ಅಂಡರ್ 18 ನ್ಯಾಷನಲ್ ಯೂಥ್ ಅಥ್ಲೆಟಿಕ್ಸ್ 100 ಮೀಟರ್ ಓಟದಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಪಿ.ಚಿರಂತ್ ಅವರನ್ನು ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅಂಡರ್ 18 ನ್ಯಾಷನಲ್ ಯೂಥ್ ಅಥ್ಲೆಟಿಕ್ಸ್ 100 ಮೀಟರ್ ಓಟದಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಪಿ.ಚಿರಂತ್ ರನ್ನು ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಅಭಿನಂದಿಸಿದರು.

ತಾಲೂಕಿನ ಬೆಳಗೊಳ ಗ್ರಾಮದ ಪ್ರಸನ್ನರ ಪುತ್ರ ಪಿ.ಚಿರಂತ್ ಎಂಬುವವರು ಅಂಡರ್ 18 ನ್ಯಾಷನಲ್ ಯೂಥ್ ಅಥ್ಲೆಟಿಕ್ಸ್ 2025ನಲ್ಲಿ 100 ಮೀಟರ್ ಓಟದಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿ ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

ಭಾನುವಾರ ಸಚ್ಚಿದಾನಂದ ಅವರು ಚಿರಂತ್ ಮನೆಗೆ ತೆರಳಿ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ, ಅಭಿನಂದಿಸಿದರು.

ಈ ವೇಳೆ ಬೆಳಗೊಳ ಗ್ರಾಮದ ಮಂಜಣ್ಣ, ಮಧುರ ಬಾಬು, ವಿಶ್ವ, ಪಾಪು, ಬಿ.ಸಿ ಕುಮಾರ್, ತಮ್ಮಯಣ್ಣರ ರವಿ, ಪ್ರಭ, ಹರೀಶ್, ಸಂತೋಷ್, ಹರ್ಷ, ನಾಗಣ್ಣ, ಶ್ರೀಧರ್ ಸೇರಿದಂತೆ ಇತರರು ಇದ್ದರು.

ಅಲ್ಟ್ರಾ ಸೈಕ್ಲಲಿಂಗ್‌ನಲ್ಲಿ ಅಭಿಷೇಕ್ ಕುಮಾರ್ ವಿಶ್ವದಾಖಲೆ

ಕಿಕ್ಕೇರಿ: ಅಲ್ಟ್ರಾ ಸೈಕ್ಲಲಿಂಗ್‌ನಲ್ಲಿ ಹೊಸಬೀದಿಯ ಕೆ.ಎನ್. ಸುಮಾ ಅವರ ಪತಿ ಅಭಿಷೇಕ್‌ಕುಮಾರ್‌ ಸಿಂಗ್ ವಿಶ್ವದಾಖಲೆ ಮಾಡಿ ಗ್ರಾಮದ ಕೀರ್ತಿಯನ್ನು ಮೆರೆದಿದ್ದಾರೆ.

ಯಾವುದೇ ಸಂಘ-ಸಂಸ್ಥೆಗಳ ಸಹಾಯವಿಲ್ಲದೆ 18ರಿಂದ 49ರ ವಯೋಮಾನದಲ್ಲಿ ಈಚೆಗೆ 5 ದಿನ 17 ಗಂಟೆ 47ನಿಮಿಷಗಳಲ್ಲಿ 2290 ಕಿ.ಮೀ.ದೂರವನ್ನು ಕ್ರಮಿಸಿ ಸಾಧನೆ ಮಾಡಿದ್ದಾರೆ. ಸರಾಸರಿ ಗಂಟೆಗೆ 16.62 ಕಿಮೀ ಕ್ರಮಿಸಿರುವುದು ಅದ್ಭುತ ಸಾಧನೆಯಾಗಿದೆ.

ಈ ಸಾಧನೆಯನ್ನು ಗುರುತಿಸಿ ವಿಶ್ವ ಅಲ್ಟ್ರಾ ಸೈಕ್ಲಿಸ್ಟ್‌ ಅಸೋಷಿಯೇಷನ್ ಪ್ರಮಾಣ ಪತ್ರ ನೀಡಿ ಪುರಸ್ಕರಿಸಿದೆ.

ಚನ್ನರಾಯಪಟ್ಟಣ, ರಾಮನಗರ, ಮಡಿಕೇರಿ, ಉಡುಪಿ, ಕಾರವಾರ, ಬೆಳಗಾಂ, ವಿಜಯಪುರ, ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆ, ಯಾದಗಿರಿ, ಹುಮ್ನಾಬಾದ್, ಮುಳುಬಾಗಿಲು, ಮಧುಗಿರಿ, ಬೆಂಗಳೂರು, ಕಲ್ಬುರ್ಗಿ ಮತ್ತಿತರ ಕ್ಷೇತ್ರಗಳನ್ನು ಬೈಸಿಕಲ್‌ನಲ್ಲಿ ಅತ್ಯಲ್ಪ ಅವಧಿಯಲ್ಲಿ ಕ್ರಮಿಸಿ ಸಾಧನೆ ಮಾಡಿದ್ದಾರೆ.