ಕಾಣದ ಕೈಗಳು ಕೂಡ ನಿಮ್ಮೊಂದಿಗೆ ಕೈಜೋಡಿಸಿ ಹೆಚ್ಚು ಅಂಕ ಪಡೆಯಲು ಸಹಕರಿಸಿದ್ದಾರೆ. ಅದನ್ನು ಎಂದಿಗೂ ಮರೆಯಬಾರದು ಸನ್ಮಾನ ಗೌರವಗಳು ತಮ್ಮ ಹೃದಯದಲ್ಲಿ ಇಟ್ಟುಕೊಳ್ಳಬೇಕೇ ಹೊರತು ಅದನ್ನು ತಮ್ಮ ಮುಡಿಯಲ್ಲಿ ಇಟ್ಟುಕೊಂಡರೆ ಅದರಂತ ಮಹಾನ್ ದೊಡ್ಡ ತಪ್ಪು ಬೇರೊಂದು ಇಲ್ಲ. ಸನ್ಮಾನಗಳು ಗೌರವಗಳು ತಾವಾಗಿ ತಾವು ತಮ್ಮನ್ನು ಹುಡುಕಿಕೊಂಡು ಬರಬೇಕೆ ಹೊರತು ನಾವಾಗಿ ನಾವು ಹುಡುಕಿಕೊಂಡು ಹೋದರೆ ಅದರಂತಹ ದೊಡ್ಡ ಅಪರಾಧ ಮತ್ತೊಂದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ವಿದ್ಯೆಗೆ ಆದ್ಯತೆ ನೀಡಿ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಬೇಕು ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕನ್ನಡ ಮಾಧ್ಯಮದಲ್ಲಿ ಓದುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್ ಎನ್ ಲೋಕೇಶ್ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಬಿ ಎಂ ರಸ್ತೆಯಲ್ಲಿರುವ ಕರ್ನಾಟಕ ಸಂಘದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಮತ್ತು ಹತ್ತನೇ ತರಗತಿಯಲ್ಲಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಓದುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ದಯಮಾಡಿ ವಿದ್ಯಾರ್ಥಿಗಳು ಕನ್ನಡ ನಾಡಲ್ಲಿ ಹುಟ್ಟಿ ಕನ್ನಡ ನಾಡಲ್ಲಿ ಬೆಳೆದು ಕನ್ನಡ ಭಾ?ಗೆ ತನ್ನದೇ ಆದ ಸ್ಥಾನಮಾನವಿದೆ. ಆ ಸ್ಥಾನಮಾನಕ್ಕೆ ಎಲ್ಲರೂ ಕೂಡ ಗೌರವ ಸಲ್ಲಿಸಬೇಕು. ಆ ದೃಷ್ಟಿಯಿಂದ ವಿದ್ಯಾರ್ಥಿಗಳು ಕನ್ನಡ ಭಾಷೆಗೆ ಮೊದಲು ಗೌರವವನ್ನು ನೀಡಿ ಅದರಲ್ಲೂ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಅಂಕ ಪಡೆಯಲು ಶಿಕ್ಷಕರ ಪಾತ್ರ ತಂದೆ ತಾಯಿಗಳ ಪಾತ್ರ ಬಹುಮುಖ್ಯವಾಗಿದೆ. ಜೊತೆಯಲ್ಲಿ ಕಾಣದ ಕೈಗಳು ಕೂಡ ನಿಮ್ಮೊಂದಿಗೆ ಕೈಜೋಡಿಸಿ ಹೆಚ್ಚು ಅಂಕ ಪಡೆಯಲು ಸಹಕರಿಸಿದ್ದಾರೆ. ಅದನ್ನು ಎಂದಿಗೂ ಮರೆಯಬಾರದು ಸನ್ಮಾನ ಗೌರವಗಳು ತಮ್ಮ ಹೃದಯದಲ್ಲಿ ಇಟ್ಟುಕೊಳ್ಳಬೇಕೇ ಹೊರತು ಅದನ್ನು ತಮ್ಮ ಮುಡಿಯಲ್ಲಿ ಇಟ್ಟುಕೊಂಡರೆ ಅದರಂತ ಮಹಾನ್ ದೊಡ್ಡ ತಪ್ಪು ಬೇರೊಂದು ಇಲ್ಲ. ಸನ್ಮಾನಗಳು ಗೌರವಗಳು ತಾವಾಗಿ ತಾವು ತಮ್ಮನ್ನು ಹುಡುಕಿಕೊಂಡು ಬರಬೇಕೆ ಹೊರತು ನಾವಾಗಿ ನಾವು ಹುಡುಕಿಕೊಂಡು ಹೋದರೆ ಅದರಂತಹ ದೊಡ್ಡ ಅಪರಾಧ ಮತ್ತೊಂದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ವಿದ್ಯೆಗೆ ಆದ್ಯತೆ ನೀಡಿ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಬೇಕು ಎಂದರು.