.ಎಸ್. ಲತಾಕುಮಾರಿ ತಕ್ಷಣ ಕ್ರಮ ಕೈಗೊಂಡು, ಸಿದ್ದೇಶ್ವರಸ್ವಾಮಿ ದೇವಾಲಯದ ಬಾಗಿಲು ತೆರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಲವೇ ಕ್ಷಣಗಳಲ್ಲಿ ದೇವಾಲಯದ ಬಾಗಿಲು ತೆರೆಯಲ್ಪಟ್ಟು ಭಕ್ತರಿಗೆ ಮತ್ತೆ ದರ್ಶನದ ಅವಕಾಶ ಕಲ್ಪಿಸಲಾಯಿತು. ಡಿಸಿಯ ಈ ತ್ವರಿತ ಕ್ರಮಕ್ಕೆ ಭಕ್ತರು ಸಂತೋಷ ವ್ಯಕ್ತಪಡಿಸಿ, ಆಡಳಿತದ ತ್ವರಿತ ಪ್ರತಿಕ್ರಿಯೆಯನ್ನು ಮೆಚ್ಚಿಕೊಂಡರು.

ಇನ್ನು ಒಂದು ಸಾವಿರ ಟಿಕೆಟ್ ಸಾಲು ಕೂಡ ದೊಡ್ಡದಾಗಿ ನೂಕು ನುಗ್ಗಲು ಉಂಟಾಯಿತು. ೩೦೦ ರು. ಟಿಕೆಟ್ ಸಾಲು ಬೃಹತ್ ಆಗಿತ್ತು. ಧರ್ಮದರ್ಶನ ಸಾಲು ಅತ್ಯಂತ ಉದ್ದವಾಗಿತ್ತು. ಗಣ್ಯರು ಬಂದಾಗ ಭಕ್ತರಿಗೆ ಸ್ವಲ್ಪ ಸಮಸ್ಯೆ ಉಂಟಾಯಿತು.

* ಬಾಕ್ಸ್‌................ ಜನರ ನಿರ್ವಹಣೆಗಾಗಿ ಮೈಕ್‌ ಹಿಡಿದ ಡಿಸಿ:ಭಕ್ತರ ಸಂಖ್ಯೆ ಹೆಚ್ಚಾಗಿ ಗೊಂದಲ ಉಂಟಾಗಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಾವೇ ಖುದ್ದಾಗಿ ದೇವಾಲಯದ ಮುಂಭಾಗ ನಿಂತು ಮೈಕ್ ಹಿಡಿದು ಅನೌನ್ಸ್‌ ಮಾಡಿ ಜನರನ್ನು ಶಾಂತಿಯುತವಾಗಿ ದೇವರ ದರ್ಶನ ಮಾಡಲು ಮನವಿ ಮಾಡಿದ ಪ್ರಸಂಗ ನಡೆಯಿತು.