ಸಾರಾಂಶ
ಅರಣ್ಯ ಇಲಾಖೆ ಹುಲಿ ಚಲನವಲನದ ಪತ್ತೆಗಾಗಿ ಮೂರು ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾವಹಿಸಿದೆ.
ಸಿದ್ದಾಪುರ : ಇತ್ತೀಚೆಗೆ ಇಲ್ಲಿಗೆ ಸಮೀಪದ ಗುಹ್ಯ ವ್ಯಾಪ್ತಿಯ ಕೆಲಕಡೆ ಹುಲಿ ಹೆಜ್ಜೆ ಗುರುತು ಪತ್ತೆ ಆಗುವ ಮೂಲಕ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಹುಲಿ ಚಲನವಲನ ಪತ್ತೆ ಹಚ್ಚುವ ನಿಟ್ಟಿನಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಕ್ಯಾಮರ ಅಳವಡಿಸುವಂತೆ ಸ್ಥಳೀಯರಿಂದಲೂ ಆಗ್ರಹ ಕೇಳಿಬಂದಿತ್ತು. ಇದೀಗ ಸಿದ್ದಾಪುರ ವ್ಯಾಪ್ತಿಯ ಇಂಜಿಲಗೆರೆಯ ವಿಸ್ತಾ ಎಸ್ಟೇಟ್, ಸ್ಕೂಲ್ ಎಸ್ಟೇಟ್, ಸೇರಿದಂತೆ ಕೆಲ ಕಡೆ ಹುಲಿ ಚಲನವಲನದ ಹೆಜ್ಜೆ ಗುರುತು ಕಂಡುಬಂದಿದ್ದು, ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ಹುಲಿ ಚಲನವಲನ ಪತ್ತೆಗಾಗಿ ಈ ಭಾಗದ ಮೂರು ಕಡೆಗಳಲ್ಲಿ ಕ್ಯಾಮರಗಳನ್ನು ಅಳವಡಿಸಿ ನಿಗಾ ವಹಿಸಿದೆ.
ಕ್ಯಾಮರ ಅಳವಡಿಕೆ ಸಂದರ್ಭ ವಲಯ ಅರಣ್ಯಾಧಿಕಾರಿ ಶಿವರಾಂ, ಉಪ ವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಸೇರಿದಂತೆ ಆರ್ ಆರ್ ಟಿ ಸಿಬ್ಬಂದಿ ಇದ್ದರು.