ಯುವನಿಧಿಗೆ ೧,೫೬೭ ಜನರು ನೋಂದಣಿ

| Published : Jan 12 2024, 01:45 AM IST

ಯುವನಿಧಿಗೆ ೧,೫೬೭ ಜನರು ನೋಂದಣಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ನೋಂದಣಿಗೆ ಪ್ರಕ್ರಿಯೆ ಆರಂಭವಾಗಿದ್ದು, ಉತ್ತರ ಕನ್ನಡದಲ್ಲಿ ಅಂದಾಜು ೬,೩೭೨ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ೧,೫೬೭ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಕಾರವಾರ:

ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ನೋಂದಣಿಗೆ ಪ್ರಕ್ರಿಯೆ ಆರಂಭವಾಗಿದ್ದು, ಉತ್ತರ ಕನ್ನಡದಲ್ಲಿ ಅಂದಾಜು ೬,೩೭೨ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ೧,೫೬೭ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಶುಕ್ರವಾರ ಜಾರಿಗೆ ಬರುತ್ತಿದ್ದು, ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಇದು ಒಂದಾಗಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನ ಭಾಗ್ಯ ಯೋಜನೆಯ ಈಗಾಗಲೇ ಜಾರಿಗೆ ಬಂದಿದ್ದು, ಯುವ ನಿಧಿ ಅನುಷ್ಠಾನವಾಗುತ್ತಿದೆ. ಡಿಪ್ಲೊಮಾ, ಪದವಿ ಉತ್ತೀರ್ಣರಾದ ಯುವಕರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ.

ಅಂಕೋಲಾದಲ್ಲಿ ಗುರುತಿಸಿದ ೩೦೮ ಜನರಲ್ಲಿ ೧೭೩, ಭಟ್ಕಳದಲ್ಲಿ ೪೧೯ರಲ್ಲಿ ೧೫೯, ದಾಂಡೇಲಿಯಲ್ಲಿ ೨೭೪ರಲ್ಲಿ ೫೨, ಹಳಿಯಾಳದಲ್ಲಿ ೩೩೬ರಲ್ಲಿ ೧೧೩, ಹೊನ್ನಾವರ ೬೬೬ರಲ್ಲಿ ೧೪೬, ಕಾರವಾರ ೧೦೨೭ರಲ್ಲಿ ೧೨೦, ಕುಮಟಾ ೭೮೮ರಲ್ಲಿ ೨೦೫, ಮುಂಡಗೋಡ ೨೨೮ರಲ್ಲಿ ೧೩೮, ಸಿದ್ದಾಪುರ ೩೯೨ರಲ್ಲಿ ೧೪೨, ಶಿರಸಿಯಲ್ಲಿ ೧೩೮೯ರಲ್ಲಿ ೧೯೨, ಜೋಯಿಡಾ ೧೪೪ರಲ್ಲಿ ೫೮, ಯಲ್ಲಾಪುರ ೨೨೧ ಜನರ ಗುರುತಿಸಲಾಗಿದ್ದು, ೬೯ ಜನರು ನೋಂದಣಿ ಮಾಡಿಕೊಂಡಿದ್ದಾರೆ.

ಜಿಲ್ಲಾಡಳಿತದಿಂದ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ೨೨ ಪದವಿ, ೮ ಡಿಪ್ಲೊಮಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿ ಪಡೆದು ಅವರನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲು ಸೂಚಿಸಲಾಗಿದೆ. ಸ್ಥಳೀಯ ತಹಸೀಲ್ದಾರ್ ಕಚೇರಿ, ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಯೋಜನೆ ಬಗ್ಗೆ ಪ್ರಚುರ ಪಡಿಸಲು ಹೇಳಲಾಗಿದೆ. ಜಿಲ್ಲೆಯಲ್ಲಿ ಯೋಜನೆಯ ಆರಂಭದಲ್ಲಿ ಫಲಾನುಭವಿಗಳ ಸಂಖ್ಯೆ ಕಡಿಮೆಯಿದ್ದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ಪ್ರಯೋಜನ ಪಡೆದುಕೊಳ್ಳುವ ಸಾಧ್ಯತೆಯಿದೆ.