‘ಸಾಯಿ ಪ್ರಸಾದ’ ಕೃತಿ ವಿದ್ಯಾರ್ಥಿಗಳ ನೈತಿಕ ಶಿಕ್ಷಣದ ಕೈಪಿಡಿ: ಡಿಡಿಪಿಐ ಗಣಪತಿ

| Published : Aug 30 2024, 01:00 AM IST

‘ಸಾಯಿ ಪ್ರಸಾದ’ ಕೃತಿ ವಿದ್ಯಾರ್ಥಿಗಳ ನೈತಿಕ ಶಿಕ್ಷಣದ ಕೈಪಿಡಿ: ಡಿಡಿಪಿಐ ಗಣಪತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜೀವನಗರದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಹಿ.ಪ್ರಾ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯಸಾಯಿ ಪ್ರಸಾದ್‌ ಅವರ ಸನ್ಮಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ರಾಜೀವನಗರದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಹಿ.ಪ್ರಾ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯಸಾಯಿ ಪ್ರಸಾದ್‌ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರ 2ನೇ ಕೃತಿ ‘ಸಾಯಿ ಪ್ರಸಾದ’ವನ್ನು ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಗಣಪತಿ ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣ ಬರೀ ಅಂಕ ಗಳಿಕೆಯ ಮೇಲೆ ನಿಂತಿದೆ. ಸಾಹಿತ್ಯ, ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ ಶಿಕ್ಷಣದ ಅವಶ್ಯಕತೆ ಇದ್ದು, ಸಾಯಿಪ್ರಸಾದ ಕೃತಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಕೈಪಿಡಿಯಾಗಿದೆ. ಪ್ರತೀ ಶಾಲೆ ಹಾಗೂ ಮನೆಗಳಲ್ಲಿ ಸಂಗ್ರಹಕ್ಕೆ ಯೋಗ್ಯವಾದ ಪುಸ್ತಕವಾಗಿದೆ ಎಂದು ಶುಭಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಡಗಬೆಟ್ಟು ಗ್ರಾ.ಪಂ. ಅಧ್ಯಕ್ಷ ಕೇಶವ ಕೊಟ್ಯಾನ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಡಾ.ಅಶೋಕ್ ಕಾಮತ್, ಉಡುಪಿ ಬಿಇಒ ಡಾ.ಎಲ್ಲಮ್ಮ, ಬೈಂದೂರು ಬಿಇಒ ನಾಗೇಶ್ ನಾಯಕ್, ಬ್ರಹ್ಮಾವರ ಬಿಇಒ ಶಬನಾ ಅಂಜುಮ್, ಪತ್ರಾಂಕಿತ ಸಹಾಯಕರು ಪೂರ್ಣಿಮಾ, ಕಾರ್ಕಳ ಬಿಇಒ ಲೋಕೇಶ್, ಇಂದಿರಾ ಪ್ರಸಾದ್, ಮಾಜಿ ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಎಸ್‌ಡಿಎಂಸಿ ಅಧ್ಯಕ್ಷೆ ಸುಮಿತ್ರಾ, ಶಾಲಾ ಮುಖ್ಯಶಿಕ್ಷಕ ಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.ಸಂಯುಕ್ತ ಪೌಢಶಾಲಾ ಮುಖ್ಯಶಿಕ್ಷಕ ಬಾಲಕೃಷ್ಣ ಪಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಜೀವ ನಾಯಕ್ ನಿರೂಪಿಸಿದರು. ಪ್ರಕಾಶ್ ಪ್ರಭು ವಂದಿಸಿದರು.