ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಪಡಬೇಕು

| Published : Feb 17 2024, 01:18 AM IST

ಸಾರಾಂಶ

ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಮಾತನಾಡಿ, ಓದಿನಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುವ ಮತ್ತು ಓದಿದ್ದನ್ನು ಸರಿಯಾಗಿ ನೆನಪಿಟ್ಟುಕೊಳ್ಳಲು ಅನುಸರಿಸಬೇಕಾದ ಉಪಯುಕ್ತ ಸಲಹೆಗಳನ್ನು ನೀಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಪಡಬೇಕು. ಜೀವನದಲ್ಲಿ ಯಶಸ್ಸು ಪಡೆಯಲು ಸ್ಪಷ್ಟ ಗುರಿಯೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮಾಜಿ ಶಾಸಕ, ಕೆಎಲ್‌ಇ ಸಂಸ್ಥೆ ನಿರ್ದೇಶಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ ಮತ್ತು ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನ ಗೋವನಕೊಪ್ಪ ಇವರುಗಳ ಸಹಯೋಗದಲ್ಲಿ ಮಲ್ಲಮ್ಮನ ಬೆಳವಡಿ ಗ್ರಾಮದ ರಾಣಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಬೆಳವಡಿ ವಲಯದ ಪ್ರೌಢ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪರೀಕ್ಷಾ ಪ್ರೇರಣಾ ಕಾರ್ಯಾಗಾರಗಳ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಮಾತನಾಡಿ, ಓದಿನಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುವ ಮತ್ತು ಓದಿದ್ದನ್ನು ಸರಿಯಾಗಿ ನೆನಪಿಟ್ಟುಕೊಳ್ಳಲು ಅನುಸರಿಸಬೇಕಾದ ಉಪಯುಕ್ತ ಸಲಹೆಗಳನ್ನು ನೀಡಿದರು.

ಎಸ್.ಸಿ.ಹೊಂಗಲ ಪ್ರತಿಷ್ಠಾನದ ಸಂಸ್ಥಾಪಕ ಮಹಾಂತೇಶ ಹೊಂಗಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಣಿತ ಬೋಧನಾ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಕಾಶ ಮಾಸ್ತಿಹೊಳಿ, ವಿಜ್ಞಾನ ವಿಷಯದಲ್ಲಿ ಆಶೋಕ ಪಾಗಾದ ಮತ್ತು ಎಂ.ಸಿ. ಬಿರಾದಾರ ಇಂಗ್ಲಿಷ್‌ ವಿಷಯಗಳ ತರಬೇತಿ ನೀಡಿದರು.

ಬೆಳವಡಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಪಿಡಿಒ ಅವಿನಾಶ, ಮುಖ್ಯ ಶಿಕ್ಷಕ ಎಸ್.ಸಿ.ಗುಗ್ಗರಿ, ಶಿಕ್ಷಣ ಸಂಯೋಜಕ ರಮೇಶ ಯರಗಟ್ಟಿ, ಬಿಆರ್‌ಪಿ ಅಜ್ಜಪ್ಪ ಅಂಗಡಿ, ಶಿಕ್ಷಕಿಯರಾದ ಕವಿತಾ ಶಿಂಧೆ, ಎಸ್.ಐ. ಹುಣಸಿಮರದ, ಶಿಕ್ಷಕರಾದ ಚಂದ್ರಕಾಂತ ಗಡದೆ, ಎಸ್.ಎಸ್. ಮಿರ್ಜಿ ಇನ್ನಿತರರು ಇದ್ದರು. ಬೆಳವಡಿಯ ಎಂ.ಅರ್.ಪಾಟೀಲ್ ಸರ್ಕಾರಿ ಪ್ರೌಢಶಾಲೆ, ವಿ.ಅರ್.ಎಂ.ಎಸ್ ಪ್ರೌಢಶಾಲೆ, ಈಶಪ್ರಭು ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಉಡಿಕೆರಿಯ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ/ನಿಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಶಿಕ್ಷಕ ವಿರೇಶ ಕಾಡೇಶನವರ ನಿರೂಪಿಸಿದರು. ಸಂತೋಷ ಚೌಡನ್ನವರ ವಂದಿಸಿದರು.