ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿಮಕ್ಕಳಲ್ಲಿ ಸಂಸ್ಕಾರ, ಮಾನವೀಯ ಮೌಲ್ಯಗಳ ಜತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪಾಲಕರು ಮುತುರ್ವಜಿ ವಹಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಅಂಕಗಳಿಗೆ ಸೀಮಿತ ಮಾಡುತ್ತಿರುವುದರಿಂದ ನೈತಿಕ ಶಿಕ್ಷಣ ಮಟ್ಟ ಕುಸಿಯುತ್ತಿದೆ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಕಳವಳ ವ್ಯಕ್ತಪಡಿಸಿದರು.ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಶುಕ್ರವಾರ ಮಿಂಚಿನ ಸಂಚಾರ ನಡೆಸಿದ ಅವರು ವಿವಿಧ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿದರು.2022-23ನೇ ಸಾಲಿನ ವಿವೇಕ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಂಡ ದಾಸರಟ್ಟಿಯ ₹28.80 ಲಕ್ಷ ವೆಚ್ಚದ 2 ಕೊಠಡಿ, ರಕ್ಷಿಯ ₹41.70 ಲಕ್ಷ ವೆಚ್ಚದ 3 ಕೊಠಡಿ, ಶಿಂದಿಹಟ್ಟಿಯ ₹14.50 ಲಕ್ಷ ವೆಚ್ಚದ 1 ಕೊಠಡಿ, ಲೇಬರ್ ಕ್ಯಾಂಪ್‌ನ ₹14.50 ಲಕ್ಷ ರೂ ವೆಚ್ಚದ 1 ಕೊಠಡಿ, ಗೌಡವಾಡದಲ್ಲಿ ₹14.30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಕೊಠಡಿಗಳನ್ನು ಲೋಕಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷ ಬಸವರಾಜ ಬೂಸಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಕ್ಷೇತ್ರ ಸಮನ್ವಯ ಅಧಿಕಾರಿ ಎ.ಎಸ್.ಪದ್ಮಣ್ಣವರ, ಗುತ್ತಿಗೆದಾರ ಪಿ.ಬಿ.ಮಗದುಮ್ಮ, ಬಸವರಾಜ ಗಂಗನ್ನವರ, ಮುಖಂಡ ಬಸವರಾಜ ಮಟಗಾರ, ಬಸವರಾಜ ಮರಡಿ, ರವಿ ಹಿಡಕಲ್, ರಾಯಪ್ಪ ಡೂಗ, ರಾಜು ಹುದ್ದಾರ, ಮಹೇಶ ಬಡಗಾಂವಿ, ಕೆಂಪಣ್ಣ ಖೋತ, ಸಹಾಯಕ ಅಭಿಯಂತರ ವಿಜಯ ಕುರಾಡಗಿ, ಸುಹಾಸಿನಿ ಮಗದುಮ್ಮ, ಕಾಡಪ್ಪ ಶಿಡ್ಲಾಳಿ, ತಾನಾಜಿ ಕದಂ ಮತ್ತಿತರರು ಇದ್ದರು.