ಗಾಂಧೀಜಿ ತತ್ವ ಸಾರುವ ಸರ್ಕಾರವೇ ಅದನ್ನು ಗಾಳಿಗೆ ತೂರುತ್ತಿವೆ

| Published : Oct 16 2025, 02:00 AM IST

ಗಾಂಧೀಜಿ ತತ್ವ ಸಾರುವ ಸರ್ಕಾರವೇ ಅದನ್ನು ಗಾಳಿಗೆ ತೂರುತ್ತಿವೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಗಳು ಗಾಂಧಿ ಹೆಸರು ಹೇಳುತ್ತಾ ಅವರ ತತ್ವಗಳನ್ನು ಗಾಳಿಗೆ ತೋರುತ್ತಿವೆ. ಮದ್ಯಪಾನ ಮಾಡುವುದು ಕುಟುಂಬಕ್ಕೆ, ಸಮಾಜಕ್ಕೆ ಮಾರಕ ಎಂಬುದನ್ನು ಗಾಂಧೀಜಿ ಅಂದೇ ಪ್ರತಿಪಾದಿಸಿದ್ದರು. ಆದರೆ, ಇಂದು ಅಧಿಕಾರದಲ್ಲಿರುವ ಸರ್ಕಾರಗಳು ಪ್ರತಿ ತಿಂಗಳು ಅಬಕಾರಿ ಇಲಾಖೆಯಿಂದ ವರಮಾನ ಹೆಚ್ಚುವಂತೆ ಮಾಡುವ ಮೂಲಕ ಇಂದು ಪರೋಕ್ಷವಾಗಿ ಜನರನ್ನು ದುಶ್ಚಟಗಳಿಗೆ ದೂಡುವ ಮೂಲಕ ಗಾಂಧಿ ತತ್ವಗಳನ್ನು ಮೂಲೆಗುಂಪು ಮಾಡುತ್ತಿವೆ. ಈ ಮಧ್ಯೆ ಧರ್ಮಸ್ಥಳ ಸ್ವಸಹಾಯ ಸಂಘ ಮದ್ಯಪಾನ ಚಟದಿಂದ ಹೊರತರುವ ಕೆಲಸದಲ್ಲಿ ತೊಡಗಿಕೊಂಡಿರವುದು ನಿಜಕ್ಕೂ ಶ್ಲಾಘನೀಯ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರಾಜ್ಯ ಸರ್ಕಾರ ಮದ್ಯಪಾನ ನಿಷೇಧದಂತಹ ಕ್ರಾಂತಿಕಾರಿ ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್. ಕೆ.ಕುಮಾರಸ್ವಾಮಿ ಹೇಳಿದರು.

ಮಹಾತ್ಮ ಗಾಂಧಿ ಅವರ ೧೫೬ನೇ ಜಯಂತಿ ಅಂಗವಾಗಿ ಮಂಗಳವಾರ ಪಟ್ಟಣದ ಪುರಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ರೋಟರಿ ಕ್ಲಬ್‌ ಹಾಗೂ ಲಯನ್ಸ್‌ ಕ್ಲಬ್‌ ಸಕಲೇಶಪುರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಗಾಂಧಿ ಸ್ಮರಣೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಗಳು ಗಾಂಧಿ ಹೆಸರು ಹೇಳುತ್ತಾ ಅವರ ತತ್ವಗಳನ್ನು ಗಾಳಿಗೆ ತೋರುತ್ತಿವೆ. ಮದ್ಯಪಾನ ಮಾಡುವುದು ಕುಟುಂಬಕ್ಕೆ, ಸಮಾಜಕ್ಕೆ ಮಾರಕ ಎಂಬುದನ್ನು ಗಾಂಧೀಜಿ ಅಂದೇ ಪ್ರತಿಪಾದಿಸಿದ್ದರು. ಆದರೆ, ಇಂದು ಅಧಿಕಾರದಲ್ಲಿರುವ ಸರ್ಕಾರಗಳು ಪ್ರತಿ ತಿಂಗಳು ಅಬಕಾರಿ ಇಲಾಖೆಯಿಂದ ವರಮಾನ ಹೆಚ್ಚುವಂತೆ ಮಾಡುವ ಮೂಲಕ ಇಂದು ಪರೋಕ್ಷವಾಗಿ ಜನರನ್ನು ದುಶ್ಚಟಗಳಿಗೆ ದೂಡುವ ಮೂಲಕ ಗಾಂಧಿ ತತ್ವಗಳನ್ನು ಮೂಲೆಗುಂಪು ಮಾಡುತ್ತಿವೆ. ಈ ಮಧ್ಯೆ ಧರ್ಮಸ್ಥಳ ಸ್ವಸಹಾಯ ಸಂಘ ಮದ್ಯಪಾನ ಚಟದಿಂದ ಹೊರತರುವ ಕೆಲಸದಲ್ಲಿ ತೊಡಗಿಕೊಂಡಿರವುದು ನಿಜಕ್ಕೂ ಶ್ಲಾಘನೀಯ ಎಂದರು.

ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ, ದೀರ್ಘಕಾಲ ಬದುಕಬೇಕಾದರೆ ದುಶ್ಚಟಗಳಿಂದ ದೂರ ಇರಬೇಕು. ಇಂದು ಮುಪ್ಪಿಗೂ ಮುನ್ನವೇ ಮರಣ ಹೊಂದುವವರ ಸಂಖ್ಯೆ ಅಧಿಕವಾಗಿದೆ. ದೇಶದಲ್ಲಿ ಶತಾಯುಷಿಗಳ ಸಂಖ್ಯೆ ಕ್ಷೀಣವಾಗಿದೆ. ತಿನ್ನುವ ಆಹಾರದಿಂದ ಹಿಡಿದು ಎಲ್ಲವೂ ವಿಷಮಯವಾಗಿದೆ. ಸ್ವಂತ ಬೆಳೆದ ಆಹಾರ ಸೇವಿಸುವುದರಿಂದ ಮಾತ್ರ ಆರೋಗ್ಯವಾಗಿರಬಹುದು. ಆರೋಗ್ಯವಂತವಾಗಿರುವುದೇ ಅದೃಷ್ಟದ ಲಕ್ಷಣ. ದುಶ್ಚಟಗಳು ಮನೆ, ಮಾನಕ್ಕೆ ಮಾರಕ. ಆದ್ದರಿಂದ ದುಶ್ಚಟಗಳಿಂದ ದೂರ ಇರುವುದು ಉತ್ತಮ ಎಂದರು. ಮಾದಕ ವಸ್ತುಗಳು ಹಲವು ಕುಟುಂಬಗಳ ನೆಮ್ಮದಿಯನ್ನೇ ಕದಡಿವೆ. ಆದ್ದರಿಂದ, ದೇಶದಿಂದ ಮಾದಕ ವಸ್ತುಗಳನ್ನು ಕಿತ್ತೆಸೆಯುವ ಕೆಲಸವಾಗಬೇಕು. ಮಹಿಳೆಯರು ತಮ್ಮಕುಟುಂಬ ಸದಸ್ಯರು ಕೆಟ್ಟ ಚಟಗಳ ದಾಸರಾಗದಂತೆ ಕಾಪಾಡುವ ಕೆಲಸ ಮಾಡಬೇಕು ಎಂದರು.

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್‌ಕುಮಾರ್, ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ಹೊನ್ನವಳ್ಳಿ ಸತೀಶ್, ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಡಾ.ನವೀನ್‌ ಚಂದ್ರಶೆಟ್ಟಿ, ಲಯನ್ಸ್ ಸಂಸ್ಥೆ ಅಧ್ಯಕ್ಷ ಗಿರೀಶ್‌ ಮಂಜುನಾಥ್, ಚನ್ನವೇಣಿ ಎಂ ಶೆಟ್ಟಿ, ಜೈ ಭೀಮ್ ಮಂಜುನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಜೇಶ್ ಮುಂತಾದವರಿದ್ದರು.