ಸಾರಾಂಶ
ಕೇರಳಾಪುರ ಗ್ರಾಮ ಪಂಚಾಯ್ತಿಯ ಮುಂಬಾಗದ ಮುಖ್ಯರಸ್ತೆ ಮೈಸೂರು ಸಾಲಿಗ್ರಾಮ ಕಡೆಯಿಂದ ಬರುವ ರಸ್ತೆ ಹೊಳೆನರಸೀಪುರ ರಸ್ತೆ ಕೊಣನೂರು ಕಡೆಯಿಂದ ಬರುವ ವಾಹನಗಳು ನಾಲ್ಕು ದಿಕ್ಕುಗಳಿಂದಲೂ ವಾಹನ ಬರುತ್ತವೆ, ಆದರೆ ಯಾವುದೇ ಭಾಗದಲ್ಲಿ ರಸ್ತೆ ನಿರ್ಮಾಣದಲ್ಲಿ ಅಪಘಾತಗಳು ಆಗದಂತೆ ರಸ್ತೆ ಸುರಕ್ಷತೆಯ ಕ್ರಮಗಳನ್ನು ಅನುಸರಿಸದೇ ರಸ್ತೆ ನಿರ್ಮಾಣ ಮಾಡಿದ್ದು, ಹಲವು ದಿನಗಳಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಗ್ರಾಮಸ್ಥರು ದಾರಿ ಹೋಕರು ಅಪಘಾತಗಳಿಂದ ಪಾರಾಗುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಇಲ್ಲಿಗೆ ಸಮೀಪದ ಕೇರಳಾಪುರ ಗ್ರಾಮದ ಮೂಲಕ ಮಾಗಡಿ- ಬಾಣಾವರ ರಸ್ತೆ ಹಾದು ಹೋಗಿದ್ದು ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಕೇರಳಾಪುರ ಗ್ರಾಮದ ರಸ್ತೆಯಲ್ಲಿ ಸಾಗಬೇಕಾಗಿದೆ.ಗ್ರಾಮದ ಗ್ರಾಮ ಪಂಚಾಯ್ತಿಯ ಮುಂಬಾಗದ ಮುಖ್ಯರಸ್ತೆ ಮೈಸೂರು ಸಾಲಿಗ್ರಾಮ ಕಡೆಯಿಂದ ಬರುವ ರಸ್ತೆ ಹೊಳೆನರಸೀಪುರ ರಸ್ತೆ ಕೊಣನೂರು ಕಡೆಯಿಂದ ಬರುವ ವಾಹನಗಳು ನಾಲ್ಕು ದಿಕ್ಕುಗಳಿಂದಲೂ ವಾಹನ ಬರುತ್ತವೆ, ಆದರೆ ಯಾವುದೇ ಭಾಗದಲ್ಲಿ ರಸ್ತೆ ನಿರ್ಮಾಣದಲ್ಲಿ ಅಪಘಾತಗಳು ಆಗದಂತೆ ರಸ್ತೆ ಸುರಕ್ಷತೆಯ ಕ್ರಮಗಳನ್ನು ಅನುಸರಿಸದೇ ರಸ್ತೆ ನಿರ್ಮಾಣ ಮಾಡಿದ್ದು, ಹಲವು ದಿನಗಳಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಗ್ರಾಮಸ್ಥರು ದಾರಿ ಹೋಕರು ಅಪಘಾತಗಳಿಂದ ಪಾರಾಗುತ್ತಿದ್ದಾರೆ.
ಗ್ರಾಮದಲ್ಲಿ ನಿರ್ಮಾಣವಾಗಿರುವ ಈ ಮುಖ್ಯ ರಸ್ತೆಗೆ ನಾಲ್ಕು ಕಡೆಯಿಂದ ಸೇರುವ ರಸ್ತೆಗೆ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಬೇಕು. ಅಲ್ಲದೆ ಗ್ರಾಮದ ಈ ರಸ್ತೆ ಹಾದುಹೋಗುವ ಮಾರ್ಗದಲ್ಲಿ ಪಾದಚಾರಿ ರಸ್ತೆ ನಿರ್ಮಾಣ ಮಾಡಬೇಕು ಮತ್ತು ಹೈ ಮಾಸ್ಟ್ ದೀಪಗಳನ್ನು ಅಳವಡಿಸಬೇಕು ರಸ್ತೆ ನಿರ್ಮಾಣ ಹೊಣೆಹೊತ್ತಿರುವ ಈ ನಿಟಿನಲ್ಲಿ ಕ್ರಮಕೈಗೊಂಡು ಅಪಘಾತಗಳನ್ನು ತಪ್ಪಿಸಲು ಮುಂದಾಗಬೇಕು. ಮುಂದೆ ಆಗುವ ಅನಾಹುತಗಳಿಗೆ ಕೆ-ಶಿಪ್ ಹೊಣೆಯಾಗಬೇಕಾಗುತ್ತದೆ ಎಂದು ಕೇರಳಾಪುರ ಗ್ರಾಮಪಂಚಾಯ್ತಿ ಸದಸ್ಯರಾದ ಕೆ ಎಮ್ ಶಿವಣ್ಣ, ಶ್ರೀನಿವಾಸ್, ಸ್ವಾಮಿ, ಕರೀಗೌಡ ಬಾಬು ಇನ್ನು ಹಲವಾರು ಎಚ್ಚರಿಸಿದ್ದಾರೆ.