ಹೊಳೆಹೊನ್ನೂರಿನ ಪ್ರತಿ ಸಹಕಾರ ಸಂಘಕ್ಕೂ 1 ಕೋಟಿ ಅನುದಾನ

| Published : Aug 26 2024, 01:34 AM IST

ಹೊಳೆಹೊನ್ನೂರಿನ ಪ್ರತಿ ಸಹಕಾರ ಸಂಘಕ್ಕೂ 1 ಕೋಟಿ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ನಿರ್ದೇಶಕರು ಮನಸ್ಸು ಮಾಡಿ ಹೊಳೆಹೊನ್ನೂರು, ಆನವೇರಿ, ಅಗರದಹಳ್ಳಿ ಮತ್ತು ಕಲ್ಲಿಹಾಳ್ ನಡುವೆ ಬರುವ ಅರಹತೊಳಲು ಕೈಮರದಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯಬೇಕು ಎಂದು ಮನವಿ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಕಲವೇ ದಿನಗಳಲ್ಲಿ ತಾಲೂಕಿನ ಪ್ರತೀ ಸಹಕಾರ ಸಂಘಕ್ಕೂ ತಲಾ ₹1 ಕೋಟಿ ಅನುದಾನ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೂತನ ನಿರ್ದೇಶಕ ಸಿ.ಹನುಮಂತು ಹೇಳಿದರು.

ಸಮೀಪದ ಅರಹತೊಳಲು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೂತನ ನಿರ್ದೇಶಕರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಸಹಕಾರ ಸಂಘಗಳ ಅಭಿವೃದ್ಧಿಗೆ ಸದಸ್ಯರ ಬೆಂಬಲದ ಜೊತೆಗೆ ಕೇಂದ್ರ ಬ್ಯಾಂಕ್‌ ನಿರ್ದೇಶಕರ ಜವಾಬ್ದಾರಿಯೂ ಇರಬೇಕು. ಆ ನಿಟ್ಟಿನಲ್ಲಿ ಸಾಧ್ಯವಾದಷ್ಟು ಸೇವೆ ನೀಡುವ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬಂದಿರುವೆ. ಎಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಸಹಕಾರ ಸಂಘದ ಮಾಜಿ ಸಿಇಒ ಎ.ಸಿ.ಚಂದ್ರಶೇಖರ್ ಮಾತನಾಡಿ, ಕೇಂದ್ರ ಸರ್ಕಾರದ ನೂತನ ಆದೇಶದಂತೆ ಜಿಲ್ಲೆಯಲ್ಲಿ 10 ಡಿಸಿಸಿ ಬ್ಯಾಂಕ್ ನ ಶಾಖೆಗಳನ್ನು ತೆರೆಯಬೇಕು ಎಂಬ ಮಾಹಿತಿ ಇದೆ. ಆದ್ದರಿಂದ ನೂತನ ನಿರ್ದೇಶಕರು ಮನಸ್ಸು ಮಾಡಿ ಹೊಳೆಹೊನ್ನೂರು, ಆನವೇರಿ, ಅಗರದಹಳ್ಳಿ ಮತ್ತು ಕಲ್ಲಿಹಾಳ್ ನಡುವೆ ಬರುವ ಅರಹತೊಳಲು ಕೈಮರದಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯಬೇಕು ಎಂದು ಮನವಿ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ಆರ್.ಬಸವರಾಜಪ್ಪ ವಹಿಸಿದ್ದರು, ಉಪಾಧ್ಯಕ್ಷ ಡಿ.ಎಚ್.ಪಾಲಾಕ್ಷಪ್ಪ, ನಿರ್ದೇಶಕ ಎ.ಎಮ್. ಮಲ್ಲಿಕಾರ್ಜುನ್, ಸಿದ್ದಪ್ಪ, ರೇಖಾ, ಯತೀಶ್ವರಾಚಾರ್, ಮಹೇಶಪ್ಪ, ಎಲ್.ಎಸ್.ರವಿಕುಮಾರ್, ಸ್ವಾಮಿ. ಗ್ರಾಮಸ್ಥರಾದ ಮಲ್ಲಿಕಾರ್ಜುನ್ ಪಟೇಲ್, ಸಿ.ಪಿ.ಚಂದ್ರಶೇಖರ್, ಎ.ಬಿ.ಮಲ್ಲೇಶಪ್ಪ, ಎ.ಎಮ್.ಹಾಲೇಶಪ್ಪ, ಎಮ್.ಶಶಿಧರ್, ಸುರೇಶ್, ಎನ್.ಟಿ.ಸಂಗನಾಥ್, ಆರ್.ಪ್ರಭಾಕರ್, ಕೆ.ರಾಜಪ್ಪ, ಕೆ.ಆರ್.ಶ್ರೀಧರ್ ಸೇರಿದಂತೆ ಇತರರು ಇದ್ದರು.