ಸಾರಾಂಶ
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಪಾಟೀಲ ಆಕ್ಸಫರ್ಡ್ ಪಿಯು ಸೈನ್ಸ್ ಕಾಲೇಜಿನ 2023-24ನೇ ಸಾಲಿನ ಪಿಯುಸಿ ಪರೀಕ್ಷಾ ಫಲಿತಾಂಶ ನೂರಕ್ಕೆ ನೂರರಷ್ಟಾಗಿದೆ.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳತಾಲೂಕಿನ ನಾಗರಬೆಟ್ಟ ಪಾಟೀಲ ಆಕ್ಸಫರ್ಡ್ ಪಿಯು ಸೈನ್ಸ್ ಕಾಲೇಜಿನ 2023-24ನೇ ಸಾಲಿನ ಪಿಯುಸಿ ಪರೀಕ್ಷಾ ಫಲಿತಾಂಶ ನೂರಕ್ಕೆ ನೂರರಷ್ಟಾಗಿದೆ.
ಅಮೃತಗೌಡ ಬಿರಾದಾರ ಹಾಗೂ ಆನಂದ ಶಂಕರಲಿಂಗಪ್ಪ 590 (ಪ್ರಥಮ). ಸಿದ್ರಾಮೇಶ ಢವಳಗಿ ಹಾಗೂ ಶ್ವೇತಾ ಆನಂದ ವಜ್ಜರಮಟ್ಟಿ 588 (ದ್ವೀತಿಯ), ಪೂಜಾ ಪಟ್ಟೇದ ಹಾಗೂ ರಾಧಿಕಾ ತಿಳ್ಳಿಹಾಳ 587 (ತೃತೀಯ). ಶಂಕರಗೌಡ ದೇಸಾಯಿ, ಪ್ರಿಯಾಂಕ ಎಸ್.ನಾಯಕ, ಸೃಷ್ಟಿ ಶಿವಪ್ಪ ಸೊಕನದಗಿ, ಖುಷಿ ಪೂಜಾರಿ 585 ಅಂಕ, ಚೈತ್ರಾ ರತ್ತಾಳ, ದೇವಾ ರೆಡ್ಡಿ, ರಾಘವಿ ಸಕ್ಕರಿ 584 ಅಂಕ ಪಡೆದುಕೊಂಡಿದ್ದಾರೆ.732 ವಿದ್ಯಾರ್ಥಿಗಳು ಪಿಸಿಎಂಬಿ ಯಲ್ಲಿ ಶೇ.90ಕ್ಕಿಂತ ಹೆಚ್ಚು ಜನ ವಿದ್ಯಾರ್ಥಿಗಳು ಅಂಕ ಪಡೆದುಕೊಂಡಿದ್ದರೇ, 586 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 317 ವಿದ್ಯಾರ್ಥಿಗಳು ಪ್ರಥಮ ದರ್ಜೆ ಸ್ಥಾನ ಪಡೆದುಕೊಂಡಿದ್ದಾರೆ. ಅದರಂತೆ ಕನ್ನಡದಲ್ಲಿ 8 ಭೌತಶಾಸ್ತ್ರದಲ್ಲಿ 57, ರಸಾಯನಶಾಸ್ತ್ರದಲ್ಲಿ 9, ಗಣಿತದಲ್ಲಿ 106, ಗಣಿತ ವಿಜ್ಞಾನದಲ್ಲಿ 02, ಜೀವಶಾಸ್ತ್ರದಲ್ಲಿ 170 ಸೇರಿದಂತೆ ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಫಲಿತಾಂಶಗೊಳ್ಳಲು ಶ್ರಮಿಸಿದ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಶಿಕ್ಷಕ ಸಿಬ್ಬಂದಿಗೆ ಶಾಲಾ ಆಡಳಿತ ಮಂಡಳಿಯ ಚೇರಮನ್ ಎಂ.ಎಸ್.ಪಾಟೀಲ ಹಾಗೂ ಉಸ್ತುವಾರಿ ಮೇಲ್ವಿಚಾರಕ ಅಮೀತಗೌಡ ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.