ಸಾರಾಂಶ
ನಾನು ಯಾರಿಗೂ ಕೇಡು ಬಗೆಯುವನಲ್ಲ, ನನ್ನ ಪಕ್ಷದವರೇ ನನ್ನ ವಿರುದ್ಧ ಮಾತನಾಡುತ್ತಿದ್ದು ಅಭಿವೃದ್ಧಿ ಕೆಲಸಗಳಿಗೂ ನನ್ನ ಪಕ್ಷದ ಸದಸ್ಯರೇ ಅಡ್ಡಗಾಲು ಹಾಕುತ್ತಿದ್ದಾರೆ. ಇಂತಹ ಮಾಟ ಮಂತ್ರಗಳಿಗೆ ಹೆದರುವವನು ನಾನಲ್ಲ. ಭಗವಂತನ ಆಶೀರ್ವಾದ ನನಗಿದೆ. ಇದಕ್ಕೆಕಾಲವೇ ಉತ್ತರ ಕೊಡುತ್ತದೆ. ತಮ್ಮ ಕೊಠಡಿ ಸಮೀಪ ಇರುವ ಮರಕ್ಕೆ ಮಂತ್ರಿಸಿದ ನಿಂಬೆಹಣ್ಣು, ತಾಯತ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಕಿದ್ದು, ವಾಮಾಚಾರ ನಡೆಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್ ಅಶೋಕ್ ದೂರಿದ್ದಾರೆ.
ಕನ್ನಡಪ್ರಭ ವಾರ್ತೆ ಬೇಲೂರು
ತಮ್ಮ ಕೊಠಡಿ ಸಮೀಪ ಇರುವ ಮರಕ್ಕೆ ಮಂತ್ರಿಸಿದ ನಿಂಬೆಹಣ್ಣು, ತಾಯತ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಕಿದ್ದು, ವಾಮಾಚಾರ ನಡೆಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್ ಅಶೋಕ್ ದೂರಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರಿಗೂ ಕೇಡು ಬಗೆಯುವನಲ್ಲ, ನನ್ನ ಪಕ್ಷದವರೇ ನನ್ನ ವಿರುದ್ಧ ಮಾತನಾಡುತ್ತಿದ್ದು ಅಭಿವೃದ್ಧಿ ಕೆಲಸಗಳಿಗೂ ನನ್ನ ಪಕ್ಷದ ಸದಸ್ಯರೇ ಅಡ್ಡಗಾಲು ಹಾಕುತ್ತಿದ್ದಾರೆ. ಇಂತಹ ಮಾಟ ಮಂತ್ರಗಳಿಗೆ ಹೆದರುವವನು ನಾನಲ್ಲ. ಭಗವಂತನ ಆಶೀರ್ವಾದ ನನಗಿದೆ. ಇದಕ್ಕೆಕಾಲವೇ ಉತ್ತರ ಕೊಡುತ್ತದೆ ಎಂದರು.
ಯಾರು ಇಂತಹ ಕೆಟ್ಟ ಕೆಲಸ ಮಾಡಿದ್ದಾರೆ ಅದು ಅವರಿಗೆ ಆಗುತ್ತದೆ. ನನಗೆ ಸಿಕ್ಕಿರುವ ಅಲ್ಪಾವಧಿಯಲ್ಲಿ ನಾನು ಜನಸೇವೆ ಮಾಡುವುದು ನನ್ನ ಕರ್ತವ್ಯವಾಗಿದೆ. ಇಂತಹ ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ ಎಂದು ಹೇಳಿ, ನೌಕರರ ಜೊತೆ ಸೇರಿ ವಾಮಾಚಾರದ ವಸ್ತುಗಳನ್ನು ತಾವೇ ತೆಗೆದು ಬೆಂಕಿಯಲ್ಲಿ ಸುಟ್ಟು ಹಾಕಿದರು.ಈ ಸಂದರ್ಭದಲ್ಲಿ ಸದಸ್ಯರಾದ ಬಿ ಆರ್ ಅಶೋಕ್, ಸೌಮ್ಯ ಸುಬ್ರಹ್ಮಣ್ಯ, ಜಮಿಲಾ ತೌಫಿಕ್, ಸಿಬ್ಬಂದಿಗಳಾದ ನಟರಾಜ್, ಚೇತನ್, ವಿಶ್ವನಾಥ, ಇತರರು ಹಾಜರಿದ್ದರು.