ಇದೇ ಸಂದರ್ಭದಲ್ಲಿ ನಿವೃತ್ತ ಕನ್ನಡ ಪ್ರಾಂಶುಪಾಲ ಸಿದ್ದೇಗೌಡ ಮಾತನಾಡಿ ಜ್ಞಾನ ಬಹು ಮುಖ್ಯವಾಗಿ ಬೇಕಾಗಿದೆ. ಏಕೆಂದರೆ ಜ್ಞಾನ ಎಂದರೆ ವ್ಯಾಪಾರಿಕವಾಗಿ ಅಲ್ಲ ವಿದ್ಯಾಭ್ಯಾಸಕ್ಕಲ್ಲ, ಪ್ರತಿಯೊಂದು ವಿಚಾರಕ್ಕೂ ಪ್ರತಿಯೊಬ್ಬರಿಗೂ ಜ್ಞಾನದ ಅವಶ್ಯಕತೆ ಹೆಚ್ಚಾಗಿದೆ. ಏಕೆಂದರೆ ಇಂದು ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಿರುವವರ ಜ್ಞಾನವನ್ನು ಆಧರಿಸಿ ಇವರು ಉನ್ನತ ಹುದ್ದೆಯಲ್ಲಿ ಇರುವುದು ಇನ್ನೂ ಕೆಲವರು ವಿದ್ಯೆ ಇಲ್ಲದೆ ಜ್ಞಾನವನ್ನು ಪಡೆದು ಜ್ಞಾನಿಗಳಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇವರು ಕೂಡ ಉನ್ನತ ಹುದ್ದೆಯಲ್ಲೇ ಇದ್ದಾರೆ. ಡಿವಿಜಿ ಅವರ ಮಾತಿನಂತೆ ಇರುವ ಕೆಲಸವನ್ನು ಮಾಡು ಅದರಲ್ಲೇ ತೃಪ್ತಿಯನ್ನು ಕೊಡು ಇಲ್ಲದೇ ಕೆಲಸವನ್ನು ಮಾಡಲು ಹೋಗಿ ಇರುವ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬೇಡ ಎಂಬ ಗಾದೆಯಂತೆ ಮನುಷ್ಯನು ಇರುವ ಕೆಲಸದಲ್ಲೇ ತೃಪ್ತಿ ಪಡಬೇಕು. ಬೇರೊಂದು ಕೆಲಸಕ್ಕೆ ಆಸೆಪಟ್ಟು ತಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಒಳ್ಳೆಯದಲ್ಲ. ಈ ಕಾರ್ಯಕ್ರಮದ ಮೂಲ ಉದ್ದೇಶ ವಿದ್ಯಾರ್ಥಿಗಳ ಯಶಸ್ಸಿನ ಕಾರ್ಯಕ್ರಮ ಎಂದು ತಿಳಿದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ ಇದರ ಮೂಲ ಉದ್ದೇಶ ನಿಮ್ಮ ಹಿಂದೆ ಇರುವ ಗುರುಗಳು ಮತ್ತು ಗುರಿಗೆ ಎರಡು ಅನ್ನು ಆದರಿಸಿ ವಿದ್ಯಾರ್ಥಿಗಳು ತಮ್ಮ ಜೀವನದ ಯಶಸ್ಸಿಗೆ ಸಹಕಾರಿಯಾಗುತ್ತದೆ ಆ ದೃಷ್ಟಿಯನ್ನು ಇಟ್ಟುಕೊಂಡು ಮಾಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ೩೫ ಜನ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್ ಟಿ. ಎ., ತಾಲೂಕು ಕೆ ಡಿ ಪಿ ಸದಸ್ಯ ಮಹೇಶ್‌ಕಬ್ಬಾಳು, ಕರ್ನಾಟಕ ಸಂಘದ ಅಧ್ಯಕ್ಷ ಆದಿಶೇಷ ಕುಮಾರ್, ಕುಂಬಾರಹಳ್ಳಿ ರಮೇಶ್, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಶೋಕ್, ಬಿಜೆಪಿ ಮುಖಂಡ ನಂಜುಂಡ ಮೈಮ್, ಕನ್ನಡ ಸಾಹಿತ್ಯ ಪರಿ?ತ್ತಿನ ಉಪಾಧ್ಯಕ್ಷ ಮುಳ್ಕೆರೆ ಪ್ರಕಾಶ್, ಮಾಧ್ಯಮ ಕಾರ್ಯದರ್ಶಿ ನಂದನ್ ಪುಟ್ಟಣ್ಣ, ಕಾರ್ಯದರ್ಶಿ ಜಬೀ ಉಲ್ಲಾ ಬೇಗ್, ಸಂಘಟನಾ ಕಾರ್ಯದರ್ಶಿ ಮಲ್ಲೇಗೌಡ, ಶಿವನಗೌಡಪಾಟೀಲ್, ಮಹಿಳಾ ಪದಾಧಿಕಾರಿಗಳಾದ ಯಶೋಧ ಜೈನ್, ಅನಿತಾ, ರೂಪ ಇನ್ನು ಮುಂತಾದವರು ಹಾಜರಿದ್ದರು.