ಶರಣರ ವಚನದಲ್ಲಿರುವ ಸಂದೇಶ ಅರಿತು ನಡೆಯಿರಿ

| Published : Feb 02 2025, 01:02 AM IST

ಸಾರಾಂಶ

ಬಸವಾದಿ ಶರಣರ ವಚನಗಳಲ್ಲಿ ಅಡಕವಾಗಿರುವ ಸಂದೇಶಗಳನ್ನು ಅರಿತು ನಡೆದರೆ ಸಮಾಜ ಸುಧಾರಣೆಯಾಗುತ್ತದೆ ಎಂದು ಶಾಸಕ ಕೆ. ಎಂ ಶಿವಲಿಂಗೇಗೌಡ ಹೇಳಿದರು. ತಾಲೂಕಿನಲ್ಲಿ ಅಲ್ಪಸಂಖ್ಯಾತರಾಗಿರುವ ಮಡಿವಾಳ ಸಮಾಜ ಬಂಧುಗಳು ಸಂಘಟಿತರಾಗಲು ನನ್ನ ಸಂಪೂರ್ಣ ಸಹಕಾರ ಇದೆ. ಈಗಾಗಲೇ ನಗರ ವ್ಯಾಪ್ತಿಯಲ್ಲಿ ಸಮಾಜದವರು ಸಮುದಾಯ ಭವನ ನಿರ್ಮಿಸಲು ವೈಯಕ್ತಿಕವಾಗಿ ನಾನು ನಿವೇಶನ ಕೊಡಿಸಿದ್ದು, ಭವನ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ ₹25 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಬಸವಾದಿ ಶರಣರ ವಚನಗಳಲ್ಲಿ ಅಡಕವಾಗಿರುವ ಸಂದೇಶಗಳನ್ನು ಅರಿತು ನಡೆದರೆ ಸಮಾಜ ಸುಧಾರಣೆಯಾಗುತ್ತದೆ ಎಂದು ಶಾಸಕ ಕೆ. ಎಂ ಶಿವಲಿಂಗೇಗೌಡ ಹೇಳಿದರು.

ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಸ್ಪೃಷ್ಯತೆ ಜಾತಿ ಜಾತಿಗಳ ನಡುವೆ ನಡೆಯುತ್ತಿದ್ದ ಸಂಘರ್ಷದ ವಿರುದ್ಧ ಬಸವಾದಿ ಶರಣರು ನಡೆಸಿದ ಕ್ರಾಂತಿ ಇಂದಿಗೂ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು.

ತಾಲೂಕಿನಲ್ಲಿ ಅಲ್ಪಸಂಖ್ಯಾತರಾಗಿರುವ ಮಡಿವಾಳ ಸಮಾಜ ಬಂಧುಗಳು ಸಂಘಟಿತರಾಗಲು ನನ್ನ ಸಂಪೂರ್ಣ ಸಹಕಾರ ಇದೆ. ಈಗಾಗಲೇ ನಗರ ವ್ಯಾಪ್ತಿಯಲ್ಲಿ ಸಮಾಜದವರು ಸಮುದಾಯ ಭವನ ನಿರ್ಮಿಸಲು ವೈಯಕ್ತಿಕವಾಗಿ ನಾನು ನಿವೇಶನ ಕೊಡಿಸಿದ್ದು, ಭವನ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ ₹25 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ ಎಂದು ಹೇಳಿದರು.

ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಶಿವಣ್ಣ ಮಾತನಾಡಿ, ಸಣ್ಣ ಪ್ರಮಾಣದಲ್ಲಿರುವ ನಮ್ಮ ಸಮಾಜದ ಬಂಧುಗಳ ಜತೆ ಶಾಸಕರ ಒಡನಾಟ ಸಮಾಜದ ಬಂಧುಗಳ ಪ್ರೀತಿಗೆ ಪಾತ್ರವಾಗಿದೆ. ನಮ್ಮ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರಿಗಿರುವ ಕಾಳಜಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ತಹಸೀಲ್ದಾರ್ ಸಂತೋಷ್ ಕುಮಾರ್, ವೇದಿಕೆಯಲ್ಲಿ ಮಡಿವಾಳ ಸಮಾಜದ ಉಪಾಧ್ಯಕ್ಷ ದೇವರಾಜ್, ಸಮಾಜದ ಮುಖಂಡ ವೇದವ್ಯಾಸ, ತಾಲೂಕು ಪಂಚಾಯಿತಿ ಕಾರ್ಯಾ ನಿರ್ಮಾಣ ಅಧಿಕಾರಿ ಸತೀಶ್ ಉಪಸ್ಥಿತರಿದ್ದರು.