ಲಕ್ಕವಳ್ಳಿ ಗ್ರಾಮಕ್ಕೆ ₹1.83 ಕೋಟಿ ಅನುದಾನ: ಜಿ.ಎಚ್.ಶ್ರೀನಿವಾಸ್

| Published : Apr 05 2025, 12:48 AM IST

ಲಕ್ಕವಳ್ಳಿ ಗ್ರಾಮಕ್ಕೆ ₹1.83 ಕೋಟಿ ಅನುದಾನ: ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಕಳೆದ ಎರಡು ವರ್ಷದ ಅವಧಿಯಲ್ಲಿ ಲಕ್ಕವಳ್ಳಿ ಗ್ರಾಮಕ್ಕೆ ₹1.83 ಕೋಟಿ ಅನುದಾನ ನೀಡಲಾಗಿದೆ. ಇದೀಗ ₹3 ಕೋಟಿ ಗಳಿಗೂ ಹೆಚ್ಚಿನ ಅನುದಾನವನ್ನು ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ಕರಕುಚ್ಚಿ ಗ್ರಾಮದಲ್ಲಿ 50 ಲಕ್ಷ ವೆಚ್ಚದ ಸಿ.ಸಿ ರಸ್ತೆಗೆ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಕಳೆದ ಎರಡು ವರ್ಷದ ಅವಧಿಯಲ್ಲಿ ಲಕ್ಕವಳ್ಳಿ ಗ್ರಾಮಕ್ಕೆ ₹1.83 ಕೋಟಿ ಅನುದಾನ ನೀಡಲಾಗಿದೆ. ಇದೀಗ ₹3 ಕೋಟಿ ಗಳಿಗೂ ಹೆಚ್ಚಿನ ಅನುದಾನವನ್ನು ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.ಶುಕ್ರವಾರ ತಾಲೂಕಿನ ಲಕ್ಕವಳ್ಳಿ ಹೋಬಳಿ ಕರಕುಚ್ಚಿ ಗ್ರಾಮದಲ್ಲಿ ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಲಕ್ಕವಳ್ಳಿ ಹೋಬಳಿ ವ್ಯಾಪ್ತಿಯ ಕರಕುಚ್ಚಿ ಬಿ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆಗೆ ₹50 ಲಕ್ಷ ರಂಗೇನಹಳ್ಳಿ ಟಿ.ಎಂ.ರಸ್ತೆಯಿಂದ ಸೋಂಪುರಕ್ಕೆ ಹೋಗುವ ರಸ್ತೆ ನಿರ್ಮಾಣಕ್ಕೆ ₹50 ಲಕ್ಷ , ಲಕ್ಕವಳ್ಳಿ ಗ್ರಾಮದ ಶನೇಶ್ವರ ದೇವಸ್ಥಾನದಿಂದ ಮಾರಿಗದ್ದುಗೆವರೆಗೆ ಡಾಂಬರೀಕರಣ ರಸ್ತೆಗೆ ₹27 ಲಕ್ಷ, ಗಾಂಧಿನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ₹10 ಲಕ್ಷ, ಬರಗೇನಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ₹40 ಲಕ್ಷ, ಲಕ್ಕವಳ್ಳಿ ಮುಖ್ಯ ರಸ್ತೆ ಅಭಿವೃದ್ದಿಗೆ ₹2. 80 ಕೋಟಿ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ಸದಸ್ಯ ಎಚ್.ವಿಶ್ವನಾಥ್, ಗ್ರಾಪಂ ಸದಸ್ಯ ರಾದ ಶಾಂತಿಬಾಯಿ, ಮಹೇಶ್, ಮೋಹನ್, ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯಿಬಾಯಿ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಮಣಿಕಂಠ, ಲಕ್ಕವಳ್ಳಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್.ಮಂಜುನಾಥ್‌ ಲಾಡ್, ಮುಖಂಡರಾದ ಬಿ.ಎನ್. ಕೃಷ್ಣಮೂರ್ತಿ, ಗೋವಿಂದನಾಯ್ಕ, ರಾಮಾನಾಯ್ಕ, ಟಾಕ್ರಾನಾಯ್ಕ ಹಾಗೂ ಮತ್ತಿತರರು ಭಾಗವಹಿಸಿದ್ದರು.

4ಕೆಟಿಆರ್.ಕೆ.6ಃ

ತರೀಕೆರೆ ಸಮೀಪದ ಕರಕುಚ್ಚಿ ಗ್ರಾಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ₹50 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮತ್ತಿತರರು ಇದ್ದರು.