ಬ್ಯಾಡಗಿ ಮಾರುಕಟ್ಟೆಗೆ 1.72 ಲಕ್ಷ ಮೆಣಸಿನಕಾಯಿ ಚೀಲ ಆವಕ

| Published : Jan 28 2025, 12:46 AM IST

ಬ್ಯಾಡಗಿ ಮಾರುಕಟ್ಟೆಗೆ 1.72 ಲಕ್ಷ ಮೆಣಸಿನಕಾಯಿ ಚೀಲ ಆವಕ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ (ಜ. 27) ಒಟ್ಟು 1.72 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಆದರೆ ದರಗಳಲ್ಲಿ ಮಾತ್ರ ಸ್ಥಿರತೆ ಕಂಡು ಬಂದಿದೆ.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ (ಜ. 27) ಒಟ್ಟು 1.72 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಆದರೆ ದರಗಳಲ್ಲಿ ಮಾತ್ರ ಸ್ಥಿರತೆ ಕಂಡು ಬಂದಿದೆ. ಕಳೆದ ಗುರುವಾರ 1.25 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿ ಉತ್ತಮ ದರಗಳನ್ನು ಪಡೆದಿದ್ದವು. ಇದೀಗ ಸೋಮವಾರ ಆವಕ ಒಂದೂವರೆ ಲಕ್ಷದ ಗಡಿಯನ್ನು ದಾಟಿದೆ. ಕಳೆದ ವರ್ಷ ನವೆಂಬರ್‌ನಿಂದಲೇ ಮೆಣಸಿನಕಾಯಿ ಆವಕದಲ್ಲಿ ಏರಿಕೆ ಕಂಡಿತ್ತು. ಆದರೆ ಪ್ರಸಕ್ತ ವರ್ಷ ಕೊಂಚ ನಿಧಾನಗತಿಯಿಂದ ಆವಕವಾಗುತ್ತಿದ್ದು, ಜನವರಿ ತಿಂಗಳ ಸಂಕ್ರಾಂತಿಯ ಬಳಿಕ ಮೆಣಸಿನಕಾಯಿ ಆವಕದಲ್ಲಿ ಏರಿಕೆ ಕಂಡು ಬಂದಿರುತ್ತಿದೆ.50 ಸಾವಿರ ಚೀಲ ಹೆಚ್ಚಿಗೆ: ಕಡ್ಡಿ, ಡಬ್ಬಿ ಹಾಗೂ ಗುಂಟೂರ 3 ತಳಿ ಮೆಣಸಿನಕಾಯಿ ಆವಕದಲ್ಲಿ ಚೇತರಿಕೆ ಕಂಡು ಬಂದಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ 50 ಸಾವಿರ ಚೀಲಗಳ ಆಸುಪಾಸಿನಲ್ಲಿದ್ದ ಆವಕ, ಇದೀಗ ಒಂದೂವರೆ ಲಕ್ಷದ ಗಡಿ ದಾಟಿದ್ದು 1.71.996 ಚೀಲಗಳಷ್ಟು ಆವಕವಾಗುವ ಮೂಲಕ ಚೇತರಿಕೆಯತ್ತ ಸಾಗಿದೆ.ದರದಲ್ಲಿ ಮುಂದುವರೆದ ಸ್ಥಿರತೆ: ಕಳೆದ ವರ್ಷದ ಸೀಸನ್ ಆರಂಭದಲ್ಲಿ ಕಡ್ಡಿ ಮತ್ತು ಡಬ್ಬಿ ತಳಿ ಮೆಣಸಿನಕಾಯಿ ದರಗಳಲ್ಲಿ ಪೈಪೋಟಿಯುಂಟಾಗಿ ಪ್ರತಿ ಕ್ವಿಂಟಲ್ ಮೆಣಸಿನಕಾಯಿ ಬೆಲೆ 1 ಲಕ್ಷ ಸಮೀಪಿಸಿತ್ತು. ಆದರೆ ಪ್ರಸಕ್ತ ವರ್ಷ ಇಂತಹ ದರಗಳ ಅಬ್ಬರ ಮಾತ್ರ ಕಾಣದೇ ಸ್ಥಿರತೆ ಕಾಯ್ದುಕೊಂಡಿದೆ. ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ ಕನಿಷ್ಠ 3000 ಗರಿಷ್ಠ 35009, ಸರಾಸರಿ 28989, ಡಬ್ಬಿತಳಿ ಕನಿಷ್ಠ 3200 ಗರಿಷ್ಠ 44009, ಸರಾಸರಿ 30109, ಗುಂಟೂರು ಕನಿಷ್ಠ 1009 ಗರಿಷ್ಠ 16709 ಸರಾಸರಿ 14359 ರು.ಗಳಿಗೆ ಮಾರಾಟವಾಗಿವೆ.