ಒಳಮೀಸಲಾತಿ ತೀರ್ಪುನ್ನು ಯಥಾವತ್ತಾಗಿ ಜಾರಿಗೊಳಿಸಿ

| Published : Aug 06 2024, 12:41 AM IST

ಸಾರಾಂಶ

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಕುರಿತು ಕಾನೂನು ತಜ್ಞರಿಂದ ಅರಿವು ಮತ್ತು ಸಂವಾದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತುಮಕೂರು30 ವರ್ಷಗಳ ಕಾಲ ಸುಧೀರ್ಘ ಮಾದಿಗ ಸಮುದಾಯದ ಹೋರಾಟಕ್ಕೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿ ಜನಾಂಗದ ಮಾದಿಗ ಸಂಬಂಧಿಸಿದ ಸಮುದಾಯಕ್ಕೆ ಒಳ ಮೀಸಲಾತಿ ನೀಡುವಂತೆ ಮಹತ್ತರ ತೀರ್ಪು ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಆದಿ ಜಾಂಬವ ಮಹಾಮೈತ್ರಿ ಸಭಾದ ಅಧ್ಯಕ್ಷ ಪ್ರೊ..ಕೆ.ದೊರೈರಾಜ್‌ ಒತ್ತಾಯಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಆದಿ ಜಾಂಬವ ಮಹಾಮಾಯಿತ್ರಿ ಸಭಾ ವತಿಯಿಂದ ನಡೆದ ಪರಿಶಿಷ್ಟ ಜಾತಿ ವರ್ಗಗಳಲ್ಲಿ ಒಳ ಮೀಸಲಾತಿ ಜಾರಿ ಅಧಿಕಾರವನ್ನುರಾಜ್ಯ ಸರ್ಕಾರಗಳಿಗೆ ನೀಡಿರುವ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಕುರಿತು ಕಾನೂನು ತಜ್ಞರಿಂದ ಅರಿವು ಮತ್ತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರುಒಳ ಮೀಸಲಾತಿಗಾಗಿ ಮಾದಿಗ ಸಮುದಾಯವು ಸುಮಾರು ವರ್ಷಗಳ ಕಾಲ ತಾಲೂಕು ಜಿಲ್ಲೆ ಸೇರಿದಂತೆ ರಾಜ್ಯಮಟ್ಟಗಳಲ್ಲಿ ಪಾದಯಾತ್ರೆ ಪ್ರತಿಭಟನೆ ನಡೆಸಿದ ಫಲವಾಗಿ ಸುಪ್ರೀಂಕೋರ್ಟ್‌ ಮಹತ್ತರವಾದ ತೀರ್ಪು ಪ್ರಕಟಿಸಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತೀರ್ಪು ಸ್ವಾಗತಿಸಿರುವುದು ಶ್ಲಾಘನೀಯ. ಆದರೆ ತತಕ್ಷಣದಿಂದ ಈ ವರದಿಯ ಅಂಶವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಯಾವುದೇ ಸಬೂಬು ಹೇಳಬಾರದು ಎಂದು ಒತ್ತಾಯಿಸಿದರು.ಕಾನೂನು ತಜ್ಞ ಎಚ್ ವಿ ಮಂಜುನಾಥ್‌ ಅವರು ಮಾತನಾಡಿ ಸುಪ್ರೀಂಕೋರ್ಟ್ ಒಳ ಮೀಸಲಾತಿ ಪರವಾಗಿ ನೀಡಿರುವ ಕೋರ್ಟ್ ನ ಆದೇಶದ ಪ್ರತಿಯನ್ನು ಅಧ್ಯಯನ ಮಾಡಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ ಸೇರಿದಂತೆ ಏಳು ಸದಸ್ಯರ ಪೀಠ ವಿವಿಧ ರಾಜ್ಯಗಳ ಮೀಸಲಾತಿ ಪ್ರಕರಣಗಳನ್ನು ಅಧ್ಯಯನ ಮಾಡಿ ಪರಿಶಿಷ್ಟ ಜಾತಿ ಮಾದಿಗ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಸಂವಿಧಾನದ ಪರಿಚ್ಛೇದದ ಅನುಸಾರ ಪರಿಶಿಷ್ಠ ಜಾತಿಯಲ್ಲಿ ಹಿಂದುಳಿದ ಸಮುದಾಯಗಳಿಗೆ ಒಳ ಮೀಸಲಾತಿ ನೀಡಬೇಕೆಂಬುದು ಅಂಶವಿದ್ದು ಈ ದೆಸೆಯಲ್ಲಿ ಒಳ ಮೀಸಲಾತಿಯನ್ನುಕಲ್ಪಿಸಲಾಗಿದೆಎಂದು ವಿವಿಧ ನ್ಯಾಯಾಧೀಶರುಗಳ ವರದಿಯನ್ನ ಉಲ್ಲೇಖಿಸಿ ಸುಪ್ರೀಂಕೋರ್ಟ್ ನ ತೀರ್ಪಿನ ಬಗ್ಗೆ ಮಾಹಿತಿ ನೀಡಿದರು. ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ ಒಳಮಿಸಲಾತಿಗಾಗಿ ಅನೇಕ ಜನರು ಅರ್ಪಣೆ ಮಾಡಿಕೊಂಡಿದ್ದಾರೆ ಹೋರಾಟದಂತೆ ಈಗಲೂ ಅನೇಕ ಸಂಘ ಸಂಸ್ಥೆಗಳು ಚಳುವಳಿಗಳು ಒಂದಾಗಿ ಸುಪ್ರೀಂಕೋರ್ಟ್ ನ ತೀರ್ಪುನ್ನುಯಥಾವತ್ತಾಗಿಜಾರಿ ಮಾಡಬೇಕುಎಂದು ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರೇಷ್ಮೆಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ, ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್, ಡಾ. ಆರುಂಧತಿ, .ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಕೆಂಚಮಾರಯ್ಯ, ವೈದ್ಯರಾದ ಡಾ.ಬಸವರಾಜು, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡಿ.ಟಿ.ವೆಂಕಟೇಶ್‌ ಅವರು ಮಾತನಾಡಿದರು. ಸಭೆಯಲ್ಲಿ ಮುಖಂಡರಾದ ನರಸಿಂಹಯ್ಯ, ಪಿ.ಎನ್.ರಾಮಯ್ಯ, ಕೊಳಗೇರಿ ನರಸಿಂಹಮೂರ್ತಿ, ಮುಂತಾದವರು ಇದ್ದರು.

ಈ ಸಂದರ್ಭದಲ್ಲಿ ರೇಷ್ಮೆಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ, ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್, ಡಾ. ಆರುಂಧತಿ, .ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಕೆಂಚಮಾರಯ್ಯ, ವೈದ್ಯರಾದ ಡಾ.ಬಸವರಾಜು, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡಿ.ಟಿ.ವೆಂಕಟೇಶ್‌ ಅವರು ಮಾತನಾಡಿದರು. ಸಭೆಯಲ್ಲಿ ಮುಖಂಡರಾದ ನರಸಿಂಹಯ್ಯ, ಪಿ.ಎನ್.ರಾಮಯ್ಯ, ಕೊಳಗೇರಿ ನರಸಿಂಹಮೂರ್ತಿ, ಮುಂತಾದವರು ಇದ್ದರು.