ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿಯಲ್ಲಿದ್ದು ಇದುವರೆಗೆ ಮತದಾರರ ಪಟ್ಟಿಯಿಂದ ೧.೬೯ ಲಕ್ಷ ಮಂದಿಯನ್ನು ಕೈಬಿಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ಒಟ್ಟು ೧೫,೭೫,೮೪೯ ಮತದಾರರ ಪೈಕಿ ೧,೬೯, ೦೩೭ ಜನರನ್ನು ಕೈಬಿಡಲಾಗಿದೆ. ಶೇ.೧೦.೭೩ರಷ್ಟು ಮಂದಿ ಪರಿಷ್ಕರಣೆ ವೇಳೆ ಮತಪಟ್ಟಿಯಿಂದ ಹೊರಬಿದ್ದಿದ್ದಾರೆ. ೧೧೪೩ ಮತಗಟ್ಟೆಗಳಲ್ಲಿ ಶೇ.೯೦ರಷ್ಟು ಮತದಾರರ ಪಟ್ಟಿಯನ್ನು ಆನ್‌ಲೈನ್‌ಗೆ ಅಪ್ಲೋಡ್ ಮಾಡಲಾಗಿದ್ದು, ಒಂದು ಮತಗಟ್ಟೆಯಲ್ಲಿ ಶೇ.೧೦೦ರಷ್ಟು ಆನ್‌ಲೈನ್ ಅಪ್ಲೋಡ್ ಕಾರ್ಯ ಪೂರ್ಣಗೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ೨೫,೨೬೪ ಮಂದಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಅವರನ್ನು ಪತ್ತೆ ಹಚ್ಚುವುದಕ್ಕೂ ಸಾಧ್ಯವಾಗಿಲ್ಲ. ೮೬,೪೩೯ ಮಂದಿ ಶಾಶ್ವತ ವರ್ಗಾವಣೆಯಾಗಿದ್ದರೆ, ೧೪,೨೭೭ ಜನರು ಎರಡು ಕಡೆ ಮತದಾನದ ಹಕ್ಕನ್ನು ಹೊಂದಿದ್ದರೆ, ೪೨,೫೪೯ ಮಂದಿ ಸಾವನ್ನಪ್ಪಿದ್ದು, ೫೦೮ ಮಂದಿ ಇತರೆ ಮತದಾರರಿರುವುದು ಕಂಡುಬಂದಿದೆ.

ಮತದಾರರ ಪಟ್ಟಿ ಸೇರ್ಪಡೆಗೆ ಆನ್‌ಲೈನ್‌ನಲ್ಲಿ ೬೧ ಮಂದಿ ಅರ್ಜಿಯನ್ನು ಸಲ್ಲಿಸಿದ್ದಾರೆ. ೧೪,೦೫,೩೧೩ ಮಂದಿ ಮತದಾರರ ಪಟ್ಟಿಯನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡುವ ಮೂಲಕ ೮೯.೧೮ ಪ್ರಗತಿ ಸಾಧಿಸಿದ್ದರೆ, ೧೪೯೯ ಮತದಾರರ ಪಟ್ಟಿಯನ್ನು ಅಪ್‌ಲೋಡ್ ಮಾಡಬೇಕಿದೆ. ಶೇ.೦.೧೦ರಷ್ಟು ಪ್ರಗತಿ ಸಾಧಿಸಬೇಕಿದೆ.


ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಳ್ಳುವುದಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಜು.೮ಕ್ಕೆ ಪರಿಷ್ಕರಣೆ ಕಾರ್ಯ ಅಂತಿಮಗೊಳ್ಳಲಿದೆ. ಅಧಿಕೃತ ಮತದಾರರ ಪಟ್ಟಿಯನ್ನು ಆನ್‌ಲೈನ್‌ಗೆ ಅಪ್ಲೋಡ್ ಮಾಡಿದ ಬಳಿಕ ಆ ನಂತರವೂ ಹೆಸರು ಕೈಬಿಟ್ಟುಹೋಗಿದ್ದರೆ ಸೇರಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.ಉದ್ಯೋಗಾಕಾಂಕ್ಷಿಗಳಿಗೆ ಇಂದು ನೇರ ಸಂದರ್ಶನ

ಮಂಡ್ಯ:ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಗೋಲ್ಡನ್ ಬ್ರಿಡ್ಜ್ ಪ್ರೋಪರ್ಟಿಸ್, ಮೆ.ಎಚ್.ಡಿ.ಎಫ್.ಸಿ ಲೈಫ್ ಇನ್ಸೂರೆನ್ಸ್ ಮತ್ತು ಮೆ.ಇನ್‌ಕಾಸ್ಟ್ ಮಿಷನ್ ಸಂಸ್ಥೆಗಳ ಸಹಯೋಗದಲ್ಲಿ ಆ.6ರಂದು ಬೆಳಗ್ಗೆ 10 ಗಂಟೆಗೆ ಖಾಲಿ ಇರುವ ಹುದ್ದೆಗಳಿಗೆ ‘ನೇರಸಂದರ್ಶನ’ ವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಲಾಗಿದೆ.

ನೇರ ಸಂದರ್ಶನದಲ್ಲಿ ಸದರಿ ಸಂಸ್ಥೆಯಲ್ಲಿ ಖಾಲಿಯಿರುವ ಟೆಲಿಕರ್ಸ್ ಹಾಗೂ ಬ್ಯೂಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಹಾಗೂ ಮಿಷನ್ ವೆಲ್ಡರ್ & ಫಿಟ್ಟರ್ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಿದ್ದು, ಮಂಡ್ಯ ಹಾಗೂ ಮೈಸೂರು ಸ್ಥಳಗಳಲ್ಲಿ ಕೆಲಸ ಮಾಡಲು ಎಸ್ಎಸ್ಎಲ್‌ಸಿ, ಪಿಯುಸಿ, ಐಟಿಐ (ವೆಲ್ಡರ್ & ಫಿಟ್ಟರ್) ಹಾಗೂ ಯಾವುದೇ ಪದವಿ ಉತ್ತೀರ್ಣರಾಗಿರುವ 18 ರಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳು ತಮ್ಮ ರೆಸ್ಯೂಮ್/ ಬಯೋಡೇಟಾಗಳೊಂದಿಗೆ ನೇರಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ-9164642684, 9113500761, 9113875775, ಮತ್ತು 9741939716 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.