ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ದೊರೆಯುವುದು ಎಂದು ತೋಲಗಿ - ಚಿಕ್ಕಲದಿನ್ನಿಯ ಶ್ರೀ ಅದೃಶಾನಂದ ಸ್ವಾಮಿಗಳು ಹೇಳಿದರು.
ಮಂಗಳವಾರ ಶಹಾಬಂದರ ಸರ್ಕಲ್ ಹತ್ತಿರ ಗುಡದೇರಿ ಪ್ರೀಮಿಯರ ಲೀಗ್ (ಜಿಪಿಎಲ್) ರಾಹುಲ ಅಣ್ಣಾ ಕ್ರಿಕೆಟ್ ಟ್ರೋಫಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಚಿವ ಸತೀಶ ಜಾರಕಿಹೊಳಿಯವರು ಗ್ರಾಮೀಣ ಭಾಗದ ಪ್ರತಿಭೆಗಳನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದರ ಜೊತೆಗೆ ವಿವಿಧ ರಂಗಗಳಲ್ಲಿ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿದ್ದಾರೆ. ವಿವಿಧ ಕ್ರೀಡೆ ಯಮಕನಮರಡಿ ಭಾಗ ಹಾಗೂ ಇತರ ಭಾಗಗಳಲ್ಲಿ ಆಯೋಜಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.ಸಾಹಿತಿಗಳು ಆರ್.ಎಸ್. ಪಂಗನ್ನವರ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲವು ಸಹಜ. ಪರಸ್ಪರ ಸಹಕಾರದ ಜೊತೆಗೆ ಆಟ ಆಡಬೇಕು. ಆಟಗಾರರು ಕ್ರೀಡಾಮನೋಭಾವನೆ ಬೆಳಸಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ಶರಣರಾದ ಸದಾಶಿವ ಹಗೆದಾಳ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ನಿರ್ದಶಕ ಈರಣ್ಣಾ ಬಂಜಿರಾಮ, ಮಕ್ತುಮಸಾಬ ಅಪ್ಪುಬಾಯಿ, ಮಾಜಿ ಜಿ.ಪಂ. ಸದಸ್ಯ ಮಂಜುನಾಥ ಪಾಟೀಲ, ಮಹಾಂತೇಶ ಮಗದುಮ್ಮ, ಯಲ್ಲಪ್ಪ ಹಂಚಿನಮನಿ, ಡಿ.ಎಫ್. ಮುಲ್ಲಾ, ಧರನಟ್ಟಿ ಗ್ರಾ.ಪಂ. ಅಧ್ಯಕ್ಷ ನಿಂಗಪ್ಪ ಕೊಚ್ಚರಗಿ, ಬಸ್ಸಾಪೂರ ಗ್ರಾ.ಪಂ. ಅಧ್ಯಕ್ಷ ಭೀಮಸಿ ಕಳ್ಳಿಮನಿ, ರಾಮಚಂದ್ರ ನಾಯಿಕ, ಬಸವಣ್ಣಿ ಗೊರವ, ಗಂಗಪ್ಪ ಪಾಟೀಲ, ಮಲ್ಲಪ್ಪ ಗಂಗಪ್ಪ ಕೋತಗಿ, ಮಾರುತಿ ನಡಗಡ್ಡಿ, ಪ್ರಕಾಶ ಮಠದವರ, ಬಸವರಾಜ ನಾಯಿಕ, ಸುರೇಶ ಡುಮ್ಮನಾಯಿಕ, ಬಸವರಾಜ ಡುಮ್ಮನಾಯಿಕ, ಶಂಕರ ಡೊಂಬಾರ, ಹೊಳೆಪ್ಪ ಗೌಡರ, ಮಲ್ಲಪ್ಪ ಪಾಟೀಲ, ಈರಪ್ಪಾ ಬಾಗರಾಯಿ, ಸರಪರಾಜ ಪೀರಜಾದೆ, ಕುಮಾರ ಮುರಕೋಟಿ, ಸಚಿವ ಸತೀಶ ಜಾರಕಿಹೊಳಿ ಆಪ್ತ ಸಹಾಯಕ ಲಗಮಣ್ಣಾ ಪಣಗುದ್ದಿ, ಬಿ.ಆರ್. ಬಂಜಿರಾಮ, ಸಂಜು ಪಾಟೀಲ, ಸಿದ್ದರಾಮ ನಿಂಗರಾಯಿ, ಮುಂತಾದವರು ಇದ್ದರು.