‘ಕದ್ದಮಾಲು ಇಲ್ಲಿ ತೆಗೆದುಕೊಳ್ಳುವುದಿಲ್ಲ’

| Published : Mar 30 2024, 12:54 AM IST

ಸಾರಾಂಶ

ಈಗಾಗಲೇ ಕಳ್ಳತನದ ಆರೋಪಿಗಳ ಮೌಖಿಕ ಹೇಳಿಕೆಗಳ ಆಧಾರದ ಮೇಲೆ ವ್ಯಾಪಾರಿಗಳನ್ನು ವಿಚಾರಣೆಯ ನೆಪದಲ್ಲಿ ಬೆದರಿಸಿ ಅವರಿಂದ ಚಿನ್ನ, ಬೆಳ್ಳಿ ವಸ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಬಾರದು.

ಕನ್ನಡಪ್ರಭ ವಾರ್ತೆ ಕೆಜಿಎಫ್ಕದ್ದ ಮಾಲನ್ನು ತೆಗೆದುಕೊಳ್ಳುವುದಿಲ್ಲವೆಂದು ನಿಮ್ಮ ಅಂಗಡಿಗಳ ಮುಂದೆ ನಾಮಫಲಕ ಅಳವಡಿಸಿಕೊಳ್ಳಿ, ಸಿ.ಸಿ ಕ್ಯಾಮೆರವನ್ನು ಅಳವಡಿಸಿ, ಯಾರೇ ಚಿನ್ನವನ್ನು ಅಡವಿಡಲು ಬಂದಾಗ ಅವರ ವಿಳಾಸ, ಫೋನ್ ನಂ, ಚಿನ್ನ ಮಾರಲು ಬಂದವನ ಫೋಟೋ ಈ ಎಲ್ಲ ಮಾಹಿತಿಯನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟು ಪ್ರಾಮಾಣಿಕವಾಗಿ ವ್ಯವಹರಿಸಿ ಎಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಸಲಹೆ ನೀಡಿದರು. .

ನಗರದ ಮೂರನೇ ಅಡ್ಡ ರಸ್ತೆಯ ವಿಶ್ವ ಕರ್ಮ ಸ್ವರ್ಣಕಾರರ ಕ್ಷೇಮಾಭಿವೃದ್ಧಿ ಸಂಘ, ಕೆಜಿಎಫ್ ತಾಲೂಕಿನ ನ್ಯಾಯಾಂಗ ಇಲಾಖೆ, ವಕೀಲರ ಸಂಘದಿಂದ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಬಹುತೇಕ ವಿಶ್ವಕರ್ಮರ ಪ್ರಶ್ನೆಗಳು ಕಳ್ಳತನದ ಚಿನ್ನ ಬೆಳ್ಳಿ ಮಾಲಿನ ತಪಾಸಣೆ ಮಾಡಲು ಬರುವ ಪೊಲೀಸರು ಕಿರುಕುಳಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ನ್ಯಾಯಾಧೀಶರು ಉತ್ತರಿಸಿದರು.

ಡಿಐಜಿ ಸುತ್ತೋಲೆ ಮನವರಿಕೆ

ಈಗಾಗಲೇ ಕಳ್ಳತನದ ಆರೋಪಿಗಳ ಮೌಖಿಕ ಹೇಳಿಕೆಗಳ ಆಧಾರದ ಮೇಲೆ ವ್ಯಾಪಾರಿಗಳನ್ನು ವಿಚಾರಣೆಯ ನೆಪದಲ್ಲಿ ಬೆದರಿಸಿ ಅವರಿಂದ ಚಿನ್ನ, ಬೆಳ್ಳಿ ವಸ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಬಾರದು. ಠಾಣೆಗೆ ಕರೆದುಕೊಂಡು ಹೋಗಿ ಅಕ್ರಮ ಬಂಧನದಲ್ಲಿ ಇರಿಸಿರುವುದು ಕಂಡು ಬಂದಲ್ಲಿ ಕರ್ತವ್ಯ ಲೋಪ ಎಸಗಿರುವ ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳ ಮೇಲೆ ಸೂಕ್ತಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು. ಚಿನ್ನಬೆಳ್ಳಿ ವಸ್ತುಗಳ ಕಳ್ಳತನಕ್ಕೆ ಸಂಬಂಧಪಟ್ಟ ರಿಕವರಿ ಅಥವಾ ತನಿಖೆ ಮಾಡಲು ಹೋಗುವಾಗ ಚಿನ್ನ ಬೆಳ್ಳಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳನ್ನೂ ಕರೆದುಕೊಂಡು ಹೋಗುವುದರಿಂದ ಹೆಚ್ಚಿನ ಆಪಾದನೆಗೆ ಆಸ್ಪದವಿಲ್ಲದಂತಾಗುತ್ತದೆ. ವಿಚಾರಣೆಯ ಸಂದರ್ಭದಲ್ಲಿ ಪೊಲೀಸರು ಸಮವಸ್ತ್ರ ಧರಿಸಿ ಹೋಗುವುದು ಸೂಕ್ತ ಎಂದರು.ನ್ಯಾಯಾಧೀಶರಾದ ಮುಜಫರ್ ಎ ಮಾಂಜರಿ, ಮಂಜುನಾಥ್.ಎಂ. ವಿನೋದ್‌ಕುಮಾರ್, ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್. ರಾಜಗೋಪಾಲಗೌಡ ಇದ್ದರು.