ಅಡಿಕೆ ಗಿಡಗಳನ್ನು ಕಡಿದ ಕಿಡಿಗೇಡಿಗಳು

| Published : Apr 25 2025, 11:47 PM IST

ಸಾರಾಂಶ

ತಾಲೂಕಿನ ಕರಗಡ ಗ್ರಾಮದಲ್ಲಿ ಕಿಡಿಗೇಡಿಗಳು ವೈಯಕ್ತಿಕ ದ್ವೇಷದಿಂದ ರೈತನೊಬ್ಬನ ಬೆಳೆದಿದ್ದ ಅಡಿಕೆ ಗಿಡಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ. ಸ್ಥಳಕ್ಕೆ ತಹಸೀಲ್ದಾರ್ ಎಂ ಮಮತಾ ಭೇಟಿ ನೀಡಿ ಪರಿಶೀಲಿಸಿ, ಈ ಜಾಗ ಮುಳುಗಡೆ ಪ್ರದೇಶವಾಗಿರುವುದರಿಂದ ರೈತರು ಕಷ್ಟಪಟ್ಟು ಬೆಳೆಗಳನ್ನು ಬೆಳೆದಿರುತ್ತಾರೆ. ಆದರೆ ಈ ರೀತಿಯಾಗಿ ಬೆಳೆಗಳನ್ನು ಕಡಿದು ನಾಶಮಾಡುವುದು ನಿಜಕ್ಕೂ ಖಂಡನೀಯ. ಈಗಾಗಲೇ ಯಾರು ಈ ದೃಷ್ಕೃತ್ಯ ಮಾಡಿದ್ದಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಕರಗಡ ಗ್ರಾಮದಲ್ಲಿ ಕಿಡಿಗೇಡಿಗಳು ವೈಯಕ್ತಿಕ ದ್ವೇಷದಿಂದ ರೈತನೊಬ್ಬನ ಬೆಳೆದಿದ್ದ ಅಡಿಕೆ ಗಿಡಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ.

ತಾಲೂಕಿನ ಕಸಬ ಹೋಬಳಿಯ ಕರಗಡ ಗ್ರಾಮದ ರೈತ ಜಯಣ್ಣ ಎಂಬುವವರ ಜಮೀನಿನಲ್ಲಿ ಸುಮಾರು 65ಕ್ಕೂ ಹೆಚ್ಚು 4 ವರ್ಷದ ಹೊಂಬಾಳೆ ಬಿಟ್ಟಿದ್ದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ರಾತ್ರಿ ಕಡಿದುಹಾಕಿದ್ದಾರೆ. ತಮ್ಮ ಬದುಕಿನ ಆಧಾರವಾಗಿದ್ದ ಅಡಿಕೆ ಗಿಡಗಳನ್ನು ಕಳೆದುಕೊಂಡ ಜಯಣ್ಣ ಕಂಗಾಲಾಗಿದ್ದಾರೆ.

ನನಗೆ ಇದ್ದ ಅಲ್ಪಸ್ವಲ್ಪ ಜಮೀನಿನಲ್ಲಿ ಅರ್ಧ ಎಕರೆ ಕಷ್ಟಪಟ್ಟು ಗಿಡಗಳನ್ನು ಬೆಳೆಸಿದ್ದೆ, ಇದೀಗ ಎಲ್ಲವೂ ನಾಶವಾಯಿತು ಎಂದು ಅವರು ಕಣ್ಣೀರಿಟ್ಟಿದ್ದಾರೆ. ಘಟನೆಯ ಸ್ಥಳಕ್ಕೆ ಬೇಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಆರಂಭಿಸಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯರು ಗ್ರಾಮಸ್ಥರು ಹಾಜರಿದ್ದರು.