ಸಾರಾಂಶ
ಸಿದ್ದರಾಮಯ್ಯನವರು ಬಾದಾಮಿ ಮತಕ್ಷೇತ್ರದ ಮೇಲೆ ಅತಿಯಾದ ಪ್ರೀತಿ ಹೊಂದಿದ್ದಾರೆ.
ಕನ್ನಡಪ್ರಭ ವಾರ್ತೆ ಕೆರೂರ
ಚುನಾವಣೆಯಲ್ಲಿ ಭರವಸೆ ನೀಡಿದಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರ ಮನೆಬಾಗಿಲಿಗೆ ತಲುಪಿಸಿದೆ ಎಂದು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಜಮ್ಮನಕಟ್ಟಿಯಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಪ್ರಾರಂಭಿಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿಯ ಜೊತೆಗೆ ಪ್ರತಿ ಕೆಜಿಗೆ ₹35 ಗಳಂತೆ ₹170 ಪ್ರತಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರು ಬಾದಾಮಿ ಮತಕ್ಷೇತ್ರದ ಮೇಲೆ ಅತಿಯಾದ ಪ್ರೀತಿ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸುತ್ತಾರೆಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ನನ್ನ ತಂದೆ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ತಮ್ಮ ಜೊತೆ ಹೊಂದಿದ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೋಕಾ ಅಭ್ಯರ್ಥಿ ಸಂಯುಕ್ತಾ ಪಾಟೀಲರಿಗೆ ಹೆಚ್ಚಿನ ಮತ ಕೊಡಿಸುತ್ತೇನೆಂದು ಪಕ್ಷದ ಹಿರಿಯರಿಗೆ ಮಾತು ಕೊಟ್ಟಿದ್ದೇನೆ. ಗ್ರಾಮಸ್ಥರು ಆ ನಿಟ್ಟಿನಲ್ಲಿ ಹೆಚ್ಚಿನ ಮತಗಳನ್ನು ನೀಡಿ ಪಕ್ಷದಲ್ಲಿ ನನ್ನ ಗೌರವ ಹೆಚ್ಚಿಸಬೇಕೆಂದು ಮನವಿ ಮಾಡಿದರು.ಪ್ರಚಾರ ಸಭೆಯಲ್ಲಿ ಸತ್ಯಜೀತ ಪಾಟೀಲ, ಸಂಜಯ ಬರಗುಂಡಿ, ಬಿ.ಬಿ.ಸೂಳಿಕೇರಿ, ವೈ.ಆರ್. ಹೆಬ್ಬಳ್ಳಿ, ಪ್ರಕಾಶ ಮೇಟಿ, ಉಸ್ಮಾನಸಾಬ ಅತ್ತಾರ, ಮಲ್ಲಯ್ಯ ಹಿರೇಮಠ, ಬಸಪ್ಪ ಆಡಿನ, ಮಲ್ಲಪ್ಪ ಕೊಳ್ಳಿ, ಮಲ್ಲಪ್ಪ ಲಕ್ಕನ್ನವರ, ಮಾಂತೇಶ ಭಗವತಿ, ಯಂಕಪ್ಪ ದಳವಾಯಿ, ನಿಂಗಪ್ಪ ದಳವಾಯಿ, ಈಶ್ವರ ಹೊಸಗೌಡ್ರ, ರಂಗಪ್ಪ ಹೊಸಗೌಡ್ರ,ನೀಲಪ್ಪ ಭಗವತಿ, ಸಂಜೀವ ಚಿಮ್ಮನಕಟ್ಟಿ, ಹನಮಂತ ಹೊಸಗೌಡ್ರ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರಿದ್ದರು.