ಸಾರಾಂಶ
ಕೊಪ್ಪಳ:
ವಿವಿಧ ಕಾರಣಗಳಿಂದಾಗಿ ಮನಸ್ತಾಪ ಉಂಟಾಗಿ ವಿಚ್ಚೇದನಕ್ಕೆ ಅರ್ಜಿ ಹಾಕಿ, ನ್ಯಾಯಾಲಯಕ್ಕೆ ಅಲೆಯುತ್ತಿದ್ದ 10 ಜೋಡಿಗಳು ಲೋಕ ಅದಾಲತ್‌ನಲ್ಲಿ ಒಂದಾಗಿದ್ದಾರೆ.ಕೊಪ್ಪಳ ಸೇರಿದಂತೆ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ನಡೆದ ಲೋಕಅದಾಲತ್‌ನಲ್ಲಿ ಹತ್ತು ಜೋಡಿಗಳು ನಾವು ಮತ್ತೆ ಒಂದಾಗಿ ಬಾಳುತ್ತೇವೆ ಎಂದು ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು, ಒಂದಾಗಿ ಬಾಳಲು ನಿರ್ಧರಿಸಿದ್ದಾರೆ.
೫೨೮೭ ಪ್ರಕರಣ ಇತ್ಯರ್ಥ:ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ ಪ್ರಕರಣ, ಜನನ-ಮರಣ, ಸಿವಿಲ್ ಕೇಸ್, ಕ್ರಿಮಿನಲ್ ಕೇಸ್, ಮೋಟಾರ್ ವಾಹನ ಅಪಘಾತ ಹಾಗೂ ಇತ್ಯಾದಿ ಸೇರಿದಂತೆ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿ ಒಟ್ಟು ೬೮೭೩ ಪ್ರಕರಣಗಳ ಪೈಕಿ ೫೨೮೭ ಪ್ರಕರಣ ಇತ್ಯರ್ಥ ಮಾಡಲಾಗಿದೆ.
ದಾಖಲೆಯ ಮೌಲ್ಯ:ವಿವಿಧ ಪ್ರಕರಣಗಳ ಇತ್ಯರ್ಥ ಮಾಡಲಾದ ಮೌಲ್ಯವೇ ಬರೋಬ್ಬರಿ ೨೨,೧೬,೬೪,೧೨೫ ಆಗಿದೆ. ಪೂರ್ವ ದಾವೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ೫೧೩೦೬ ಪ್ರಕರಣಗಳ ಪೈಕಿ ೪೩೬೭೬ ಪ್ರಕರಣಗಳ ಮೌಲ್ಯವೇ ₹ ೫,೯೫,೧೫,೫೨೭ ಆಗಿದೆ. ಒಂದೇ ದಿನದಲ್ಲಿ ಒಟ್ಟು ೫೦೫೭೮ ಪ್ರಕರಣಗಳ ಪೈಕಿ ೪೮೯೯೨ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇದರ ಒಟ್ಟು ಮೌಲ್ಯ ₹ ೨೮,೨೩,೦೪,೬೫೨ ಆಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದಾದ ಜೋಡಿ:ಗಂಗಾವತಿ:ವಿಚ್ಚೇದನಕ್ಕೆ ಮುಂದಾಗಿದ್ದ ದಂಪತಿಯನ್ನು ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾದರು. ಈ ಮೂಲಕ ವರ್ಷದಿಂದ ಮುನಿಸಿಕೊಂಡಿದ್ದ ಜೋಡಿ ಮತ್ತೆ ಕೈಕೈ ಹಿಡಿದು ಜೀವನ ಪೂರ್ತಿ ಜತೆಯಾಗಿ ಇರುತ್ತೇವೆಂದು ಸಾರಿತು.
2024ರಲ್ಲಿ ಕಾರಟಗಿಯ ಬಿ. ರಾಘವೇಂದ್ರ ಅವರೊಂದಿಗೆ ದುರ್ಗಾಭವಾನಿ ವಿವಾಹವಾಗಿತ್ತು. ಬಳಿಕ ಇಬ್ಬರ ನಡುವೆ ಭಿನ್ನಮಯ ಏರ್ಪಟ್ಟು ವಿಚ್ಚೇದನಕ್ಕೆ ಮುಂದಾಗಿದ್ದರು. ಅದಾಲತ್‌ನಲ್ಲಿ ನ್ಯಾಯಾಧೀಶರು ಇಬ್ಬರಿಗೆ ಮನವರಿಕೆ ಮಾಡಿ ಪುನಃ ಪರಸ್ಪರ ಹೂವಿನ ಹಾಕಿ ಹಾಕಿಸುವ ಮೂಲಕ ಒಂದಾಗಿ ಬಾಳುವಂತೆ ಹೇಳಿದರು.2223 ಪ್ರಕರಣ ಇತ್ಯರ್ಥ:ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 2223 ಪ್ರಕರಣ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡವು. ನಾಲ್ಕು ನ್ಯಾಯಾಲಯದಲ್ಲಿ 10144 ಪ್ರಕರಣಗಳಿದ್ದು ಇದರಲ್ಲಿ 2510 ಪ್ರಕರಣಗಳಿಗೆ ಅದಾಲತ್‌ನಲ್ಲಿ ಆಹ್ವಾನಿಸಲಾಗಿತ್ತು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 15 ಮೋಟಾರು ವಾಹನ ಸೇರಿದಂತೆ 172, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 15 ಮೋಟಾರು ವಾಹನ, ಒಂದು ವೈವಾಹಿಕ ಪ್ರಕರಣ, 13 ಬ್ಯಾಂಕ್ ಪ್ರಕರಣ, 6 ಚೆಕ್ ಬೌನ್ಸ್ ಸೇರಿದಂತೆ ಒಟ್ಟು 45, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 11 ಚೆಕ್ ಬೌನ್ಸ್, 86 ಜನನ, ಮರಣ, 1090 ಕ್ರಿಮಿನಲ್ ಪ್ರಕರಣ ಸೇರಿ ಒಟ್ಟು 1293, ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 5 ಚೆಕ್ ಬೌನ್ಸ್,1 ಕೌಟುಂಬಿಕ, 124 ಜನನ ಮರಣ, 613 ಕ್ರಿಮಿನಲ್ ಪ್ರಕರಣ, ಇತರ 32 ಸೇರಿ 775 ಪ್ರಕರಣ ಇತ್ಯರ್ತಗೊಂಡವು.₹ 4 ಕೋಟಿ ಸಂಗ್ರಹ:
ನಾಲ್ಕು ನ್ಯಾಯಾಲಯದಲ್ಲಿ ನಡೆದ ರಾಜೀ ಸಂಧಾನದಲ್ಲಿ ₹ 4,49,35,214 ಸಂಗ್ರಹಿಸಿ ಸರ್ಕಾರಕ್ಕೆ ಸಂದಾಯಿಸಲಾಗಿದೆ.ಈ ವೇಳೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಹಿರಿಯ ಸಿವಿಲ್ ನ್ಯಾಯಾಧೀಶ ಗುಡಪ್ಪ ಬಸವಣೆಪ್ಪ ಹಳ್ಳಾಕಾಯಿ , ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮೇಘಾ ಸೋಮಣ್ಣನವರ ಹಾಗೂ ವಕೀಲರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಇದ್ದರು.