1 ಕೋಟಿ ರು. ವೆಚ್ಚದ ಹುಳಿಗೆರೆ ಕೆರೆ ಅಭಿವೃದ್ಧಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Oct 04 2024, 01:06 AM IST

1 ಕೋಟಿ ರು. ವೆಚ್ಚದ ಹುಳಿಗೆರೆ ಕೆರೆ ಅಭಿವೃದ್ಧಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಫೀಡರ್ ಹಳ್ಳ ಮತ್ತು ಕೋಡಿಹಳ್ಳದಲ್ಲಿ ಜಂಗಲ್ ಮತ್ತು ಹೂಳು ತೆಗೆಯುವ ಕೆಲಸದ ಜತೆಗೆ ಚರಂಡಿ ಸ್ವಚ್ಛಗೊಳಿಸಲಾಗುವುದು. ಇದಕ್ಕಾಗಿ 1 ಕೋಟಿ ರು. ಮಂಜುರಾಗಿದೆ. ಇನ್ನು ಹೆಚ್ಚುವರಿ ಅನುದಾನದ ಅಗತ್ಯವಿದೆ. ಸರ್ಕಾರದಿಂದ ಬಿಡುಗಡೆಗೆ ಅಗತ್ಯ ಕ್ರಮ ವಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಹುಳಿಗೆರೆ ಕೆರೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 1ಕೋಟಿ ರು. ಮಂಜೂರಾಗಿದೆ. ಇನ್ನು ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಾಮಗಾರಿಯಲ್ಲಿ ಕೆರೆ ಕೋಡಿ ಹಳ್ಳದಲ್ಲಿ 106 ಮೀಟರ್ ವರೆಗೆ ಸಂರಕ್ಷಣಾ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಜತೆಗೆ ಎರಡು ಬಾಕ್ಸ್ ಕಲ್ವರ್ಟ್ ನಿರ್ಮಾಣ ಮಾಡಲಾಗುವುದು ಎಂದರು.

ಫೀಡರ್ ಹಳ್ಳ ಮತ್ತು ಕೋಡಿಹಳ್ಳದಲ್ಲಿ ಜಂಗಲ್ ಮತ್ತು ಹೂಳು ತೆಗೆಯುವ ಕೆಲಸದ ಜತೆಗೆ ಚರಂಡಿ ಸ್ವಚ್ಛಗೊಳಿಸಲಾಗುವುದು. ಇದಕ್ಕಾಗಿ 1 ಕೋಟಿ ರು. ಮಂಜುರಾಗಿದೆ. ಇನ್ನು ಹೆಚ್ಚುವರಿ ಅನುದಾನದ ಅಗತ್ಯವಿದೆ. ಸರ್ಕಾರದಿಂದ ಬಿಡುಗಡೆಗೆ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಪಂ ಮಾಜಿ ಸದಸ್ಯ ಎಚ್.ತ್ಯಾಗರಾಜು, ನಾರಾಯಣಪುರ ಗ್ರಾಪಂ ಅಧ್ಯಕ್ಷ ಕೋಡಾಲ ಪ್ರಕಾಶ್, ಮಾಜಿ ಅಧ್ಯಕ್ಷ ಹೊಸಹಳ್ಳಿ ನಾಗರಾಜು, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜನಿಯರ್ ಶಂಕರ್, ಸಹಾಯಕ ಕಾರ್ಯಪಾಲಕ ಎಂಜನಿಯರ್ ನಿರ್ಮಲೇಶ್, ಸಹಾಯಕ ಎಂಜಿನಿಯರ್ ವಿಜಯದರ್ಶನ್ ಹಾಗೂ ರೈತಸಂಘದ ಮುಖಂಡರು, ಗ್ರಾಮದ ಯುವಕರು ಸೇರಿದಂತೆ ಇತರರಿದ್ದರು.