ಸಾರಾಂಶ
ಉಲುಗುಲಿ ಗ್ರಾಮದ ಶ್ರೀ ಬೆಳ್ಳಾರಿಕಮ್ಮ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಆಚರಿಸಲಾಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಉಲುಗುಲಿ ಗ್ರಾಮದ ಶ್ರೀ ಬೆಳ್ಳಾರಿಕಮ್ಮ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಆಚರಿಸಲಾಯಿತು.ಸುಂಟಿಕೊಪ್ಪದ ಮಧುರಮ್ಮ ಬಡಾವಣೆಯ ನಿವಾಸಿ ರಘು ಮತ್ತು ರಾಣಿ ಅವರು ವರ್ಷಂಪ್ರತಿ ಆಚರಿಸುವ ಷಷ್ಠಿ ಉತ್ಸವ ಆಚರಿಸಲಾಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಶ್ರೀ ಬೆಳ್ಳಾರಿಕಮ್ಮ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಮಂಜುನಾಥ ಉಡುಪ ಮತ್ತು ಹಿರಿಯ ಆರ್ಚಕ ಗಣೇಶ್ ಶರ್ಮಾ ಅವರು ವಿಶೇಷ ಪೂಜೆ, ದೇವರಿಗೆ ಅಲಂಕಾರ, ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕ, ಕ್ಷೀರಾಭಿಷೇಕ ಸೇವೆಗಳೊಂದಿಗೆ ಹವನಾದಿ ಪೂಜೆಯೊಂದಿಗೆ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಮಹಾಮಂಗಳಾರತಿ ನೆರವೇರಿಸಿದರು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಉಪಾಧ್ಯಕ್ಷರು ಕುಂತೋಳಿ ಚಂಗಪ್ಪ, ಕಾರ್ಯದರ್ಶಿ ಮಾಗಲು ವಸಂತ, ಖಜಾಂಜಿ ಪಟ್ಟೆಮನೆ ಅನಿಲ್ ಕುಮಾರ್, ಸಹಕಾರ್ಯದರ್ಶಿ ಮಲ್ಲನ ಸತೀಶ್ ಹಾಗೂ ತಕ್ಕ ಮುಖ್ಯಸ್ಥ ಕೆ.ಪಿ.ಜಗನ್ನಾಥ್, ಶಶಾಂಕ್, ಪ್ರೀತಮ್ ಮತ್ತಿತರರು ಪೂಜಾ ಕೈಂಕರ್ಯದಲ್ಲಿ ಇದ್ದರು.
ಉಲುಗುಲಿ, ಸುಂಟಿಕೊಪ್ಪ, ನಾರ್ಗಾಣೆ, ಗುಂಡುಗುಟ್ಟಿ, ಹರದೂರು ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.