1.18ಕೋಟಿ ಕಾಮಗಾರಿಗೆ ಶಾಸಕ ಎಚ್.ವಾಯ್.ಮೇಟಿ ಚಾಲನೆ

| Published : Nov 15 2024, 12:30 AM IST

ಸಾರಾಂಶ

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಸಿಸಿ ಚರಂಡಿ, ಪ್ಲೆವ್ ಬ್ಲಾಕ್ ರಸ್ತೆ ನಿರ್ಮಾಣ, ಘನತ್ಯಾಜ್ಯ ವಸ್ತು ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಕಮತಗಿ

ಪಟ್ಟಣದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯಿಂದ ₹1.18ಕೋಟಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕ ಎಚ್.ವಾಯ್.ಮೇಟಿ ಹೇಳಿದರು.

ಪಟ್ಟಣದಲ್ಲಿನ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದ ಹತ್ತಿರ ಪಟ್ಟಣ ಪಂಚಾಯಿತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸ್ಥಳೀಯ ಪಟ್ಟಣ ಪಂಚಾಯಿತಿ 2024-25ನೇ ಸಾಲಿನ ಎಸ್‌ಎಫ್‌ಸಿಯ 15ನೇ ಹಣಕಾಸು ಮತ್ತು ಎಸ್‌ಬಿಎಮ್-1 ಮತ್ತು 2 ಹಾಗೂ ಸ್ಥಳೀಯ ಅನುದಾನದಡಿಯಲ್ಲಿ ಕಾಯ್ದಿರಿಸಿದ ಅಂದಾಜು ₹1.18ಕೋಟಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಸಿಸಿ ಚರಂಡಿ, ಪ್ಲೆವ್ ಬ್ಲಾಕ್ ರಸ್ತೆ ನಿರ್ಮಾಣ, ಘನತ್ಯಾಜ್ಯ ವಸ್ತು ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾಕಿ ಊಳಿದಿರುವ ಕಾಮಗಾರಿ ಕೈಗಳ್ಳಲಾಗುವುದು ಎಂದರು.

ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರಗೇಶ ಐ ಕಡ್ಲಿಮಟ್ಟಿ, ಪಪಂ ಅಧ್ಯಕ್ಷ ರಮೇಶ ಎಸ್.ಜಮಖಂಡಿ, ಪಪಂ ಸದಸ್ಯರಾದ ದೇವಿಪ್ರಸಾದ ನಿಂಬಲಗುಂದಿ, ಗುರಲಿಂಗಪ್ಪ ಪಾಟೀಲ, ಬಸವರಾಜ ಕುಂಬಳಾವತಿ, ಚಂದು ಕುರಿ, ಲಕ್ಷ್ಮಣ ಮಾದರ ಮುಖಂಡರಾದ ಹುಚ್ಚಪ್ಪ ಸಿಂಹಾಸನ, ಎಸ್.ಎಸ್.ಮಂಕಣಿ, ಮಾರುದ್ರಪ್ಪ ಚೌಡಾಪೂರ, ಲಕ್ಷ್ಮಣ ದ್ಯಾಮಣ್ಣವರ, ಗೋಪಾಲ ವನಕಿ, ಶ್ರೀಕಾಂತ ಹಾಸಲಕರ, ಹನಮಂತ ಕಡಿವಾಲ, ಮಲ್ಲಪ್ಪ ಲೆಕ್ಕದ, ಸೇಕಪ್ಪ ಕೋಳೂರ, ಹುಚ್ಚೇಶ ಗೋಕಾವಿ, ನಾಗೇಶ ಮುರಾಳ, ತಿಮ್ಮಣ್ಣ ಹಗೇದಾಳ, ಗಂಗಪ್ಪ ಭೂತಲ, ಪಪಂ ನಾಮನಿರ್ದೇಶಿತ ಹಾಗೂ ಆಶ್ರಯ ಕಮಿಟಿ ಸದಸ್ಯರು, ಪಪಂ ಮುಖಾಧಿಕಾರಿ ಎಫ್.ಎನ್.ಹುಲ್ಲಿಕೇರಿ, ಪಪಂ ಸಿಬ್ಬಂದಿ ಇದ್ದರು.