ಲಕ್ಷ್ಮೇಶ್ವರ ಪುರಸಭೆಯಿಂದ ಕುಡಿಯುವ ನೀರಿಗೆ ₹1.52 ಕೋಟಿ ಅನುದಾನ

| Published : Mar 12 2024, 02:01 AM IST

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಪುರಸಭೆಯ ೨೦೨೪-೨೫ನೇ ಸಾಲಿನಲ್ಲಿ ₹೨೪.44 ಕೋಟಿ ಗಾತ್ರದ ಬಜೆಟ್‌ನ್ನು ಮುಖ್ಯಾಧಿಕಾರಿ ಮಹೇಶ ಹಡಪದ ಮಂಡಿಸಿದರು. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆಯ ನಿಧಿಯಿಂದ ₹೮೦ ಲಕ್ಷ ಅನುದಾನ, ₹೭೨ ಲಕ್ಷ ಅನುದಾನ ಸೇರಿ ಒಟ್ಟು ₹೧.೫೨ ಕೋಟಿ ಮೀಸಲಿಡಲಾಗಿದೆ.

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ೨೦೨೪-೨೫ನೇ ಸಾಲಿನಲ್ಲಿ ₹೨೪.44 ಕೋಟಿ ಗಾತ್ರದ ಬಜೆಟ್‌ನ್ನು ಮುಖ್ಯಾಧಿಕಾರಿ ಮಹೇಶ ಹಡಪದ ಮಂಡಿಸಿದರು. ಪುರಸಭೆಯ ಸಭಾಭವನದಲ್ಲಿ ಸೋಮವಾರ ನಡೆದ ಬಜೆಟ್ ಮಂಡನೆ ಸಭೆಯ ನಂತರ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆಯ ನಿಧಿಯಿಂದ ₹೮೦ ಲಕ್ಷ ಅನುದಾನ, ₹೭೨ ಲಕ್ಷ ಅನುದಾನ ಸೇರಿ ಒಟ್ಟು ₹೧.೫೨ ಕೋಟಿ ಮೀಸಲಿಡಲಾಗಿದೆ. ಎಸ್ಎಫ್‌ಸಿ ಮುಕ್ತಿ ನಿಧಿ, ೧೫ನೇ ಹಣಕಾಸು ಮತ್ತು ಇತರ ಅನುದಾನದ ಮೂಲದಿಂದ ₹೯.71 ಕೋಟಿ ಮೀಸಲಿಡಲಾಗಿದೆ. ಇತರ ಅಸಾಮಾನ್ಯ ಖಾತೆಯಿಂದ ₹೧.೨೮ ಕೋಟಿ ಹೀಗೆ ಒಟ್ಟು ₹೧೪.70 ಕೋಟಿ ಮತ್ತು ಆರಂಭಿಕ ಶಿಲ್ಕು ₹೯.೭೩ ಲಕ್ಷ ಸೇರಿ ಬಜೆಟ್‌ ಗಾತ್ರ ₹೨೪.೪೪ ಕೋಟಿ ಇರುತ್ತದೆ.

ಅದೇ ರೀತಿ ಬೀದಿದೀಪ, ವಿದ್ಯುತ್ ಬಿಲ್, ರಸ್ತೆ ಮತ್ತು ಚರಂಡಿ, ಪುರಸಭೆಯ ನೌಕರರ ವೇತನ, ಸರ್ಕಾರಕ್ಕೆ ಕಟ್ಟಬೇಕಾದ ಉಪ ಕರ ಮತ್ತು ತೆರಿಗೆ ಹಾಗೂ ಬಾಕಿ ಕಾಮಗಾರಿಗಳಿಗೆ ಅನುದಾನ, ಜೆಡಿಎಸ್ ಎಂಟಿ ಮಳಿಗೆ ನಿರ್ಮಾಣ ಸೇರಿದಂತೆ ₹೨೩.೬೧ ಕೋಟಿ ವಿನಿಯೋಗಿಸಿದ ಆನಂತರ ಒಟ್ಟು ಪುರಸಭೆಗೆ ₹೮೨.೩೨ ಲಕ್ಷ ಉಳಿತಾಯ ಅಂದಾಜಿಸಲಾಗಿದೆ ಎಂದು ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.

ಬಜೆಟ್ ಸಭೆಯಲ್ಲಿ ಪುರಸಭೆ ಸದಸ್ಯ ಜಯಕ್ಕ ಕಳ್ಳಿ, ಜಯಕ್ಕ ಅಂದಲಗಿ, ಪೂರ್ಣಿಮಾ ಪಾಟೀಲ, ಬಸವರಾಜ ಓದುವವರು, ಪ್ರವೀಣ್ ಬಾಳಿಕಾಯಿ, ರಾಮು ಗಡದವರ. ಫಿರ್ದೋಷ್ ಅಡೂರು, ಸಾಹೀಬಜಾನ್ ಹವಾಲ್ದಾರ್, ಮಹಾದೇವಪ್ಪ ಅಣ್ಣಿಗೇರಿ, ಪೂಜಾ ಕರಾಟೆ, ವಾಣಿ ಹತ್ತಿ, ನೀಲಮ್ಮ ಮೆಣಸಿನಕಾಯಿ, ಮಂಜವ್ವ ಗುಂಜಾಳ, ಕವಿತಾ ಶೆರಸೂರಿ, ಮಂಜವ್ವ ನಂದೆಣ್ಣವರ, ಕಿರಿಯ ಎಂಜಿನಿಯರ್ ಜೆ.ಕೆ‌. ಉಳ್ಳಟ್ಟಿ. ಮಹೇಶ್ ಹೊಸಮನಿ, ಕಂದಾಯ ಅಧಿಕಾರಿ ಶಿವಾನಂದ ಅಜ್ಜಣ್ಣವರ, ಹನುಮಂತಪ್ಪ ನಂದೆಣ್ಣವರ, ಶಿವಣ್ಣ ಮ್ಯಾಗೇರಿ, ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮತ್ತು ಎಸ್.ವಿ. ಬೆಳ್ಳಿಕೊಪ್ಪ ಇದ್ದರು.