ಸಾರಾಂಶ
ಕಾರ್ಮಿಕರು ತಮಗೆ ವಹಿಸಿಕೊಟ್ಟ ಕೆಲಸದ ಜವಾಬ್ದಾರಿ ಅರಿತು ಉತ್ತಮವಾಗಿ ಕೆಲಸ ನಿರ್ವಹಿಸಿ ಕಾರ್ಖಾನೆ ಹಾಗೂ ರಾಷ್ಟ್ರವನ್ನು ಸದೃಢಗೊಳಿಸುವಲ್ಲಿ ತಮ್ಮ ಕೊಡುಗೆ ನೀಡಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಎಲ್ಲರು ಆಚರಿಸುವಂತಾಗಬೇಕೆಂದು ಸಿ.ಬಿ.ಕೋರೆ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 75ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹನ ನೆರವೇರಿಸಿ ಮಾತನಾಡಿ, ಕಾರ್ಮಿಕರು ತಮಗೆ ವಹಿಸಿಕೊಟ್ಟ ಕೆಲಸದ ಜವಾಬ್ದಾರಿ ಅರಿತು ಉತ್ತಮವಾಗಿ ಕೆಲಸ ನಿರ್ವಹಿಸಿ ಕಾರ್ಖಾನೆ ಹಾಗೂ ರಾಷ್ಟ್ರವನ್ನು ಸದೃಢಗೊಳಿಸುವಲ್ಲಿ ತಮ್ಮ ಕೊಡುಗೆ ನೀಡಬೇಕು. ಸಿ.ಬಿ.ಕೋರೆ ಸಕ್ಕರೆ ಕಾರ್ಖಾನೆಯ ರೂವಾರಿಗಳು, ಕೆ.ಎಲ್.ಇ. ಸಂಸ್ಥೆ ಬೆಳಗಾವಿ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆ ಇವರ ಮಾರ್ಗದರ್ಶನ ಹಾಗೂ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ ನವದೆಹಲಿ ನಿರ್ದೇಶಕ ಅಮಿತ ಕೋರೆ ಇವರ ಮುಂದಾಳತ್ವದಲ್ಲಿ ಕಾರ್ಖಾನೆಯು ಸತತ ಪ್ರಗತಿ ಸಾಧಿಸುತ್ತಿದೆ ಎಂದರು.ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಟಿ.ದೇಸಾಯಿ ಮಾತನಾಡಿ, ನಮ್ಮದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನ. ನಾವೆಲ್ಲರೂ ಸಂವಿಧಾನದ ನಿಯಮಗಳಂತೆ ನಡೆದು ದೇಶದ ಅಭಿವೃದ್ಧಿಗೆ ಶ್ರಮಿಸೋಣ, ಎಲ್ಲರು ತಮ್ಮ ಕಾರ್ಯ ಮತ್ತು ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಮೂಲಕ ದೇಶದ ಪ್ರಗತಿಯಲ್ಲಿ ನಮ್ಮ ಕೊಡುಗೆ ನೀಡೋಣ ಎಂದು ತಿಳಿಸಿದರು. ಕಾರ್ಖಾನೆಯ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರುಗಳಾದ ಮಹಾವೀರ ಕಾತ್ರಾಳೆ, ಭೀಮಗೌಡ ಪಾಟೀಲ, ಅಣ್ಣಾಸಾಬ ಇಂಗಳೆ, ಕಾರ್ಖಾನೆಯ ವಿಭಾಗಾಧಿಕಾರಿಗಳು, ಕಾರ್ಖಾನೆಯ ಗಂಗಾ ಶುಗರ ಶಾಲಾ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಹಾಗೂ ರೈತಭಾಂದವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))