10 ರು. ನೋಟು ಬೀಳಿಸಿ ಲಕ್ಷ ಕದ್ದು ಪರಾರಿ

| Published : Oct 10 2023, 01:00 AM IST

ಸಾರಾಂಶ

ಚನ್ನಪಟ್ಟಣ: 10 ರು. ನೋಟುಗಳನ್ನು ರಸ್ತೆಯಲ್ಲಿ ಬೀಳಿಸಿ ವ್ಯಕ್ತಿಯೊಬ್ಬರಿಂದ ಒಂದು ಲಕ್ಷ ಹಣ ದೋಚಿರುವ ಘಟನೆ ನಗರದ ಕೆನರಾ ಬ್ಯಾಂಕ್ ಬಳಿ ನಡೆದಿದ್ದು, ಕಳ್ಳರ ಕೈಚಳಕ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಗರದ ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಹಣ ಕಳೆದುಕೊಂಡವರು ಎನ್ನಲಾಗಿದೆ.
ಚನ್ನಪಟ್ಟಣ: 10 ರು. ನೋಟುಗಳನ್ನು ರಸ್ತೆಯಲ್ಲಿ ಬೀಳಿಸಿ ವ್ಯಕ್ತಿಯೊಬ್ಬರಿಂದ ಒಂದು ಲಕ್ಷ ಹಣ ದೋಚಿರುವ ಘಟನೆ ನಗರದ ಕೆನರಾ ಬ್ಯಾಂಕ್ ಬಳಿ ನಡೆದಿದ್ದು, ಕಳ್ಳರ ಕೈಚಳಕ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಗರದ ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಹಣ ಕಳೆದುಕೊಂಡವರು ಎನ್ನಲಾಗಿದೆ. ಕೆನರಾ ಬ್ಯಾಂಕ್‌ಗೆ ಬಂದ ರಾಘವೇಂದ್ರ ಬ್ಯಾಂಕ್‌ನಿಂದ ಒಂದು ಲಕ್ಷ ರು. ಡ್ರಾ ಮಾಡಿದ್ದಾರೆ. ಹಣವನ್ನು ಕವರ್‌ನಲ್ಲಿಟ್ಟುಕೊಂಡು ಬೈಕ್ ಬಳಿ ಬರುವಾಗ, ಅವರ ಬಳಿ ಬಂದ ಅಪರಿಚಿತ ವ್ಯಕ್ತಿ ಹತ್ತು ರು. ನೋಟುಗಳನ್ನು ರಸ್ತೆಯಲ್ಲಿ ಉದ್ದಕ್ಕೂ ಬೀಳಿಸಿ, ನಿಮ್ಮ ಹಣ ಬಿದ್ದಿದೆ ಎಂದು ರಾಘವೇಂದ್ರ ಅವರಿಗೆ ತೋರಿಸಿ, ಮುಂದೆ ಸಾಗಿದ್ದಾನೆ. ಹಣವಿದ್ದ ಕವರ್ ಅನ್ನು ರಾಘವೇಂದ್ರ ಬೈಕ್ ಮೇಲೆ ಇಟ್ಟು ರಸ್ತೆ ಮೇಲೆ ಬಿದ್ದಿದ್ದ 10 ರು. ನೋಟುಗಳನ್ನು ಎತ್ತಿಕೊಳ್ಳತೊಡಗಿದ್ದಾರೆ. ಇದೇ ವೇಳೆ ಬೈಕ್ ಬಳಿ ನಿಂತಿದ್ದ ಇನ್ನೊಬ್ಬ ವ್ಯಕ್ತಿ ಹಣವಿದ್ದ ಕವರ್ ಅನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಕಳ್ಳರ ಕೈಚಳಕ ಬ್ಯಾಂಕ್ ಬಳಿಯ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿದೆ.