ತರೀಕೆರೆ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಗೆ ಶೇ.100 ರಷ್ಟು ಫಲಿತಾಂಶ

| Published : May 10 2024, 11:45 PM IST

ಸಾರಾಂಶ

ತರೀಕೆರೆ, ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಗೆ ೨೦೨೩-೨೪ನೇ ಸಾಲಿನ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ ೧೦೦ ಫಲಿತಾಂಶ ಬಂದಿದ್ದು, ಸತತವಾಗಿ ಶೇ ೧೦೦ ಸಾಧನೆ ಗೈದ ಈ ಶಾಲೆ ಒಟ್ಟು ೪೦ ವಿದ್ಯಾರ್ಥಿಗಳಲ್ಲಿ ೧೪ ವಿದ್ಯಾರ್ಥಿಗಳು ಅತ್ಯುನ್ನತ (ಡಿಸ್ಟಿಂಕ್ಷನ್) ಶ್ರೇಣಿಯನ್ನು, ೨೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ೪ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಕೀರ್ತಿ ತಂದಿದ್ದಾರೆ

ಡಿ.ಮೋನಿಷಾ 619 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಗೆ ೨೦೨೩-೨೪ನೇ ಸಾಲಿನ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ ೧೦೦ ಫಲಿತಾಂಶ ಬಂದಿದ್ದು, ಸತತವಾಗಿ ಶೇ ೧೦೦ ಸಾಧನೆ ಗೈದ ಈ ಶಾಲೆ ಒಟ್ಟು ೪೦ ವಿದ್ಯಾರ್ಥಿಗಳಲ್ಲಿ ೧೪ ವಿದ್ಯಾರ್ಥಿಗಳು ಅತ್ಯುನ್ನತ (ಡಿಸ್ಟಿಂಕ್ಷನ್) ಶ್ರೇಣಿಯನ್ನು, ೨೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ೪ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಕೀರ್ತಿ ತಂದಿದ್ದಾರೆ.

ತರೀಕೆರೆ ಪಟ್ಟಣದ ಇದೇ ಶಾಲೆಯಲ್ಲಿ ಶಾಲಾ ವಾಹನ ಚಾಲಕರಾದ ದರ್ಶನ್ ಟಿ.ವೈ ಮತ್ತು ರೋಹಿಣಿ ದಂಪತಿ ಪುತ್ರಿ ಮೋನಿಷಾ ಡಿ ರವರು ೬೨೫ಕ್ಕೆ ೬೧೯ ಅಂಕ ಗಳಿಸಿ ಕನ್ನಡ ೧೨೫ಕ್ಕೆ ೧೨೪ ಅಂಕ, ಆಂಗ್ಲ ೯೯, ಹಿಂದಿ ೧೦೦, ಗಣಿತ ೧೦೦, ವಿಜ್ಞಾನ ೯೬, ಸಮಾಜ ವಿಜ್ಞಾನ ೧೦೦ ಅಂಕಗಳನ್ನು ಪಡೆದು ಶಾಲೆ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಪಟ್ಟಣದ ಕಟ್ಟಡ ಗುತ್ತಿಗೆದಾರರಾದ ಬುರ‍್ಹಾನ್ ಅಹಮ್ಮದ್ ಬೇಗ್ ಮತ್ತು ರಾಬಿಯಾ ತಸ್ನೀಮ್ ದಂಪತಿ ಪುತ್ರಿ ಫಾತಿಮಾ ರಿದಾ ೬೨೫ಕ್ಕೆ ೬೦೫ ಅಂಕ ಕನ್ನಡ ೧೨೨, ಆಂಗ್ಲ ೯೭, ಹಿಂದಿ ೯೯, ಗಣಿತ ೯೩, ವಿಜ್ಞಾನ ೯೮, ಸಮಾಜ ವಿಜ್ಞಾನ ೯೬ ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾದಿಕೆರೆ ಗ್ರಾಮ ಕೃಷಿಕ ಎಚ್. ಎನ್. ಲವಕುಮಾರ್ ಮತ್ತು ಹೇಮ ದಂಪತಿ ಪುತ್ರಿ ಕವನ ಎಚ್. ಎಲ್ ೬೨೫ಕ್ಕೆ ೬೦೩ ಅಂಕ ಕನ್ನಡ ೧೨೦, ಆಂಗ್ಲ ೯೭, ಹಿಂದಿ ೯೫, ಗಣಿತ ೯೮, ವಿಜ್ಞಾನ ೯೭, ಸಮಾಜ ವಿಜ್ಞಾನ ೯೬ ಅಂಕಗಳನ್ನು ಮತ್ತು ಕುಂಟಿನ ಮಡು ಗ್ರಾಮದ ಕೃಷಿಕ ಮೋಹನ್ ಕುಮಾರ್ ಕೆ. ಆರ್ ಮತ್ತು ಮಂಜುಳ ಎಚ್.ಬಿ ದಂಪತಿ ಪುತ್ರಿ ನಿಶ್ಚಿತಾ ಕೆ. ಎಂ ೬೨೫ಕ್ಕೆ ೬೦೩ ಅಂಕ ಕನ್ನಡ ೧೨೧, ಆಂಗ್ಲ ೯೮, ಹಿಂದಿ ೯೬, ಗಣಿತ ೯೩, ವಿಜ್ಞಾನ ೯೫, ಸಮಾಜ ವಿಜ್ಞಾನ ೧೦೦ ಅಂಕಗಳನ್ನು ಗಳಿಸಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.ಶಾಲೆ ಶೇ. ನೂರು ಫಲಿತಾಂಶ ಗಳಿಸಲು ಕಾರಣರಾದ ಶಾಲಾ ಶಿಕ್ಷಕರಿಗೆ, ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಟಿ. ಜಿ. ಶಶಾಂಕ, ಶಾಲಾ ಮುಖ್ಯಶಿಕ್ಷಕ ಎಂ. ಪಿ ಪ್ರಶಾಂತ್‌ ಹಾಗೂ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಕಾರ್ತಿಕೇಯನ್ ಅಭಿನಂದಿಸಿದ್ದಾರೆ.

10ಕೆಟಿಆರ್.ಕೆ.1ಃ ಡಿ.ಮೋನಿಷಾ10ಕೆಟಿಆರ್.ಕೆ.2ಃ ಫಾತಿಮಾ ರಿದಾ 10ಕೆಟಿಆರ್.ಕೆ.3ಃ ಕವನ ಎಚ್. ಎಲ್10ಕೆಟಿಆರ್.ಕೆ.4ಃನಿಶ್ಚಿತಾ ಕೆ. ಎಂ