ಅಯೋಧ್ಯೆಯ ರಾಮಲಲ್ಲಾ ಕಾರ್ಯಕ್ರಮದಲ್ಲಿ ಕೋರೆ ಭಾಗಿ

| Published : Jan 23 2024, 01:52 AM IST

ಸಾರಾಂಶ

ಅಯೋಧ್ಯೆಯ ಶ್ರೀ ರಾಮನಲ್ಲ ಪ್ರಾಣ ಪ್ರತಿಷ್ಠಾಪನ ಹಿನ್ನೆಲೆ ನಗರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭವ್ಯವಾದ ರಾಮಮಂದಿರವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಅಮೃತಗಳಿಗೆ. ಭಾರತ ದರ್ಶನವನ್ನು ಇಲ್ಲಿ ಕಾಣಬಹುದು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರತಿಯೊಬ್ಬ ಹಿಂದೂ ಕೂಡ ಅಭಿಮಾನ ಪಡಬೇಕು. ಶ್ರೀ ರಾಮ ನಮ್ಮ ಸಂಸ್ಕೃತಿಯ ಅಸ್ಮಿತೆ. 500 ವರ್ಷಗಳ ಹಿಂದುಗಳ ತಪಸ್ಸು ಇಂದು ಫಲಿಸಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ್ ಕೋರೆ ಹೇಳಿದರು.

ಅಯೋಧ್ಯೆಯ ಶ್ರೀ ರಾಮನಲ್ಲ ಪ್ರಾಣ ಪ್ರತಿಷ್ಠಾಪನ ಹಿನ್ನೆಲೆ ನಗರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭವ್ಯವಾದ ರಾಮಮಂದಿರವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಅಮೃತಗಳಿಗೆ. ಭಾರತ ದರ್ಶನವನ್ನು ಇಲ್ಲಿ ಕಾಣಬಹುದು. ಅಸಂಖ್ಯಾ ಹಿರಿಯರ ಹೋರಾಟದ ತ್ಯಾಗದ ಪ್ರತಿಫಲವಾಗಿ ಶ್ರೀ ರಾಮನ ಭಕ್ತಿಯೇ ಇಲ್ಲಿ ಮೈಯೆತ್ತು ನಿಂತು ಕೊಂಡಿದೆ ಎಂದು ಹೇಳಿದರು.ಇಂತಹ ಪವಿತ್ರ ಕ್ಷಣದಲ್ಲಿ ಪಾಲ್ಗೊಂಡಿರುವುದು ನನಗೆ ಅತ್ಯಂತ ಹೆಮ್ಮೆ ಹಾಗು ಸಂತೋಷ ಉಂಟು ಮಾಡಿದೆ. ಪ್ರತಿಯೊಬ್ಬ ಭಾರತೀಯನೂ ಕೂಡ ರಾಮನ ದರ್ಶನವನ್ನು ಪಡೆಯಬೇಕು. ನಮ್ಮ ಸನಾತನ ಸಂಸ್ಕೃತಿಯಲ್ಲಿ ಧರ್ಮ ಅಧ್ಯಾತ್ಮಗಳು ಬೆರೆತುಕೊಂಡಿವೆ. ರಾಮಾಯಣ ಅಂತಹ ಮೌಲ್ಯಗಳ ಒಂದು ದರ್ಶನವೆಂದು ಹೇಳಿದರು.