ಎಸ್ ಎಲ್ ಸಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ವೈಯಕ್ತಿಕವಾಗಿ 10 ಲಕ್ಷ ರು.ಮೀಸಲಿಡುವುದಾಗಿ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ.ವೆಂಕಟೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಎಸ್ ಎಲ್ ಸಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ವೈಯಕ್ತಿಕವಾಗಿ 10 ಲಕ್ಷ ರು.ಮೀಸಲಿಡುವುದಾಗಿ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ.ವೆಂಕಟೇಶ್ ಹೇಳಿದರು.ತಾಲೂಕು ಆಡಳಿತ ವತಿಯಿಂದ ಪಟ್ಟಣದ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನ್ಯಾಯ ಸಮ್ಮತವಾದ ಭಾರತದ ಸುಭದ್ರ ಸಂವಿಧಾನದ ಅಡಿಯಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದು, ಮೀಸಲು ಅನ್ವಯ ಇಂದು ಶಾಸಕರಾಗಿ ಈ ಜಾಗದಲ್ಲಿ ನಿಲ್ಲಲು ಸಾಧ್ಯವಾಗಿದೆ. ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆದ್ಯತೆ ನೀಡಿದ್ದು, ಹೊಸ ಶಾಲಾ ಕಾಲೇಜುಗಳ ನಿರ್ಮಾಣ, ಮೊರಾರ್ಜಿ ವಸತಿ ಶಾಲೆಗಳ ಮಂಜೂರಾತಿ, ಪಟ್ಟಣದ ಹೊರವಲಯಲ್ಲಿ ಬೈಪಾಸು ರಸ್ತೆ ನಿರ್ಮಾಣ ವಿಚಾರ ಸೇರಿದಂತೆ ರಸ್ತೆ, ಸಮುದಾಯ ಭವನ ಹಾಗೂ ಅರ್ಹರಿಗೆ ಸರ್ಕಾರದ ಸೌಲಭ್ಯ ವಿತರಿಸಿದ ಬಗ್ಗೆ ವಿವರಿಸಿ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.ತಹಸೀಲ್ದಾರ್ ವೈ ರವಿ, ತಾಪಂ ಇಒ ಮಧುಸೂದನ್, ಪುರಸಭಾ ಅಧ್ಯಕ್ಷರಾದ ಸುದೇಶ್ ಬಾಬು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಮಾಂಜಿನಪ್ಪ, ತುಮುಲ್ ನಿರ್ದೇಶಕರಾದ ಚಂದ್ರಶೇಖರ ರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ನರಸಿಂಹರೆಡ್ಡಿ,ಶಿವು.ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ್, ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ,ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಎಚ್.ವಿ. ರವಿ ಕುಮಾರ್,ವೃತ್ತ ನಿರೀಕ್ಷರಾದ ಸುರೇಶ್,ಗಿರೀಶ್, ಪುರಸಭೆ ಮಾಜಿ ಅಧ್ಯಕ್ಷರಾದ ಶಂಕರ್ ರೆಡ್ಡಿ,ವೇಲುರಾಜು, ಸದಸ್ಯರಾದ ಕಲ್ಪವೃಕ್ಷ ರವಿ,ಇನ್ನೂ ಅನೇಕ ಮಂದಿ ಗಣ್ಯರಿದ್ದರು. ಫೋಟೋ : ತಾಲೂಕು ಆಡಳಿತ ವತಿಯಿಂದ ಪಟ್ಟಣದ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದ ಶಾಸಕ ಎಚ್.ವಿ.ವೆಂಕಟೇಶ್ ಭಾಗವಹಿಸಿದ್ದರು.