‘ಟಿಎಪಿಸಿಎಂಎಸ್’ ಎನ್‌ಡಿಎ ಬೆಂಬಲಿತರ ತೆಕ್ಕೆಗೆ

| Published : Apr 28 2025, 12:48 AM IST

ಸಾರಾಂಶ

ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಸದ ಡಾ.ಸುಧಾಕರ್‌ ನೇತೃತ್ವದ ಬಿಜೆಪಿ- ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಸಂಘದ ಒಟ್ಟು 13 ಸ್ಥಾಗಳ ಪೈಕಿ 12 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್‌ ಬೆಂಬಲಿತರಲ್ಲಿ ಒಬ್ಬ ಅಭ್ಯರ್ಥಿ ಮಾತ್ರ ಜಯಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಸಂಸದ ಡಾ.ಕೆ.ಸುಧಾಕರ್‌ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ.

ಭಾನುವಾರ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ನಡೆದ ಚುನಾವಣೆ ಬಳಿಕ ಮತ ಎಣಿಕೆ ನಡೆದು ರಾತ್ರಿ 8 ಗಂಟೆ ವೇಳೆಗೆ ಫಲಿತಾಂಶ ಘೋಷಿಸಲಾಯಿತು. ಸಂಸದ ಡಾ.ಸುಧಾಕರ್‌ ನೇತೃತ್ವದ ಬಿಜೆಪಿ- ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಸಂಘದ ಒಟ್ಟು 13 ಸ್ಥಾಗಳ ಪೈಕಿ 12 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್‌ ಬೆಂಬಲಿತರಲ್ಲಿ ಒಬ್ಬ ಅಭ್ಯರ್ಥಿ ಮಾತ್ರ ಜಯಗಳಿಸಿದ್ದಾರೆ.

ಚುನಾವಣೆ ಒಂದೂವರೆ ವರ್ಷ ತಡ

ಅವಧಿ ಪೂರ್ಣಗೊಂಡಿದ್ದ ಚಿಕ್ಕಬಳ್ಳಾಪುರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಒಂದೂವರೆ ವರ್ಷಗಳ ಕಾಲ ತಡವಾಗಿ ಚುನಾವಣೆ ನಡೆಸಲಾಯಿತು.

ಚುನಾವಣೆಯಲ್ಲಿ ಗೆದ್ದು ಬೀಗಿದ ಸಂಸದ ಡಾ.ಸುಧಾಕರ್‌ ಬೆಂಬಲಿತ ಅಭ್ಯರ್ಥಿಗಳಿಗೆ ಮುಖಂಡ ಕೆ.ವಿ. ನಾಗರಾಜ್ ಶುಭ ಹಾರೈಸಿದರು. ಈ ಬಾರಿ ಪಿ ಎಲ್ ಡಿ ಬ್ಯಾಂಕ್, ತಾಲೂಕು ಸೋಸೈಟಿ ಚುನಾವಣೆಗಳಲ್ಲಿ ಎನ್ ಡಿ ಎ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ ಎಂದರು.ಫಲಿಸಿದ ಸಂಸದರ ತಂತ್ರ

ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ ನವೀನ್ ಕಿರಣ್ ಮಾತನಾಡಿ, ಸಂಸದ ಡಾ.ಕೆ.ಸುಧಾಕರ್ ರಾಜಕೀಯ ಚಾಣಾಕ್ಷತನವೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿದೆ ಇದು ಮುಂಬರುವ ತಾಲೂಕು ಮತ್ತು ಜಿಲ್ಲಾಪಂಚಾಯತಿ ಚುನಾವಣೆಗಳಿಗೆ ಮುನ್ಸೂಚಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾಂಗ್ರೇಸ್ ಬೆಂಬಲಿತ ವಿಜೇತ ಅಭ್ಯರ್ಥಿ ಬಿ.ಸಿ.ನಾಗೇಶ್ ಮಾತನಾಡಿ ಕಾಂಗ್ರೆಸ್‌ ನನ್ನನ್ನ ಅಭ್ಯರ್ಥಿ ಮಾಡಿ ಗೆಲ್ಲಿಸಲು ಸಹಕಾರ ನೀಡಿದ ಶಾಸಕ ಪ್ರದೀಪ್ ಈಶ್ಬರ್, ಸಚಿವ ಎಂ.ಸಿ.ಸುಧಾಕರ್ ಹಾಗು ಅಡ್ಡಗಲ್ ಶ್ರೀಧರ್ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮರಳುಕುಂಟೆ ಸೋಲಿಗೆ ಆಕ್ರೋಶ

ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಮತ್ತು ಮುಂಚೂಣಿ ನಾಯಕರಾದ ಮರಳುಕುಂಟೆ ಕೃಷ್ಣಮೂರ್ತಿಯವರ ಸೋಲಿಗೆ ಬಿಜೆಪಿ ಮುಖಂಡರೆ ಕಾರಣ. ಮುಂದಿನ ದಿನಗಳಲ್ಲಿ ಅವರಿಗೆಲ್ಲ ತಕ್ಕ ಪಾಠ ಕಲಿಸುತ್ತೇವೆ ಎಂದು ಗೆದ್ದ ಅವರ ಶಿಷ್ಯ ನೂತನ ನಿರ್ದೇಶಕ ಲಿಂಗಾರೆಡ್ಡಿ ಕೆಲವು ಮುಖಂಡರ ಹೇಳಿದರು

ಇನ್ನೂ ಇಂದು ನಡೆದ ಚುನಾವಣೆಗೆ ಸಂಸದ ಡಾ.ಕೆ.ಸುಧಾಕರ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ಆಗಮಿಸಿ ಚುನಾವಣೆ ಪ್ರಕ್ರಿಯೆಗಳನ್ನ ವೀಕ್ಷಿಸಿದರು. ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.