ನರಸಿಂಹರಾಜಪುರಜನ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜಯಂತಿ ಅಂಗವಾಗಿ ದೆಹಲಿಯಲ್ಲಿ ಮೇ 24 ರಂದು ನಡೆಯುವ ಬುಡಕಟ್ಟು ಸಾಂಸ್ಕೃತಿಕ ಸಭೆಗೆ ಚಿಕ್ಕಮಗಳೂರು ಜಿಲ್ಲೆಯಿಂದ 100ಕ್ಕೂ ಹೆಚ್ಚು ಗಿರಿಜನರು ಭಾಗವಹಿಸಲಿದ್ದಾರೆ ಎಂದು ಗಿರಿಜನ ಸುರಕ್ಷಾ ವೇದಿಕೆ ಜಿಲ್ಲಾ ಸಂಯೋಜಕ ಜಯರಾಂ ದಬ್ಬುಗುಣಿ ತಿಳಿಸಿದ್ದಾರೆ.
ಗಿರಿಜನ ಸುರಕ್ಷಾ ವೇದಿಕೆ ಜಿಲ್ಲಾ ಸಂಯೋಜಕ ಜಯರಾಂ ದಬ್ಬುಗುಣಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಜನ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜಯಂತಿ ಅಂಗವಾಗಿ ದೆಹಲಿಯಲ್ಲಿ ಮೇ 24 ರಂದು ನಡೆಯುವ ಬುಡಕಟ್ಟು ಸಾಂಸ್ಕೃತಿಕ ಸಭೆಗೆ ಚಿಕ್ಕಮಗಳೂರು ಜಿಲ್ಲೆಯಿಂದ 100ಕ್ಕೂ ಹೆಚ್ಚು ಗಿರಿಜನರು ಭಾಗವಹಿಸಲಿದ್ದಾರೆ ಎಂದು ಗಿರಿಜನ ಸುರಕ್ಷಾ ವೇದಿಕೆ ಜಿಲ್ಲಾ ಸಂಯೋಜಕ ಜಯರಾಂ ದಬ್ಬುಗುಣಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿ, ಮೇ 24 ರ ಭಾನುವಾರ ದೆಹಲಿ ಕೆಂಪು ಕೋಟೆ ಮೈದಾನದಲ್ಲಿ ಬುಡಕಟ್ಟು ಸಾಂಸ್ಕೃತಿಕ ಸಭೆ ನಡೆಯಲಿದೆ. ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಷಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಐತಿಹಾಸಿಕ ಸಭೆ ಯಲ್ಲಿ ದೇಶದ ಗಿರಿಜನರ 500 ವಿವಿಧ ಪಂಗಡಗಳ 1.50 ಲಕ್ಷದಿಂದ 2 ಲಕ್ಷ ಗಿರಿಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯದಿಂದ ಅಂದಾಜು 1220 ಗಿರಿಜನರು ಭಾಗವಹಿಸಿದ್ದಾರೆ. ದೇಶದ ವಿವಿಧ ಕಡೆಯಿಂದ 47 ರೈಲುಗಳಲ್ಲಿ ಗಿರಿಜನರು ದೆಹಲಿಗೆ ಆಗಮಿಸಲಿದ್ದಾರೆ ಎಂದುತಿಳಿಸಿದ್ದಾರೆ.ಬೃಹತ್ ಶೋಭಾ ಯಾತ್ರೆಯೇ ಬುಡಕಟ್ಟು ಸಾಂಸ್ಕೃತಿಕ ಸಭೆ ಪ್ರಮುಖ ಆಕರ್ಷಣೆ. ಶೋಭಾ ಯಾತ್ರೆ ದೆಹಲಿಯ 5 ವಿಭಿನ್ನ ಸ್ಥಳದಿಂದ ಏಕಕಾಲಕ್ಕೆ ಹೊರಟು ಕೆಂಪು ಕೋಟೆ ಮೈದಾನದಲ್ಲಿ ಒಂದಾಗಲಿದೆ. ಶೋಭಾ ಯಾತ್ರೆಯಲ್ಲಿ ಗಿರಿಜನರು ತಮ್ಮದೇ ಆದ ಉಡುಗೆ ತೊಡುಗೆ, ವಾದ್ಯಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ. ನಂತರ ನಡೆವ ಸಭಾ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯ ಗಳಿಂದ ಆಗಮಿಸಿದ ಗಿರಿಜನರ ಪ್ರತಿನಿಧಿಗಳು ತಮ್ಮ ವಿಷಯ ಮಂಡನೆ ಮಾಡಲಿದ್ದಾರೆ. ವನವಾಸಿ, ಗ್ರಾಮ ವಾಸಿ, ನಗರ ವಾಸಿಗಳಾದ ನಾವೆಲ್ಲರೂ ಭಾರತ ವಾಸಿಗಳು. ನಮ್ಮಲ್ಲೆರ ರಕ್ತ ಒಂದೇ ಎಂಬ ಸಂದೇಶ ಸಾರುವುದೇ ಸಾಂಸ್ಕೃತಿಕ ಸಮಾ ವೇಶದ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಪ್ರದರ್ಶನ, ಪಾರಂಪಾರಿಕ ವಸ್ತುಗಳ ಪ್ರದರ್ಶನ,ಸಮುದಾಯದ ಒಗ್ಗಟ್ಟು ಪ್ರದರ್ಶನ ಮಾಡಲಿದ್ದೇವೆ ಎಂದು ವಿವರಿಸಿದ್ದಾರೆ.