ಯಾಂತ್ರೀಕರಣದ ಮೂಲಕ ಕೃಷಿಯಲ್ಲಿ ವೆಚ್ಚ ತಗ್ಗಿಸಿ

| Published : Feb 01 2025, 12:00 AM IST

ಸಾರಾಂಶ

ಸಂಪೂರ್ಣ ಯಾಂತ್ರೀಕರಣದ ಮೂಲಕ ಭತ್ತದ ಬೇಸಾಯ ನಡೆಸುವುದರಿಂದ ವೆಚ್ಚವನ್ನು ನಿಯಂತ್ರಿಸಿ ಹೆಚ್ಚು ಇಳುವರಿ ಪಡೆಯಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೃಷಿ ಮೇಲ್ವಿಚಾರಕ ಎಂ. ಸುನೀಲ್ ಕುಮಾರ್‌ ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ವೆಚ್ಚ ಮತ್ತು ವಾಣಿಜ್ಯ ಬೆಳೆಗಳ ಆಕರ್ಷಣೆಯಿಂದ ರೈತರು ಭತ್ತದ ಬೇಸಾಯದಿಂದ ವಿಮುಖರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ "ಯಂತ್ರಶ್ರೀ " ಯಾಂತ್ರೀಕರಣ ಯೋಜನೆಯ ಉಪಯೋಗ ಕುರಿತು ಗ್ರಾಮಾಭಿವೃದ್ಧಿ ಸಂಸ್ಥೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಸಂಪೂರ್ಣ ಯಾಂತ್ರೀಕರಣದ ಮೂಲಕ ಭತ್ತದ ಬೇಸಾಯ ನಡೆಸುವುದರಿಂದ ವೆಚ್ಚವನ್ನು ನಿಯಂತ್ರಿಸಿ ಹೆಚ್ಚು ಇಳುವರಿ ಪಡೆಯಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೃಷಿ ಮೇಲ್ವಿಚಾರಕ ಎಂ. ಸುನೀಲ್ ಕುಮಾರ್‌ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸಹಯೋಗದಲ್ಲಿ ತಾಲೂಕಿನ ಇಳ್ಳಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಯಂತ್ರಶ್ರೀ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ವೆಚ್ಚ ಮತ್ತು ವಾಣಿಜ್ಯ ಬೆಳೆಗಳ ಆಕರ್ಷಣೆಯಿಂದ ರೈತರು ಭತ್ತದ ಬೇಸಾಯದಿಂದ ವಿಮುಖರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ "ಯಂತ್ರಶ್ರೀ " ಯಾಂತ್ರೀಕರಣ ಯೋಜನೆಯ ಉಪಯೋಗ ಕುರಿತು ಗ್ರಾಮಾಭಿವೃದ್ಧಿ ಸಂಸ್ಥೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದೇವರಾಜೇಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವಾರು ಪ್ರಗತಿಪರ ಹಾಗೂ ಗ್ರಾಮ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕೃಷಿಗೆ ಹೆಚ್ಚಿನ ಒತ್ತು ನೀಡಿ ಗ್ರಾಮ ಮಟ್ಟಗಳಲ್ಲಿ ತರಬೇತಿಗಳನ್ನು ನೀಡುತ್ತಿರುವುದು ರೈತರಿಗೆ ಸಹಾಯವಾಗಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜಗೌಡ, ಪ್ರಗತಿಪರ ಕೃಷಿಕ ತಿರುಮಲೇಗೌಡ, ಒಕ್ಕೂಟದ ಅಧ್ಯಕ್ಷೆ ಪುಟಾಣಿ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕುಶ, ವಲಯ ಮೇಲ್ವಿಚಾರಕ ರವೀಂದ್ರ, ಸೇವಾ ಪ್ರತಿನಿಧಿ ಕವಿತಾ ಉಪಸ್ಥಿತರಿದ್ದರು.