ಪಟ್ಟಣದ ಹರ್ಡೀಕರ್ ವೃತ್ತದ ಬಳಿ ಇರುವ ಇಂದಿರಾ ಕ್ಯಾಂಟೀನ್‌ಗೆ ತಹಸೀಲ್ದಾರ್ ಮಮತಾ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಆರೋಪದ ಹಿನ್ನಲೆಯಲ್ಲಿ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಪಟ್ಟಣದ ಇಂದಿರಾ ಕ್ಯಾಟೀನ್‌ನಲ್ಲಿ ಗುಣಮಟ್ಟದ ಆಹಾರ ಜೊತೆಗೆ ಸ್ವಚ್ಛತೆಗೆ ಕೂಡ ಕಾಣೆಯಾಗಿದೆ ಎಂದ ಅವರು, ಇಂದಿರಾ ಕ್ಯಾಂಟೀನ್‌ಗೆ ಭೇಟಿ ಕೊಟ್ಟಂತಹ ಸಮಯದಲ್ಲಿ ಗ್ರಾಹಕರನ್ನು ವಿಚಾರಿಸಿ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಹರ್ಡೀಕರ್ ವೃತ್ತದ ಬಳಿ ಇರುವ ಇಂದಿರಾ ಕ್ಯಾಂಟೀನ್‌ಗೆ ತಹಸೀಲ್ದಾರ್ ಮಮತಾ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ವಚ್ಛತೆ, ಶುಚಿ, ರುಚಿಯ ಬಗ್ಗೆ ಪರಿಶೀಲನೆ ನಡೆಸಿ ಸರಿಯಾದ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ತೋರಿರುವ ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಇದೇ ರೀತಿ ಮುಂದುವರೆದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಬಡವರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟಗಳು ದೊರೆಯಬೇಕೆಂಬ ಸರ್ಕಾರದ ಆಶಯವೇ ಇಂದಿರಾ ಕ್ಯಾಟೀನ್‌. ಸ್ವಚ್ಛತೆ, ಶುಚಿ, ರುಚಿಯ ಸಾರ್ವಜನಿಕರ ಆರೋಪದ ಹಿನ್ನಲೆಯಲ್ಲಿ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಪಟ್ಟಣದ ಇಂದಿರಾ ಕ್ಯಾಟೀನ್‌ನಲ್ಲಿ ಗುಣಮಟ್ಟದ ಆಹಾರ ಜೊತೆಗೆ ಸ್ವಚ್ಛತೆಗೆ ಕೂಡ ಕಾಣೆಯಾಗಿದೆ ಎಂದ ಅವರು, ಇಂದಿರಾ ಕ್ಯಾಂಟೀನ್‌ಗೆ ಭೇಟಿ ಕೊಟ್ಟಂತಹ ಸಮಯದಲ್ಲಿ ಗ್ರಾಹಕರನ್ನು ವಿಚಾರಿಸಿ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಕೊಳೆತ ಸ್ಥಿತಿಯಲ್ಲಿ ತರಕಾರಿ ಪದಾರ್ಥಗಳು, ಕೈತೊಳೆಯುವ ತೊಟ್ಟಿಯಲ್ಲಿ ಸ್ವಚ್ಛತೆಯಿಲ್ಲ, ಪಾತ್ರೆಗಳನ್ನು ಸ್ವಚ್ಛ ಮಾಡಿಲ್ಲ. ಒಟ್ಟಾರೆ ಕ್ಯಾಂಟೀನ್ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಗೆ ಸರಿಯಾದ ಗುಣ್ಣಮಟ್ಟದ ಆಹಾರ ಸಿಗುತ್ತಿಲ್ಲ. ಸ್ವಚ್ಛತೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದರು.