ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಸಮೀಕ್ಷಾ ಕಾರ್ಯವು ಮುಖ್ಯವಾದ ಘಟ್ಟ ತಲುಪಿದೆ, ಪ್ರಸಕ್ತ ಸಾಲಿನಲ್ಲಿ ಒಟ್ಟು ೩,೫೩,೮೦೬ ಕುಟುಂಬಗಳು ಇರುವುದಾಗಿ ಅಂದಾಜಿಸಲಾಗಿದೆ. ಈ ಪೈಕಿ ೩,೪೨,೧೫೬ ಕುಟುಂಬಗಳ ಸಮೀಕ್ಷೆಯಾಗಿದ್ದು, ಶೇ.೯೬.೭೧ರಷ್ಟು ಸಾಧನೆ ಮಾಡಲಾಗಿದೆ, ಸಮೀಕ್ಷೆಗೆ ಇನ್ನು ಉಳಿದಿರುವ ಕಾಲವಕಾಶದಲ್ಲಿ ಶೇ.೧೦೦ರಷ್ಟು ಸಾಧನೆ ಮಾಡುವ ವಿಶ್ವಾಸ ಇರುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಂಗದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೨೦೧೧ರ ನಂತರದಲ್ಲಿ ಅಂದಾಜಿಸಲಾಗಿರುವ ಮನೆ ಮನೆಯ ಸಮೀಕ್ಷೆಯಾಗಿದೆ, ಪರಿಶಿಷ್ಟ ಜಾತಿಯ ೧,೧೦.೨೭೩ ಕುಟುಂಬದ ಪೈಕಿ ೯೮೭೫೩ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಶೇ.೮೯.೫೫ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಕೋಲಾರ, ಬಂಗಾರಪೇಟೆ, ಕೆಜಿಎಫ್ ಬಾಕಿಇತರೆ ಕುಟುಂಬಗಳು ೨,೫೨,೦೯೯ ಕುಟುಂಗಳು ಸಮೀಕ್ಷೆ ಕಾರ್ಯದಲ್ಲಿ ಒಟ್ಟು ೨,೪೪,೪೬೬ ಕುಟುಂಬಗಳ ಸಮೀಕ್ಷೆ ಮುಗಿದಿದ್ದು ಶೇ.೧೦೧ರಷ್ಟು ಸಾಧನೆಯಾಗಿದೆ. ಒಂದು ಕುಟುಂಬದಲ್ಲಿ ೪ ರಿಂದ ೬ ಮಂದಿ ಇರುತ್ತಾರೆ ಎಂದು ಅಂದಾಜಿಸಿದ್ದು ಉಳಿದಿರುವ ಮೇ ೨೩ ರಿಂದ ೨೫ರ ವರೆಗೆ ಅಂದರೆ ೩ ದಿನ ಸಮೀಕ್ಷೆ ಕಾರ್ಯದಲ್ಲಿ ಪೂರ್ಣಗೊಳಿಸಲು ಯಾವುದೇ ರೀತಿ ಆಡಚಣೆಯಾಗಲಾಗದು. ಕೋಲಾರ, ಬಂಗಾರಪೇಟೆ, ಕೆಜಿಎಫ್‌ಗಳಲ್ಲಿ ಸಮೀಕ್ಷೆ ಕಾರ್ಯ ಬಾಕಿ ಉಳಿದಿದ್ದು ಸಮೀಕ್ಷೆ ಸಿಬ್ಬಂದಿಗಳಿಗೆ ೨ ದಿನದಲ್ಲಿ ಪೂರ್ಣಗೊಳಿಸಿ ನಿಖರವಾದ ದತ್ತಾಂಶ ಸಲ್ಲಿಸಲು ಸೂಚಿಸಲಾಗಿದೆ ಹಾಗಾಗಿ ಮೇ ೨೫ಕ್ಕೆ ಶೇ.೧೦೦ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದರು.
ಸಮೀಕ್ಷಾ ತಂಡವು ಮನೆ, ಮನೆ ಭೇಟಿ ಸಂದರ್ಭಧಲ್ಲಿ ಕೆಲವು ಕುಟುಂಬಗಳು ಮನೆಗೆ ಬೀಗ ಹಾಕಿರಬಹುದು, ಅವರಿಗೆಲ್ಲಾ ವಿಶೇಷ ಶಿಬಿರಗಳಿಗೆ ತೆರಳಿ ಮಾಹಿತಿ ನೀಡಬಹುದಾಗಿದೆ, ಆನ್‌ಲೈನ್‌ನಲ್ಲೂ ಅವಕಾಶವಿದೆ, ಈ ಹಿಂದೆ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು ಈಗ ಹೊಸದಾಗಿ ಕೆಲವು ಮಾರ್ಪಾಡುಗಳಾದ ನಂತರ ಸಮಸ್ಯೆಗಳು ಬಗೆ ಹರಿದಿದೆ ಎಂದರು. ನಿಗದಿತ ಅವಧಿಯಲ್ಲಿ ಪೂರ್ಣಪ್ರತಿದಿನ ಒಂದೊಂದು ತಂಡವು ೧೨೦ ರಿಂದ ೧೫೦-೧೬೦ ಮನೆಗಳ ಸಮೀಕ್ಷೆ ಕಾರ್ಯಗಳು ಮಾಡುತ್ತಿರುವುದು ಯಾವೂದೇ ರೀತಿ ಸಮಯ ವ್ಯರ್ಥ ಮಾಡದೆ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು. ಕೋಲಾರದಲ್ಲಿ ಅಂದಾಜು ಒಟ್ಟು ೮೭,೧೩೩ ಕುಟುಂಬಗಳಿದ್ದು ಶೇ.೭೭.೫೦ ರಷ್ಟು ಸಮೀಕ್ಷಾ ಕಾರ್ಯವಾಗಿದೆ. ಕೆ.ಜಿ.ಎಫ್. ೬೪,೬೪೯ ಕುಟುಂಬಗಳ ಪೈಕಿ ೮೦.೧೭ರಷ್ಟು ಸಮೀಕ್ಷೆಯಾಗಿದೆ. ಮುಳಬಾಗಿಲಿನಲ್ಲಿ ಸಮೀಕ್ಷೆ ನಡೆಸಿರುವ ೫೭,೮೮೭ ಕುಟುಂಬಗಳಿಗಿಂತ ಹೆಚ್ಚುವರಿಯಾಗಿ ೧೦೯.೮೧ರಷ್ಟು ಸಮೀಕ್ಷೆ ಕಾರ್ಯವಾಗಿದೆ ಎಂದರು.
ಮಾಲೂರಿನಲ್ಲಿ ೫೫೧೮೭ ಕುಟುಂಬಗಳ ಪೈಕಿ ೯೬.೪೬ ರಷ್ಟು ಸಾಧನೆ ಮಾಡಲಾಗಿದೆ. ಶ್ರೀನಿವಾಸಪುರದಲ್ಲಿ ೪೫೯೯೫ ಕುಟುಂಬಗಳಿದ್ದು ಶೇ ೧೩೨.೯೨ರಷ್ಟೆ ಸಾಧನೆ ಮಾಡಿದೆ. ಬಂಗಾರಪೇಟೆಯಲ್ಲಿ ೪೩,೨೫೧ ಕುಟುಂಬಗಳನ್ನು ಅಂದಾಜಿಸಿದೆ ಆದರೆ ಸಮೀಕ್ಷೆ ಕಾರ್ಯದಲ್ಲಿ ೧೨೫.೭೬ ರಷ್ಟು ಪ್ರಗತಿ ಸಾಧಿಸಿದೆ.ಜಿಲ್ಲೆಯಲ್ಲಿ 89.55ರಷ್ಟು ಸಮೀಕ್ಷೆ
ಪರಿಶಿಷ್ಟ ಜಾತಿಯಲ್ಲಿ ೨೦೨೫ರ ಅಂದಾಜು ಪ್ರಕಾರ ಕೋಲಾರ ಜಿಲ್ಲೆಯಲ್ಲಿ ೧೧೦೨೭೩ ಕುಟುಂಬಗಳ ಪೈಕಿ ೯೮,೭೫೩ ಕುಟುಂಬಗಳ ಸಮೀಕ್ಷೆಯಾಗಿದ್ದು ಶೇ ೮೯.೫೫ರಷ್ಟಾಗಿದೆ. ಇತರೆ ಜಾತಿಗಳ ಕುಟುಂಬಗಳು ೨,೪೬,೯೪೧ ಇದ್ದು, ಈ ಪೈಕಿ ೨೫೩೨೯೮ ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು ಶೇ.೧೦೨.೫೭ ರಷ್ಟು ಪ್ರಗತಿ ಸಾಧಿಸಿದೆ ಎಂದರು. ಈ ಸಂದರ್ಭದಲ್ಲಿ ಎಡಿಸಿ ಮಂಗಳಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀನಿವಾಸ್ ಇದ್ದರು.