ಗ್ಯಾನವಾಪಿಯಲ್ಲಿ ಪೂಜೆಗೆ ಅವಕಾಶ ವಿರೋಧಿಸಿ ಪ್ರತಿಭಟನೆ

| Published : Feb 09 2024, 01:48 AM IST

ಗ್ಯಾನವಾಪಿಯಲ್ಲಿ ಪೂಜೆಗೆ ಅವಕಾಶ ವಿರೋಧಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

1991ರ ಪ್ರಾರ್ಥನಾ ಸ್ಥಳದ ಕಾಯಿದೆ ಪ್ರಕಾರ 1947 ಆಗಸ್ಟ 15 ರಂದು ದೇಶದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಧಾರ್ಮಿಕ ಸ್ಥಳಗಳನ್ನು ಹೊರತುಪಡಿಸಿ ಯಥಾಸ್ಥಿಯಲ್ಲಿ ಮುಂದುವರೆಸಬೇಕೆಂದು ಯಾವುದೇ ರೀತಿಯ ವಿವಾದಗಳಿಗಾಗಲಿ ಮಧ್ಯಪ್ರವೇಶಕ್ಕೆ ಅವಕಾಶವಾಗಲಿ ಇಲ್ಲ

ಕನ್ನಡಪ್ರಭ ವಾರ್ತೆ ಬೆಳಗಾವಿ

ಉತ್ತರ ಪ್ರದೇಶದ ಗ್ಯಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆಗೆ ಅವಕಾಶ ಮಾಡಿದ ಕ್ರಮ ವಿರೋಧಿಸಿ ಎಸ್‌ಡಿಪಿಐ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.ಗ್ಯಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಮಾಡಿರುವ ಕ್ರಮ ಅತ್ಯಂತ ಆಘಾತಕಾರಿಯಾಗಿದೆ. 1991ರ ಪ್ರಾರ್ಥನಾ ಸ್ಥಳದ ಕಾಯಿದೆ ಪ್ರಕಾರ 1947 ಆಗಸ್ಟ 15 ರಂದು ದೇಶದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಧಾರ್ಮಿಕ ಸ್ಥಳಗಳನ್ನು ಹೊರತುಪಡಿಸಿ ಯಥಾಸ್ಥಿಯಲ್ಲಿ ಮುಂದುವರೆಸಬೇಕೆಂದು ಯಾವುದೇ ರೀತಿಯ ವಿವಾದಗಳಿಗಾಗಲಿ ಮಧ್ಯಪ್ರವೇಶಕ್ಕೆ ಅವಕಾಶವಾಗಲಿ ಇಲ್ಲ ಎಂದು ಆ ಕಾಯಿದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಕಾನೂನಿನ ಹೊರತಾಗಿಯಬ ಮಸೀದಿಯ ಮೇಲೆ ದುರುದ್ದೇಶ ಪೂರಿತ ವಿವಾದವನ್ನು ಸೃಷ್ಟಿಸಿ ಸಮುದಾಯಗಳ ನಡುವೆ ಧ್ವೇಷ ಸಂಘರ್ಷವನ್ನು ನಡೆಸುವ ಹುನ್ನಾರ ನಡೆಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.ವಾರಣಾಸಿಯ ಜಿಲ್ಲಾ ನ್ಯಾಯಾಧೀಶರು ತನ್ನ ನಿವೃತ್ತಿಗೆ ಒಂದು ದಿನಕ್ಕೆ ಮೊದಲು ತರಾತುರಿಯಲ್ಲಿ ಪೂಜೆಗೆ ಅವಕಾಶ ಕೊಡುವ ತೀರ್ಪು ನೀಡಿದ ಕ್ರಮವು ಅತ್ಯಂತ ಕಳವಳಕಾರಿಯಾಗಿದೆ. ಸುಮಾರು 400 ವರ್ಷಗಳಿಗೂ ಹಿಂದೆ ಸ್ಥಾಪಿಸಲ್ಪಟ್ಟ ಈ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡತ್ತ ಬರಲಾಗಿದೆ. ಕೇವಲ ರಾಜಕೀಯ ಅಧಿಕಾರವನ್ನು ಕಬಳಿಸುವ ಹುನ್ನಾರದ ಅಂಗವಾಗಿ ಮಸ್ಜೀದ್‌ ಮಂದಿರ ವಿವಾದವನ್ನು ಹುಟ್ಟಿ ಹಾಕಿದ ಶಕ್ತಿಗಳು ದೇಶದಲ್ಲಿ ಧ್ವೇಷ ಹಗೆ ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದರು.ಈ ಹಿಂದೆಯೂ ಬಾಬರಿ ಮಸೀದಿ ಮಂದಿರ ವಿವಾದವನ್ನು ಹುಟ್ಟು ಹಾಕಲಾಗಿ ದೇಶಾದ್ಯಂತ ಹತ್ಯಾಕಾಂಡ, ಧ್ವಂಸ, ರಕ್ತಪಾತವನ್ನು ನಡೆಸಿ ದ್ವೇಷದ ರಾಜಕೀಯನ್ನು ಇಡೀ ಜಗತ್ತಿಗೆ ಕಂಡಿದೆ. ಇದೀಗ ಮತ್ತೆ ಅದೇ ಹಾದಿಯಲ್ಲಿ ಗ್ಯಾನವಾಪಿ ವಿವಾದವನ್ನು ಹುಟ್ಟು ಹಾಕುವವರು ಎಷ್ಟೇ ಪ್ರಭಾವಿತರಾಗಿದ್ದರೂ ನ್ಯಾಯಾಲಯವು ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.1991ರ ಪ್ರಾರ್ಥನಾ ಸ್ಥಳದ ಕಾಯಿದೆ ಪ್ರಕಾರ ದೇಶಾದ್ಯಂತ ಎಲ್ಲ ಪ್ರಾರ್ಥನಾ ಮಂದಿರಗಳಿಗೆ ಸೂಕ್ತ ರಕ್ಷಣೆಯನ್ನು ಕೊಡಬೇಕು. ಯಥಾಸ್ಥಿ ಕಾಪಾಡಬೇಕು. ಗ್ಯಾನವಾಪಿ ಮಸೀದಿಯಲ್ಲಿ ಯಾವುದೇ ಕಾರಣಕ್ಕೂ ವಿವಾದಗಳನ್ನು ಹುಟ್ಟು ಹಾಕಲು ಬಿಡದೇ ಸಂಪೂರ್ಣವಾಗಿ ಮಸೀದಿ ಮಂಡಳಿ ಒಡೆತನಕ್ಕೆ ಬಿಟ್ಟುಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮಕ್ಸೂದ್‌ ಮಕಾನದಾರ, ಉಪಾಧ್ಯಕ್ಷ ಮೈನೋದ್ದಿನ್‌ ಮುಜಾವರ, ಪ್ರಧಾನ ಕಾರ್ಯದರ್ಶಿ ಮೋಜಮಜಾ ಮುಲ್ಲಾನಿ, ಕಾರ್ಯದರ್ಶಿ ಜಾಕೀರ್‌ ನಾಯಿಕವಾಡಿ, ಮುಜಫರ ಬಾಗವಾನ್‌ ಮೊದಲಾದವರು ಪಾಲ್ಗೊಂಡಿದ್ದರು.