ಕುಡಿತದ ಚಟದಿಂದ ದೂರವಿರಿ

| Published : Jul 11 2025, 12:32 AM IST

ಸಾರಾಂಶ

ಮಧ್ಯವರ್ಜನ ಶಿಬಿರಗಳು ಆರೋಗ್ಯ ಮತ್ತು ಸಾಮಾಜಿಕ ಬದಲಾವಣೆಯ ದೃಷ್ಟಿಯಿಂದ ಬಹುಮುಖ್ಯವಾಗಿದ್ದು. ಕುಡಿತ ಚಟದಿಂದ ದೂರವಿರುವುದೇ ಕುಟುಂಬದ ಸಮೃದ್ಧಿಯ ಮಾರ್ಗವಾಗಿದೆ ಎಂದು ಮಾಜಿ ಶಾಸಕ ಎಸ್. ರಾಮಪ್ಪ ಅಭಿಪ್ರಾಯಪಟ್ಟರು.

ಹರಿಹರ: ಮಧ್ಯವರ್ಜನ ಶಿಬಿರಗಳು ಆರೋಗ್ಯ ಮತ್ತು ಸಾಮಾಜಿಕ ಬದಲಾವಣೆಯ ದೃಷ್ಟಿಯಿಂದ ಬಹುಮುಖ್ಯವಾಗಿದ್ದು. ಕುಡಿತ ಚಟದಿಂದ ದೂರವಿರುವುದೇ ಕುಟುಂಬದ ಸಮೃದ್ಧಿಯ ಮಾರ್ಗವಾಗಿದೆ ಎಂದು ಮಾಜಿ ಶಾಸಕ ಎಸ್. ರಾಮಪ್ಪ ಅಭಿಪ್ರಾಯಪಟ್ಟರು.ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಹರಿಹರೇಶ್ವರ ದೇವಸ್ಥಾನದ ಹಿಂಭಾಗದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ 1947ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆರೋಗ್ಯವಾಗಿರಬೇಕು ಅಂದ್ರೆ ಕುಡಿತದ ಚಟದಿಂದ ದೂರವಿರಬೇಕು. ಕುಡಿತದಿಂದ ಸಮಸ್ಯೆಗಳ ಮಾತ್ರವಲ್ಲ, ಕುಟುಂಬವೂ ಹಾಳಾಗುತ್ತದೆ. ಕುಡಿತದಿಂದ ಕುಟುಂಬದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಮಕ್ಕಳ ಭವಿಷ್ಯಕ್ಕಾಗಿ, ಕುಟುಂಬದ ನೆಮ್ಮದಿಗಾಗಿ ಈ ಚಟವನ್ನು ಬಿಟ್ಟು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ ಮಾತನಾಡಿ, ವ್ಯಸನಮುಕ್ತ ಸಮಾಜವನ್ನು ನಿರ್ಮಿಸಲು ಧರ್ಮಸ್ಥಳ ಸಂಸ್ಥೆ ಬದ್ಧವಾಗಿದೆ. ಮದ್ಯಪಾನದಿಂದ ಹೃದಯ ಸಂಬಂಧಿ ರೋಗಗಳ ಜೊತೆಗೆ ಅನೇಕ ದೊಡ್ಡ ಕಾಯಿಲೆಗಳು ಉಂಟಾಗಬಹುದು. ಆರೋಗ್ಯವಂತ ಹಾಗೂ ಸಂತಸದ ಬದುಕಿಗಾಗಿ ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದರು.

ಈ ಶಿಬಿರ ಕರ್ನಾಟಕ ಜನಜಾಗೃತಿ ವೇದಿಕೆಯ 3ನೇ ಕಾರ್ಯಕ್ರಮವಾಗಿದ್ದು, ಮಲೆಬೆನ್ನೂರು ಪಟ್ಟಣದಲ್ಲಿ ನಡೆದ ಶಿಬಿರದಲ್ಲಿ 50 ಜನ ವ್ಯಸನ ಮುಕ್ತರಾಗಿದ್ದಾರೆ. ಶಿಬಿರದಲ್ಲಿ ಜಾತಿ, ಮತ, ಪಂಥಭೇದವಿಲ್ಲದೆ ಎಲ್ಲರಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರಾವತಿ ಪರಮೇಶ್ವರಪ್ಪ ವಹಿಸಿದ್ದರು.

ಸಿ.ಎನ್.ಹುಲಿಗೇಶ್, ಡಿ.ಕುಮಾರ, ಬಿ.ರೇವಣಸಿದ್ದಪ್ಪ, ಎಚ್.ಪಿ.ಬಸವರಾಜ (ಬಾಬಣ್ಣ), ನಗರಸಭಾ ಸದಸ್ಯ ಪಿ.ಎನ್.ವಿರೂಪಾಕ್ಷ, ಜನಜಾಗೃತಿ ವೇದಿಕೆಯ ಪದ್ಮರಾಜ ಜೈನ್, ವೈ.ಕೃಷ್ಣಮೂರ್ತಿ, ರವಿಶಂಕರ್, ಎಸ್.ರಾಜಶೇಖರ್ ಕೊಂಡಜ್ಜಿ, ಪತ್ರಕರ್ತ ಶೇಖರ ಗೌಡ ಪಾಟೀಲ್, ಮೀನಾಕ್ಷಿ ನಿರಂಜನ್, ಎಚ್.ಬಿ.ರುದ್ರೇಗೌಡ, ಅನಿಲ್ ಕುಮಾರ್ ಎಸ್.ಎಸ್, ಗೀತಾ ಬಿ, ನಂದಿನಿ ಶೇಟ್, ವಿಠಲ್.ಎನ್.ಜಿ, ಶ್ವೇತಾ.ಬಿ, ಜಯಲಕ್ಷ್ಮಿಮ್ಮ ಹಾಗೂ ಟ್ರಸ್ಟ್ ಸಿಬ್ಬಂದಿ, ಸ್ವಯಂ ಸೇವಕರು ಹಾಗೂ ಇರರರು ಉಪಸ್ಥಿತರಿದ್ದರು.