1008 ಶ್ರೀಪಾರ್ಶ್ವನಾಥ ತೀರ್ಥಂಕರರ 28ನೇ ವರ್ಷದ ವಾರ್ಷಿಕ ಮಹೋತ್ಸವ

| Published : May 06 2025, 12:15 AM IST

1008 ಶ್ರೀಪಾರ್ಶ್ವನಾಥ ತೀರ್ಥಂಕರರ 28ನೇ ವರ್ಷದ ವಾರ್ಷಿಕ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು, ಬೆಂಗಳೂರು, ಮಂಡ್ಯ, ಬೆಳ್ಳೂರು, ಹಾಸನ, ಸಾಲಿಗ್ರಾಮ ಮೊದಲಾದ ಕಡೆಗಳಿಂದ ಬಂದಿದ್ದ 500ಕ್ಕೂ ಹೆಚ್ಚು ಭಕ್ತಾದಿಗಳು ಜೈನ ತೀರ್ಥಂಕರ ಪಾಶ್ವಾನಾಥರಿಗೆ ಮತ್ತು ಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಪ್ರಮುಖ ಜಿನಕ್ಷೇತ್ರ ಹೊಸ ಹೊಳಲಿನಲ್ಲಿ 1008 ಶ್ರೀಪಾರ್ಶ್ವನಾಥ ತೀರ್ಥಂಕರರ ಮತ್ತು ಮಾತೆ ಪದ್ಮಾವತಿ ಅಮ್ಮನವರ 28ನೇ ವರ್ಷದ ವಾರ್ಷಿಕ ಮಹೋತ್ಸವ ಭಕ್ತಿ ಸಂಭ್ರಮದಿಂದ ನೆರವೇರಿತು.

ವಾರ್ಷಿಕ ಮಹೋತ್ಸವದ ಅಂಗವಾಗಿ ಗ್ರಾಮದ ಪಾಶ್ವನಾರ್ಥರ ಜಿನ ಬಸದಿ ಆವರಣದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಮೈಸೂರು, ಬೆಂಗಳೂರು, ಮಂಡ್ಯ, ಬೆಳ್ಳೂರು, ಹಾಸನ, ಸಾಲಿಗ್ರಾಮ ಮೊದಲಾದ ಕಡೆಗಳಿಂದ ಬಂದಿದ್ದ 500ಕ್ಕೂ ಹೆಚ್ಚು ಭಕ್ತಾದಿಗಳು ಜೈನ ತೀರ್ಥಂಕರ ಪಾಶ್ವಾನಾಥರಿಗೆ ಮತ್ತು ಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ನಮನ ಸಲ್ಲಿಸಿದರು. ಗ್ರಾಮಸ್ಥರು ಜೈನ ಪರಿವಾರದ ಪೂಜಾ ಕೈಂಕರ್ಯಗಳಿಗೆ ಕೈಜೋಡಿಸಿ ಸಹಕಾರ ನೀಡಿದರು.

1008 ಶ್ರೀಪಾರ್ಶ್ವನಾಥರ ಮತ್ತು ತಾಯಿ ಪದ್ಮಾವತಿ ದೇವಿ ಅಲಂಕೃತ ಉತ್ಸವ ಮೂರ್ತಿಗಳನ್ನು ವಿಶೇಷ ಮಂಟಪದಲ್ಲಿಟ್ಟು ಭಕ್ತರು ಹೆಗಲ ಮೇಲೆ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಉತ್ಸವ ನಡೆಸಿದರು. ಗ್ರಾಮದ ಜನ ಉತ್ಸವ ಮೂರ್ತಿಗೆ ಸಂಭ್ರಮದ ಸ್ವಾಗತ ನೀಡಿ ಜಯಘೋಷ ಮೊಳಗಿಸಿದರು.

ಕೇಂದ್ರ ಕಸಾಪ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪದ್ಮಿನಿ ನಾಗರಾಜು ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ ವಿವರಿಸಿದರು. ಜಗತ್ತು ಇಂದು ಹಿಂಸೆಯಿಂದ ನಲುಗುತ್ತಿದೆ. ಪ್ರತಿನಿತ್ಯ ಜಗತ್ತಿನ ವಿವಿಧ ಭಾಗಗಳಲ್ಲಿ ರಕ್ತಪಾತ ನಡೆಯುತ್ತಿದೆ. ಮಾನವ ಕುಲ ಹಿಂಸಾವಾದಿಗಳ ದಾಳಿಗೆ ಸಿಕ್ಕಿ ನಲುಗುತ್ತಿದೆ. ಜಗತ್ತಿಗೆ ಅಹಿಂಸೆಯ ದಾರಿ ತೋರಿದ ಭಾರತವೂ ರಕ್ತಸಿಕ್ತಗೊಳ್ಳುತ್ತಿದೆ.

ಅಹಿಂಸೆಯೇ ನಿಜವಾದ ಮಾನವ ಧರ್ಮ ಎಂದು ಸಾರಿದ ಜೈನ ಧರ್ಮದ ಸಾರದಿಂದ ನಾವು ವಿಮುಕರಾಗಿದ್ದೆ ಇದಕ್ಕೆ ಮುಖ್ಯ ಕಾರಣ ಎಂದರು.

ಜೈನ ಧರ್ಮ ವಿಶ್ವದ ಸರ್ವಶ್ರೇಷ್ಠ ಧರ್ಮ. ಆದಿ ತೀರ್ಥಂಕರ ವೃಷಭದೇವನಿಂದ ಹಿಡಿದು 24 ನೇ ತೀಥಂಕರ ಮಹಾ ವೀರರವರೆಗೆ 24 ಜನ ತೀರ್ಥಂಕರ ಸಮಷ್ಠಿ ಪ್ರಜ್ಞೆಯಿಂದ ರೂಪಿತಗೊಂಡಿರುವ ಧರ್ಮ. ಮಾನವ ಕುಲಕ್ಕೆ ಮಾರ್ಗದರ್ಶಿಯಾಗಿರುವ ಜಿನ ಧರ್ಮವನ್ನು ಪಾಲಿಸಿದರೆ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಈ ವೇಳೆ ದೇವಸ್ಥಾನದ ಟ್ರಸ್ಟಿಗಳಾದ ಸೂರಜ್ ಜೈನ್, ಶಿಕ್ಷಕ ವಜ್ರಪ್ರಾಸದ್ ದೇವಸ್ಥಾನದ ಪುರೋಹಿತ ಅಧಿರಾಜಯ್ಯ, ಪುರಸಭಾ ಸದಸ್ಯರಾದ ಎಚ್.ಆರ್.ಲೋಕೇಶ್, ಡಾ.ಶ್ರೀನಿವಾಸ್ ಶೆಟ್ಟಿ, ಶ್ರೀಮತಿ ಶುಭಾ ನಾಗರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.