ಯಲಬುರ್ಗಾ ಕ್ಷೇತ್ರಕ್ಕೆ ೧೦ ಕೆಪಿಎಸ್ ಶಾಲೆ ಶೀಘ್ರ ಮಂಜೂರು

| Published : Sep 03 2025, 01:01 AM IST

ಯಲಬುರ್ಗಾ ಕ್ಷೇತ್ರಕ್ಕೆ ೧೦ ಕೆಪಿಎಸ್ ಶಾಲೆ ಶೀಘ್ರ ಮಂಜೂರು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಂಗನಾಳ, ಹಿರೇಅರಳಿಹಳ್ಳಿ, ರಾಜೂರು-ಆಡೂರು, ಬಳೂಟಗಿ, ಹಿರೇಮ್ಯಾಗೇರಿ, ತಳಕಲ್, ಗಾಣಧಾಳ ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದೇ ತಿಂಗಳಲ್ಲಿ ಮಂಜೂರು ಮಾಡಿಸಲಾಗುತ್ತದೆ.

ಯಲಬುರ್ಗಾ:

ಕ್ಷೇತ್ರಕ್ಕೆ ಸೆಪ್ಟೆಂಬರ್ ಒಳಗಾಗಿ ೧೦ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಮಂಜೂರು ಮಾಡಿಸಲಾಗುವುದು ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಚಿಕ್ಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೊಸಳ್ಳಿ-ಚಿಕ್ಕೊಪ್ಪ ತಾಂಡಾದಲ್ಲಿ ನೂತನ ಶೀತಲ ಶೇಖರಣೆ ಕೇಂದ್ರ ಎಪಿಎಂಸಿ ಯಾರ್ಡ್ ಮತ್ತು ನೂತನ ಪ್ರೌಢಶಾಲೆಯ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಂಗನಾಳ, ಹಿರೇಅರಳಿಹಳ್ಳಿ, ರಾಜೂರು-ಆಡೂರು, ಬಳೂಟಗಿ, ಹಿರೇಮ್ಯಾಗೇರಿ, ತಳಕಲ್, ಗಾಣಧಾಳ ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದೇ ತಿಂಗಳಲ್ಲಿ ಮಂಜೂರು ಮಾಡಿಸಲಾಗುತ್ತದೆ. ಹೊಸೂರು-ಚಿಕ್ಕೊಪ್ಪ ತಾಂಡಾಕ್ಕೆ ರೈತರ ಅನುಕೂಲಕ್ಕಾಗಿ ಬೆಳೆದ ಆಹಾರ ಧಾನ್ಯ ಶೇಖರಣೆ ಮಾಡಲು ೨೮೫೦ ಮೆಟ್ರಿಕ್ ಟನ್ ಆಹಾರ ಶೇಖರಣೆ ಕೇಂದ್ರ ನಿರ್ಮಾಣವಾಗಲಿದೆ ಎಂದರು.ಈ ವೇಳೆ ಡಿಡಿಪಿಐ ಸೋಮಶೇಖರಗೌಡ ಪಾಟೀಲ್, ಬಿಇಒ ಅಶೋಕ ಗೌಡರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ‌. ಧರಣಾ, ಪ್ರಮುಖರಾದ ಎ.ಜಿ. ಭಾವಿಮನಿ, ಸಂಗಣ್ಣ ತೆಂಗಿನಕಾಯಿ, ಹೇಮರೆಡ್ಡಿ ರಡ್ಡೇರ, ಅಂದಾನಗೌಡ ಬಳೂಟಗಿ, ನಿಂಗಪ್ಪ ಕಮತರ, ರಾಜಶೇಖರ ಶ್ಯಾಗೋಟಿ ಸೇರಿದಂತೆ ಮತ್ತಿತರರು ಇದ್ದರು.