ದರೋಡೆ ಪ್ರಕರಣ: 10 ಮಂದಿ ಬಂಧನ, 20.91 ಲಕ್ಷ ರು. ವಶ

| Published : Oct 15 2023, 12:46 AM IST

ಸಾರಾಂಶ

ತಾಲೂಕಿನ ಬೆಂಡಗಳ್ಳಿ ಗೇಟ್‌ ಬಳಿ ಕಳೆದ ಸೆ.27ರ ರಾತ್ರಿ ದರೋಡೆ ಪ್ರಕರಣ ಸಂಬಂಧ 10 ಮಂದಿ ಬಂಧಿಸಿದ್ದು ಅವರಿಂದ ಪೊಲೀಸರು 20.91 ಲಕ್ಷ ರು. ವಶಪಡಿಸಿಕೊಂಡಿದ್ದಾರೆ. ಕೇರಳ ಮೂಲದ ರಹೀಂ ಹಾಗೂ ಸ್ನೇಹಿತ ನೌಫಲ್‌ ಜತೆ ಕೆಎ 01 ಎಂಆರ್‌ 3286 ಇಟಿಯಾಸ್‌ ಕಾರಲ್ಲಿ ಕೇರಳಕ್ಕೆ ತೆರಳುತ್ತಿದ್ದಾಗ ಸೆ.27ರ ರಾತ್ರಿ ಅಡ್ಡಗಟ್ಟಿ 40 ಲಕ್ಷ ರು ದರೋಡೆ ನಡೆಸಿದ್ದರು
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ ಗೇಟ್‌ ಬಳಿ ಕಳೆದ ಸೆ.27ರ ರಾತ್ರಿ ದರೋಡೆ ಪ್ರಕರಣ ಸಂಬಂಧ 10 ಮಂದಿ ಬಂಧಿಸಿದ್ದು ಅವರಿಂದ ಪೊಲೀಸರು 20.91 ಲಕ್ಷ ರು. ವಶಪಡಿಸಿಕೊಂಡಿದ್ದಾರೆ. ಕೇರಳ ಮೂಲದ ರಹೀಂ ಹಾಗೂ ಸ್ನೇಹಿತ ನೌಫಲ್‌ ಜತೆ ಕೆಎ 01 ಎಂಆರ್‌ 3286 ಇಟಿಯಾಸ್‌ ಕಾರಲ್ಲಿ ಕೇರಳಕ್ಕೆ ತೆರಳುತ್ತಿದ್ದಾಗ ಸೆ.27ರ ರಾತ್ರಿ ಅಡ್ಡಗಟ್ಟಿ 40 ಲಕ್ಷ ರು ದರೋಡೆ ನಡೆಸಿದ್ದರು. ಈ ಸಂಬಂಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ವಿ.ಸಿ. ವನರಾಜು ನೇತೃತ್ವದಲ್ಲಿ ಚಾ.ನಗರ ಪೂರ್ವ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್‌ ನೇತೃತ್ವದಲ್ಲಿ ತಂಡ ರಚಿಸಿದ್ದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌ ಹಾಗೂ ಪೊಲೀಸ್‌ ಉಪಾಧೀಕ್ಷಕ ಲಕ್ಷ್ಮಯ್ಯ ಮಾರ್ಗದಲ್ಲಿ ಶ್ರೀಕಾಂತ್‌ ನೇತೃತ್ವದ ತಂಡ ದರೋಡೆ ಪ್ರಕರಣ ನಡೆದ ನಂತರ ತಮಿಳುನಾಡು, ಗೋವಾಗೆ ತೆರಳಿ ಆರೋಪಿಗಳ ಮಾಹಿತಿ ಕಲೆ ಹಾಕಿದ್ದರು. 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಬಳಿಕ 20.91 ಲಕ್ಷ ರು. ನಗದು, 4 ಲಕ್ಷ ರು. ಮೌಲ್ಯದ ಕಾರು, 30 ಸಾವಿರ ರು. ಮೌಲ್ಯದ ವಾಚು, 10 ಸಾವಿರ ರು. ಮೌಲ್ಯದ ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಲಾದ 3 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ದರೋಡೆ ಪ್ರಮುಖ ಆರೋಪಗಳ ಪತ್ತೆಯಾಗಿಲ್ಲ. ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ ಗೇಟ್‌ ಬಳಿ ದರೋಡೆ ಪ್ರಕರಣ ಸಂಬಂಧ 10 ಮಂದಿ ಬಂಧಿಸಿ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.