ಸಾರಾಂಶ
ಸಂಘವು ಕೋಟ, ಬಾರ್ಕೂರು, ಸಾಸ್ತಾನ, ಕೊಕ್ಕರ್ಣೆ, ಉಡುಪಿ-ಪುತ್ತೂರು, ಹೂಡೆ ಸೇರಿದಂತೆ ಸಂಘದ ಕಾರ್ಯವ್ಯಾಪ್ತಿಯಲ್ಲಿ ೬ ಬ್ಯಾಕಿಂಗ್ ಶಾಖೆಗಳನ್ನು, ೧೩೧೨೪ ಸದಸ್ಯರ ಬಲ ಹೊಂದಿದೆ. ೧.೩೫ ಕೋಟಿ ರು. ಪಾಲು ಬಂಡವಾಳ, ೭೧.೩೨ ಕೋಟಿ ರು. ಠೇವಣಿ, ೫೪.೦೪ ಕೋಟಿ ರೂ. ಹೊರಬಾಕಿ ಸಾಲ ಇದೆ.
ಕನ್ನಡಪ್ರಭ ವಾರ್ತೆ ಕೋಟ
ಇಲ್ಲಿನ ಮೂರ್ತೆದಾರರ ಸಹಕಾರಿ ಸಂಘವು ೨೦೨೩-೨೪ನೇ ಸಾಲಿನಲ್ಲಿ ೩೦೨ ಕೋಟಿ ರು. ವ್ಯವಹಾರ ನಡೆಸಿ, ೧.೦೬ ಕೋಟಿ ರು.ನಿವ್ವಳ ಲಾಭ ಗಳಿಸಿದೆ ಮತ್ತು ಶೇ. ೧೨ ಲಾಭಾಂಶವನ್ನು ಘೋಷಿಸಿದೆ.ಸಂಘದ ಪ್ರಧಾನ ಕಚೇರಿಯಲ್ಲಿ ಜರುಗಿದ ೩೩ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ವಿವರಗಳನ್ನು ನೀಡಿದರು.
ಸಂಘವು ಕೋಟ, ಬಾರ್ಕೂರು, ಸಾಸ್ತಾನ, ಕೊಕ್ಕರ್ಣೆ, ಉಡುಪಿ-ಪುತ್ತೂರು, ಹೂಡೆ ಸೇರಿದಂತೆ ಸಂಘದ ಕಾರ್ಯವ್ಯಾಪ್ತಿಯಲ್ಲಿ ೬ ಬ್ಯಾಕಿಂಗ್ ಶಾಖೆಗಳನ್ನು, ೧೩೧೨೪ ಸದಸ್ಯರ ಬಲ ಹೊಂದಿದೆ. ೧.೩೫ ಕೋಟಿ ರು. ಪಾಲು ಬಂಡವಾಳ, ೭೧.೩೨ ಕೋಟಿ ರು. ಠೇವಣಿ, ೫೪.೦೪ ಕೋಟಿ ರೂ. ಹೊರಬಾಕಿ ಸಾಲ ಇದೆ. ಸಂಘದ ದುಡಿಯುವ ಬಂಡವಾಳ ೮೩.೨೯ ಕೋಟಿಗೂ ಮೀರಿದೆ. ಸತತ ೨೮ ವರ್ಷಗಳಿಂದ ‘ಎ’ ಗ್ರೇಡ್ ಆಡಿಟ್ ವರ್ಗೀಕರಣ ಪಡೆದಿರುತ್ತದೆ ಎಂದು ಹೇಳಿದರು.ಸಂಘವು ಮಹಿಳಾ ಸಶಕ್ತೀಕರಣಕ್ಕಾಗಿ ೨೭೭ ಕಲ್ಪತರು ಮಹಿಳಾ ಸ್ವಸಹಾಯ ಗುಂಪುಗಳನ್ನು ಪ್ರಾಯೋಜಿಸಿದ್ದು ೬.೩೮ ಕೋಟಿ ರು. ಸಾಲ ಸೌಲಭ್ಯ ಒದಗಿಸಿದೆ ಎಂದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು, ಉಪಾಧ್ಯಕ್ಷ ಜಯರಾಮ ಪೂಜಾರಿ ಬಾರ್ಕೂರು, ಮಾಜಿ ಅಧ್ಯಕ್ಷ ರಾಜು ಪೂಜಾರಿ ಮತ್ತು ಪಿ.ಕೃಷ್ಣ ಪೂಜಾರಿ ಪಾರಂಪಳ್ಳಿ, ನಿರ್ದೇಶಕರಾದ ಜಿ. ಸಂಜೀವ ಪೂಜಾರಿ ಕೋಡಿ, ರಾಮ ಪೂಜಾರಿ, ಮಂಜುನಾಥ ಪೂಜಾರಿ ಬಾರ್ಕೂರು, ಕೃಷ್ಣ ಪೂಜಾರಿ ಪಿ. ಕೋಡಿಕನ್ಯಾಣ, ಪ್ರಭಾವತಿ ಡಿ. ಬಿಲ್ಲವ ಕೋಟ, ಭಾರತಿ ಎಸ್. ಪೂಜಾರಿ ಕರಿಕಲ್ಕಟ್ಟೆ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಕೃಷ್ಣ ಉಪಸ್ಥಿತರಿದ್ದರು.ಕೋಟ ಶಾಖೆಯ ವ್ಯವಸ್ಥಾಪಕ ದಿನೇಶ್ ಪೂಜಾರಿ ಬಾರ್ಕೂರು ಸ್ವಾಗತಿಸಿದರು. ಲೋಹಿತ್ ಜಿ.ಬಿ. ವಂದಿಸಿದರು. ಶಾಖಾ ವ್ಯವಸ್ಥಾಪಕರಾದ ಉದಯ ಪೂಜಾರಿ ಕೋಡಿ, ರಮೇಶ್ ಪೂಜಾರಿ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.