ಶಾನ್ವಿ ಸತೀಶ್‌ಗೆ 1 ಚಿನ್ನ, 2 ಬೆಳ್ಳಿ ಪದಕ

| Published : Apr 29 2024, 01:34 AM IST

ಸಾರಾಂಶ

ರಾಮನಗರ: ದುಬೈನ ಪೊಲೀಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 6ರಿಂದ 8 ವರ್ಷದೊಳಗಿನ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಸ್ಪಾರಿಂಗ್ ಮತ್ತು ಪ್ಯಾಟರ್ನ್ಸ್ ಸ್ಪರ್ಧೆಯಲ್ಲಿ ಭಾರತ ದೇಶದಿಂದ ಪ್ರತಿನಿಧಿಸಿ ರಾಮನಗರದ ಶಾನ್ವಿ ಸತೀಶ್ ಒಂದು ಚಿನ್ನ, ಎರಡು ಬೆಳ್ಳಿ ಪದಕ ಗೆದ್ದಿದ್ದಾರೆ.

ರಾಮನಗರ: ದುಬೈನ ಪೊಲೀಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 6ರಿಂದ 8 ವರ್ಷದೊಳಗಿನ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಸ್ಪಾರಿಂಗ್ ಮತ್ತು ಪ್ಯಾಟರ್ನ್ಸ್ ಸ್ಪರ್ಧೆಯಲ್ಲಿ ಭಾರತ ದೇಶದಿಂದ ಪ್ರತಿನಿಧಿಸಿ ರಾಮನಗರದ ಶಾನ್ವಿ ಸತೀಶ್ ಒಂದು ಚಿನ್ನ, ಎರಡು ಬೆಳ್ಳಿ ಪದಕ ಗೆದ್ದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಯುಎಇ, ಕಜಾಕಿಸ್ತಾನ, ಬಾಂಗ್ಲಾದೇಶ , ರಷ್ಯಾ , ಇತಿಯೋಪಿಯ ಮತ್ತು , ಉಜ್ಬೇಕಿಸ್ತಾನ್ ರಾಷ್ಟ್ರದ 250 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಭಾರತ ದೇಶದಿಂದ 28 ಮಂದಿ ಸ್ಪರ್ಧಿಗಳು ಇದ್ದರು.

ಶಾನ್ವಿಗೆ ಅಂತಿಮ ಪಂದ್ಯದಲ್ಲಿ ಯುಎಇ ಸ್ಪರ್ಧಾಳು ಎದುರಾಳಿಯಾಗಿದ್ದರು. ಕೊನೆಯ ಸ್ಪಾರಿಂಗ್ ಪಂದ್ಯದಲ್ಲಿ ಶಾನ್ವಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡರು.

ರಾಮನಗರ ನೇಟಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶಾನ್ವಿ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ರಾಮನಗರ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್ ಅವರ ಪುತ್ರಿಯಾಗಿದ್ದಾರೆ.

1 ಚಿನ್ನ, 2ಬೆಳ್ಳಿ ಪದಕ ಗಳಿಸಿ ಭಾರತಕ್ಕೆ ಕೀರ್ತಿ ತಂದಿರುವ ಶಾನ್ವಿಗೆ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಮತ್ತು ಉಪ ವಿಭಾಗಾಧಿಕಾರಿ ವಿ.ಆರ್ ವಿಶ್ವನಾಥ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಶಿವಸ್ವಾಮಿ, ಖಜಾಂಚಿ ರಾಜಶೇಖರ ಮೂರ್ತಿ, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್ ಹಾಗೂ ನೇಟಸ್ ಶಾಲೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಮತ್ತು ತರಬೇತುದಾರ ಬಾಲರಾಜನ್ ಅಭಿನಂದಿಸಿದ್ದಾರೆ.

28ಕೆಆರ್ ಎಂಎನ್ 3.ಜೆಪಿಜಿ

ಅಂತರ ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಶಾನ್ವಿ ಸತೀಶ್ 1 ಚಿನ್ನ , 2 ಬೆಳ್ಲಿ ಗೆದ್ದಿರುವುದು.