ಎಸ್ಸೆಸ್ಸೆಲ್ಸಿಯಲ್ಲಿ ಶೇ.100ರಷ್ಟು ಫಲಿತಾಂಶ, ಶಿಕ್ಷಕರಿಗೆ ಗೌರವ

| Published : Jul 17 2024, 12:45 AM IST

ಎಸ್ಸೆಸ್ಸೆಲ್ಸಿಯಲ್ಲಿ ಶೇ.100ರಷ್ಟು ಫಲಿತಾಂಶ, ಶಿಕ್ಷಕರಿಗೆ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್‌ ಹರಿಯುವ ನೀರಿನಂತೆ ಸದಾ ಕ್ರಿಯಾಶೀಲ ಚಟುವಟಿಕೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳ ಜೀವನದ ಭವ್ಯ ಭವಿಷ್ಯ ರೂಪಿಸುವ ಮಹಾಕಾರ್ಯ ಮಾಡುತ್ತಿರುವ ಶಿಕ್ಷಕರಿಗೆ ಸನ್ಮಾನಿಸಿ ಅವರಿಗೆ ಇನ್ನೂ ಹೆಚ್ಚು ಪ್ರೋತ್ಸಾಹ ನೀಡುವ ಕಾರ್ಯ ಮಾಡಿದೆ.

ಧಾರವಾಡ:

ದೇಶದ ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಭಾಷೆಯಾದ ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾದ ಗುರುತರ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹಾಂತೇಶ ನರೇಗಲ್ಲ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿ. ಮೋಹನ ನಾಗಮ್ಮನವರ ದತ್ತಿ ಹಾಗೂ ಸುದರ್ಶನರಾಜ ಫೌಂಡೇಶನ್ ದತ್ತಿ ಅಂಗವಾಗಿ ಸಾಧನಕೇರಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100ರಷ್ಟು ಸಾಧನೆ ಮಾಡಿದ ಶಾಲೆಯ ಶಿಕ್ಷಕರಿಗೆ ಸನ್ಮಾನ ಹಾಗೂ ಉಪನ್ಯಾಸದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜತೆಗೆ ಹಿಂದಿ, ಇಂಗ್ಲಿಷ್‌ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕನ್ನಡ ಸಾಹಿತ್ಯ ಪರಿಷತ್‌ ಹರಿಯುವ ನೀರಿನಂತೆ ಸದಾ ಕ್ರಿಯಾಶೀಲ ಚಟುವಟಿಕೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳ ಜೀವನದ ಭವ್ಯ ಭವಿಷ್ಯ ರೂಪಿಸುವ ಮಹಾಕಾರ್ಯ ಮಾಡುತ್ತಿರುವ ಶಿಕ್ಷಕರಿಗೆ ಸನ್ಮಾನಿಸಿ ಅವರಿಗೆ ಇನ್ನೂ ಹೆಚ್ಚು ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.

ಮುಖ್ಯೋಪಾಧ್ಯಾಯ ಸುರೇಶ ಸನದಿ ಮಾತನಾಡಿ, ಬಹುತೇಕ ಗ್ರಾಮೀಣ ಮಕ್ಕಳೇ ಕಲಿಯುತ್ತಿರುವ ಈ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭ ಆದಾಗಿನಿಂದ 10 ವರ್ಷಗಳಲ್ಲಿ 8 ಬಾರಿ ನೂರಕ್ಕೆ ನೂರು ಫಲಿತಾಂಶ ಪಡೆದಿದೆ. ಈಗ ಸತತ ನಾಲ್ಕು ವರ್ಷ ನೂರಕ್ಕೆ ನೂರು ಹಾಗೂ ಹತ್ತು ವರ್ಷ ಸತತ ''''''''ಎ'''''''' ಗ್ರೇಡ್ ಫಲಿತಾಂಶ ಪಡೆದು ಜಿಲ್ಲೆಯಲ್ಲಿಯೇ ವಿಶೇಷ ಸಾಧನೆ ಮಾಡಿದೆ. ಈ ಸಾಧನೆಯನ್ನು ಕಸಾಪ ಗುರಿತಿಸಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕ ಡಾ. ಶಿವಾನಂದ ಕಲ್ಲೂರ ''''''''ಕನ್ನಡ ಭಾಷಾ ವ್ಯಾಕರಣ'''''''' ಕುರಿತು ಉಪನ್ಯಾಸ ನೀಡಿದರು. ಬಹುಮುಖ ಪ್ರತಿಭೆಯ ನಿವೃತ್ತ ಶಿಕ್ಷಕಿ ಪ್ರಮೀಳಾ ಜಕ್ಕಣ್ಣವರ ಕನ್ನಡ ನಾಡು-ನುಡಿಯ ಗೀತೆಗಳನ್ನು ಪ್ರಸ್ತುತಪಡಿಸಿದರು. ಪತ್ರಕರ್ತ ಸಿ.ವೈ. ಲಗಮಣ್ಣವರ, ಸನ್ಮಾನಿತ ಶಿಕ್ಷಕರ ಪರವಾಗಿ ರಾಜೇಶ ಚವ್ಹಾಣ, ಮಾರ್ತಾಂಡಪ್ಪ ಕತ್ತಿ ಮಾತನಾಡಿದರು. ಶಿಕ್ಷಕರಾದ ಸುದರ್ಶನ ಪಾಟೀಲ, ಶ್ರೀದೇವಿ ಮಣ್ಣೂರ, ಶ್ರೀದೇವಿ ಹಟ್ಟಿಕರ, ರಾಜೇಶ ಚವ್ಹಾಣ, ನೀತಾ ಶಿಂಗೆ, ಪಿ. ಸಂಜೋತಾ ಹಾಗೂ ಗಂಗಾಧರ ಹಿರೇಮಠ ಅವರನ್ನು ಗೌರವಿಸಲಾಯಿತು. ಸುದರ್ಶನ ಪಾಟೀಲ ಸ್ವಾಗತಿಸಿದರು, ಗೀತಾ ಚನಗೊಂಡ ನಿರೂಪಿಸಿದರು ವಂದಿಸಿದರು.