ಸಾರಾಂಶ
ತಾಲೂಕಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಆಚರಣೆ ನಿಮಿತ್ತ ಸೋಮವಾರ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಕಾಯಕಯೋಗಿ ಸಿದ್ಧರಾಮೇಶ್ವರರು 12 ನೇ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬರಾಗಿದ್ದಾರೆ. ಇವರು ಕಾಯಕದ ಮಹತ್ವವನ್ನು ತಿಳಿಸಿದ ಮಹಾನ್ ಯೋಗಿ. ತಮ್ಮ ಕಾಯಕದೊಂದಿಗೆ ವಚನಗಳನ್ನು ರಚಿಸುವ ಮೂಲಕ ಜ್ಞಾನಯೋಗಿಯಾಗಿದ್ದಾರೆ. ಇವರ ಸಂದೇಶ ನಾವೆಲ್ಲರೂ ಅರಿತು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಭೋವಿ ಸಮಾಜದ ಮುಖಂಡ ಸಿದ್ರಾಮ ಪಾತ್ರೋಟಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಆಚರಣೆ ನಿಮಿತ್ತ ಸೋಮವಾರ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಈ ವೇಳೆ ಪರಶುರಾಮ ಜಮಖಂಡಿ, ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-೧ ನಿರ್ದೇಶಕ ಭವಾನಿ ಪಾಟೀಲ, ಖಜಾನೆ ಇಲಾಖೆ ಮನೋಜ ಪಾಟೀಲ, ರೇಷ್ಮೆ ಇಲಾಖೆಯ ಅಧಿಕಾರಿ ಎಸ್.ಐ.ಗೋಲಗೊಂಡ, ತಹಸೀಲ್ದಾರ ಕಚೇರಿ ಶಿರಸ್ತೇದಾರ ಬೋರಮ್ಮ ಪೊಲೇಶಿ, ಸಿಬ್ಬಂದಿ ಶಂಕರ ತಳವಾರ, ಮಂಜು ಹಳ್ಳೂರ, ಆರ್.ಜಿ. ಘಾಟಗೆ, ನಿರ್ಮಲಾ ಪೂಜಾರಿ, ಭೋವಿ ಸಮಾಜದ ಮುಖಂಡ ನಾಗರಾಜ ಪಲ್ಹಾಪೂರ, ಉದಯಕುಮಾರ ಮಾಂಗಲೇಕರ, ನಾಗೇಶ ವಡ್ಡರ, ರಾಜು ಬಂಡಿವಡ್ಡರ, ಪ್ರಕಾಶ ಪಾತ್ರೋಟಿ, ರಾಜು ವಡ್ಡರ, ಸಂತೋಷ ಪಾತ್ರೋಟಿ, ಪರಶುರಾಮ ಕುರಾಡೆ, ಮುತ್ತಣ್ಣ ಈರಕಲ್ಲ, ಇತರರು ಇದ್ದರು.