ಶೃಂಗೇರಿಯಲ್ಲಿ ಕೈ ಕಾರ್ಯಕರ್ತರ ರಸ್ತೆ ತಡೆ: ಪ್ರತಿಭಟನೆ

| Published : Aug 20 2024, 12:56 AM IST

ಸಾರಾಂಶ

ಶೃಂಗೇರಿ: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಸಮ್ಮತಿ ನೀಡಿರುವುದನ್ನು ಖಂಡಿಸಿ ಪಟ್ಟಣದ ಕೆವಿಆರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಶೃಂಗೇರಿ: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಸಮ್ಮತಿ ನೀಡಿರುವುದನ್ನು ಖಂಡಿಸಿ ಪಟ್ಟಣದ ಕೆವಿಆರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಕಾಂಗ್ರೇಸ್ ಮುಖಂಡ ಎಂ.ಎಚ್.ನಟರಾಜ್ ಮಾತನಾಡಿ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಸಿಎಂ ಸಿದ್ರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಸಮ್ಮತಿ ನೀಡಿದ್ದು ಖಂಡನೀಯವಾಗಿದೆ.ಬಿಜೆಪಿ ಜೆಡಿಎಸ್ ನವರು ಸೇರಿಕೊಂಡು ಕರ್ನಾಟದಲ್ಲಿ ಸರ್ಕಾರವನ್ನು ಉರುಳಿಸುವ ಹುನ್ನಾರ ನಡೆಸುತ್ತಿದ್ದಾರೆ.ಸಿದ್ರಾಮಯ್ಯನವರ ಏಳಿಗೆ ಸಹಿಸದೆ ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ.

ಮುಡಾದಲ್ಲಿ ನನ್ನ ಪಾತ್ರವಿಲ್ಲ ಎಂದು ಸಿದ್ರಾಮಯ್ಯ ತಾವೇ ಸ್ವತ ಹೇಳಿದ್ದಾರೆ. ಆದರೂ ಮೂರನೇ ವ್ಯಕ್ತಿ ನೀಡಿರುವ ಸುಳ್ಳು ದೂರನ್ನು ಆಧರಿಸಿ ಯಾವುದೇ ಪರಿಶೀಲನೆ ಮಾಡದೇ ಶೋಕಾಸ್ ನೋಟಿಸ್ ನೀಡಿ, ಪ್ರಾಸಿಕ್ಯೂಷನ್ ಗೆ ಸಮ್ಮತಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ಥಿರಗೊಳಿಸುವ ಹುನ್ನಾರ ಎಂದರು.

ಕೆ.ಎಂ.ರಾಮಣ್ಣ ಮಾತನಾಡಿ ರಾಜ್ಯಪಾಲರು ಯಾವುದೇ ಪರಿಶೀಲನೆ ಮಾಡದೇ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ ಇಟ್ಟಿದ್ದಾರೆ. ಕಾನೂನು ಪರಿಪಾಲನೆ ಮಾಡಿಲ್ಲ. ದೂರನ್ನು ಸರಿಯಾಗಿ ಪರಾಮರ್ಷೆ ಮಾಡಿಲ್ಲ. ಏಕಾ ಏಕಿ ಆದೇಶ ಮಾಡಿದ್ದು ಪ್ರಜಾಪ್ರಭುತ್ಲ ವ್ಯವಸ್ಥೆಗೆ ಕಳಂಕ. ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ಇಂತಹ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಾ ಕಾರರು ರಸ್ತೆ ತಡೆ ನಡೆಸಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ ಪ್ರಯಾಣಿಕರು, ವಾಹನ ಸವಾರರು ಕೆಲ ಹೊತ್ತು ಪರದಾಡಬೇಕಾಯಿತು. ಪ್ರಚಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸೌಭಾಗ್ಯ ಗೋಪಾಲನ್, ಶಿವಮೂರ್ತಿ, ತ್ರಿಮೂರ್ತಿ, ಕಲ್ಕುಳಿ ವೆಂಕಟೇಶ್, ರಾಜಕುಮಾರ್, ಟಿ.ಕೆ.ಗೋಪಾಲ್ ನಾಯಕ್, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

19 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ರಾಜ್ಯಪಾಲರ ನಡೆ ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.