ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ (ನಿರ್ಗುಣ ಮಠ) ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಒಟ್ಟು 1,14,38,440 ನಗದು ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ತಿಳಿಸಿದರು.

ದೇವಲ ಗಾಣಗಾಪುರ: ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ (ನಿರ್ಗುಣ ಮಠ) ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಒಟ್ಟು 1,14,38,440 ನಗದು ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ತಿಳಿಸಿದರು.

ಹುಂಡಿ ಎಣಿಕೆ ಕಾರ್ಯದ ಕುರಿತು ಮಾಹಿತಿ ನೀಡಿದ ಅವರು, ಭಕ್ತರು ದತ್ತಾತ್ರೇಯನಿಗೆ ಸಮರ್ಪಿಸಿದ ಕಾಣಿಕೆ ಹಣದ ಜತೆಗೆ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ. ಹುಂಡಿಯಲ್ಲಿ ಒಟ್ಟು ಒಂದು ಕೋಟಿ ಹದಿನಾಲ್ಕು ಲಕ್ಷದ ಮೂವತ್ತೆಂಟು ಸಾವಿರದ ನಾಲ್ಕುನೂರ ನಲವತ್ತು ರೂಪಾಯಿ ನಗದು ದೊರೆತಿದೆ. ಅಲ್ಲದೆ, ಗಟ್ಟಿ ಖಡ್ಗ, ಹೂವು, ಪತ್ತಾ, ಪಾದುಕಾ ಸಹಿತ ಸುಮಾರು 11 ತೊಲೆ ಚಿನ್ನ ಹಾಗೂ ಚೈನ್, ಕುದುರೆ ಮತ್ತು ದತ್ತನ ಮೂರ್ತಿ ಸಹಿತ 32 ತೊಲೆ ಬೆಳ್ಳಿ ಆಭರಣಗಳು ದೊರೆತಿವೆ ಎಂದು ಮಾಹಿತಿ ನೀಡಿದರು.

ಹುಂಡಿ ಎಣಿಕೆ ಕಾರ್ಯದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಪ್ರೊಟೊಕಾಲ್ ತಹಸೀಲ್ದಾರ್ ಗಂಗಾಧರ ಪಾಟೀಲ್, ಶಿರಸ್ತೇದಾರರಾದ ಶೀಲಾ, ಶ್ರೀಧರ, ಮಹೇಶ ಸೇರಿದಂತೆ ಸಿಬ್ಬಂದಿ, ಅಫಜಲಪುರ ತಹಸೀಲ್ದಾರ್ ಕಚೇರಿ ಸಿಬ್ಬಂದಿ, ದೇವಲ ಗಾಣಗಾಪುರದ ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ಹಾಗೂ ದೇವಸ್ಥಾನದ ಸಿಬ್ಬಂದಿ ದತ್ತು ನಿಂಬರ್ಗಿ, ರಮೇಶ ಪಟೇದ್, ಧನರಾಜ, ಶರಣಯ್ಯ ಸ್ವಾಮಿ, ಕಮಲೇಶ ಸೇರಿದಂತೆ ಹಲವರು ಪಾಲ್ಗೊಂಡು ಸಹಕರಿಸಿದರು.

ಹುಂಡಿ ಎಣಿಕೆ ಕಾರ್ಯ ಸುಗಮವಾಗಿ ನಡೆಯಲು ದೇವಲ ಗಾಣಗಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.